ದೇಶ

ಪ್ರಧಾನಿ ಮೋದಿ ನೋಟು ನಿಷೇಧಕ್ಕೆ ಶೇ.81ರಷ್ಟು ಬೆಂಬಲ

ದೇಶದಲ್ಲಿ 500 ಮತ್ತು 1000 ಮುಖ ಬೆಲೆಯ ನೋಟುಗಳು ನಿಷೇಧಗೊಂಡು ನವೆಂಬರ್ 8ಕ್ಕೆ ಒಂದು ವರ್ಷ ಕಳೆದಿದ್ದು ಈಗಲು ಜನರು ಪ್ರಧಾನಿ ನರೇಂದ್ರ ಮೋದಿ ಅವರ...

ಪ್ರಧಾನಿ ಮೋದಿ ನೋಟು ನಿಷೇಧಕ್ಕೆ ಶೇ.81ರಷ್ಟು ಬೆಂಬಲ
ನೋಟು ನಿಷೇಧ
Published On :
ನವದೆಹಲಿ: ದೇಶದಲ್ಲಿ 500 ಮತ್ತು 1000 ಮುಖ ಬೆಲೆಯ ನೋಟುಗಳು ನಿಷೇಧಗೊಂಡು ನವೆಂಬರ್ 8ಕ್ಕೆ ಒಂದು ವರ್ಷ ಕಳೆದಿದ್ದು ಈಗಲು ಜನರು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಕ್ಕೆ ಜನಬಲ ಸಿಕ್ಕಿದೆ. 
ಪ್ರಧಾನಿ ಮೋದಿ ತೆಗೆದುಕೊಂಡಿರುವ ಈ ದಿಟ್ಟ ನಿರ್ಧಾರದ ಬಗ್ಗೆ ಪರ ವಿರೋಧ ಚರ್ಚೆಗಲು ನಡೆಯುತ್ತಲೇ ಇವೆ. ಇದರ ಬೆನ್ನಲ್ಲೆ ನಡೆದ ಕೆಲ ಸಮೀಕ್ಷೆಗಳಲ್ಲಿ ಬಹುತೇಕ ಜನರು ಮೋದಿ ನಿರ್ಧಾರವನ್ನು ಗೌರವಿಸಿದ್ದಾರೆ. 
ನೋಟು ನಿಷೇಧ ಕುರಿತು ಪ್ರಧಾನಿ ಮೋದಿ ಆ್ಯಪ್ ದೇಶ್ ಕೀ ಆವಾಜ್ ಎಂಬ ಹೆಸರಲ್ಲಿ ನಡೆದ ಸಮೀಕ್ಷೆಯಲ್ಲೂ ಶೇಕಡ 81ರಷ್ಟು ಮಂದಿ ಮೋದಿಯವರ ಕ್ರಮವನ್ನು ಬೆಂಬಲ ಸೂಚಿಸಿದ್ದಾರೆ. ಸಮೀಕ್ಷೆ ಆರಂಭವಾದ 24 ಗಂಟೆಗಳಲ್ಲಿ ಸುಮಾರು 50 ಸಾವಿರ ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ಆ್ಯಪ್ ಹಾಗೂ ಮೋದಿ ಕ್ರಮಕ್ಕೆ ಸಿಕ್ಕಿರುವ ಬೆಂಬಲವನ್ನು ಸೂಚಿಸುತ್ತದೆ. 
ಈ ಹಿಂದಿನ ಯುಪಿಎ ಸರ್ಕಾರ ಭ್ರಷ್ಟಾಚಾರ ಹಾಗೂ ಕಪ್ಪುಹಣ ನಿಯಂತ್ರಿಸಲು ಯಾವುದೇ ರೀತಿ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಶೇಕಡ 81ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇಕಡ 93ರಷ್ಟು ಮದಿ ದೇಶದಲ್ಲಿ ತಾಂಡವ ಆಡುತ್ತಿರುವ ಈ ಸಮಸ್ಯೆಗಳನ್ನು ತೊಲಗಿಸಲು ಮೋದಿ ತೆಗೆದುಕೊಂಡ ಕ್ರಮವನ್ನು ಶ್ಲಾಘಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.