ದೇಶ

ನೋಟು ನಿಷೇಧ, ಜಿಎಸ್ ಟಿ ಜಾರಿಯಿಂದ ಆರ್ಥಿಕತೆಗೆ ಹಾನಿ: ಮಾಜಿ ಪ್ರಧಾನಿ ಸಿಂಗ್

ಕೇಂದ್ರ ಸರ್ಕಾರದ ನೋಟು ನಿಷೇಧ ಮತ್ತು ಅಸಮರ್ಪಕ ಜಿಎಸ್ ಟಿ ಜಾರಿಯಿಂದ ಭಾರತದ ಆರ್ಥಿಕತೆ ಭಾರಿ ಪ್ರಮಾಣದ ಹಾನಿಯುಂಟಾಗಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ನೋಟು ನಿಷೇಧ, ಜಿಎಸ್ ಟಿ ಜಾರಿಯಿಂದ ಆರ್ಥಿಕತೆಗೆ ಹಾನಿ: ಮಾಜಿ ಪ್ರಧಾನಿ ಸಿಂಗ್
ಮಾಜಿ ಪ್ರಧಾನಿ ಸಿಂಗ್
Published On :
ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧ ಮತ್ತು ಅಸಮರ್ಪಕ ಜಿಎಸ್ ಟಿ ಜಾರಿಯಿಂದ ಭಾರತದ ಆರ್ಥಿಕತೆ ಭಾರಿ ಪ್ರಮಾಣದ ಹಾನಿಯುಂಟಾಗಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಗುಜರಾತ್ ನ ಸೂರತ್ ನಲ್ಲಿ ನಡೆದ ಭಾರತದ ಆರ್ಥಿಕ ವಾತಾವರಣದ ಕುರಿತಾದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಿದ ಖ್ಯಾತ ಆರ್ಥ ತಜ್ಞರೂ ಕೂಡ ಆಗಿರುವ ಮನಮೋಹನ್ ಸಿಂಗ್, ಕೇಂದ್ರ  ಸರ್ಕಾರ ಕೈಗೊಂಡ ಎರಡು ನಿರ್ಧಾರಗಳಿಂದಾಗಿ ಇಂದು ದೇಶದ ಮಧ್ಯಮ ಗಾತ್ರ ಉದ್ದಿಮೆಗಳ ಬೆನ್ನೆಲುಬು ಮುರಿದಂತಾಗಿದೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ಇದೊಂದು ದೊಡ್ಡ ದುರಂತ ಎಂದು ಸಿಂಗ್ ಬಣ್ಣಿಸಿದ್ದಾರೆ.
"ನಾಳೆ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮಕ್ಕೆ ಒಂದು ವರ್ಷವಾಗುತ್ತದೆ. ಭಾರತದ ಅರ್ಥ ವ್ಯವಸ್ಥೆ ಇತಿಹಾಸದಲ್ಲೇ ನವೆಂಬರ್ 8 ಕರಾಳದಿನವಾಗಿದ್ದು, ದೇಶದ ಮಧ್ಯಮ ಮತ್ತು ಸಣ್ಣ ಉದ್ದಿಮೆಗಳ ಬೆನ್ನೆಲುಬನ್ನೇ ಮುರಿದ  ದಿನವಾಗಿದೆ. ನಾನು ಈ ಹಿಂದೆ ಸಂಸತ್ತಿನಲ್ಲಿ ಹೇಳಿದಂತೆ ಇದು ಕೇಂದ್ರ ಸರ್ಕಾರದ ಸಂಘಟಿತ ಮತ್ತು ಕಾನೂನುಬಾಹಿರ ಲೂಟಿಯಾಗಿದೆ. ನೋಟು ನಿಷೇಧ ಮತ್ತು ಜಿಎಸ್ ಟಿಯ ಅಸಮರ್ಪಕ ಜಾರಿಯಿಂದಾಗಿ ಇಂದು ದೇಶದ ಸಣ್ಣ  ಉದ್ದಿಮೆಗಳು ಭಾರಿ ನಷ್ಟವನ್ನು ಅನುಭವಿಸುತ್ತಿದ್ದು, ಸಣ್ಣ ಉದ್ದಿಮೆಗಳ ಬೆನ್ನೆಲುಬನ್ನೇ ಮುರಿದಂತಾಗಿದೆ. ದೇಶದಲ್ಲಿ ಹುಟ್ಟಿಕೊಂಡಿರುವ ತೆರಿಗೆ ಭಯೋತ್ಪಾದನೆ ದೇಶದ ಸಣ್ಣ ಉದ್ದಿಮೆಗಳ ಧೈರ್ಯವನ್ನೇ ಕಸಿದಿದೆ. ಸರ್ಕಾರದ  ಬುಲೆಟ್ ರೈಲು ಯೋಜನೆಯನ್ನು ಯಾರೇ ಪ್ರಶ್ನಿಸಿದರೂ ಅವರು ದೇಶ ವಿರೋಧಿಗಳಾಗುತ್ತಾರೆ ಎಂದು ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಕೊಂಡಾಡಿದ ಮನಮೋಹನ್ ಸಿಂಗ್, ನಾನು ತುಂಬಾ ಗೌರವದಿಂದ ಹೇಳುತ್ತೇನೆ..ಕಾಂಗ್ರೆಸ್ ಸರ್ಕಾರ 140 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತಿದೆ ಎಂದು  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.