ಹಿಂದೂ ಭಯೋತ್ಪಾದನೆ: ಕಮಲ್ ಮುಖಕ್ಕೆ ಮಸೀ ಬಳಿದವರಿಗೆ ಮುಸ್ಲಿಂ ಯುವಕನಿಂದ 25 ಸಾವಿರ!
ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ಆಕ್ರೋಶ ಭುಗಿಲೇದಿದ್ದು ಕಮಲ್ ಮುಖಕ್ಕೆ...

Published On :
ಆಗ್ರ: ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ಆಕ್ರೋಶ ಭುಗಿಲೇದಿದ್ದು ಕಮಲ್ ಮುಖಕ್ಕೆ ಮಸಿ ಬಳಿದವರಿಗೆ 25 ಸಾವಿರ ರುಪಾಯಿ ನೀಡುವುದಾಗಿ ಮುಸ್ಲಿಂ ಯುವಕನೊಬ್ಬ ಹೇಳಿದ್ದಾನೆ.
ಉತ್ತರ ಪ್ರದೇಶದ ಆಲಿಗಢ್ನ ಮುಸ್ಲಿಂ ಯುವಕನೊಬ್ಬ ಕಮಲ್ ಹಾಸನ್ ಮುಖವನ್ನು ಮಸಿ ಬಳಿದು ಯಾರು ಕಪ್ಪಾಗಿಸುತ್ತಾರೋ ಅವರಿಗೆ 25 ಸಾವಿರ ರುಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಇದೇ ವೇಳೆ ಹಿಂದೂಗಳು ಮತ್ತು ಮುಸ್ಲಿಂರು ಸೌಹಾರ್ಧತೆಯಿಂದ ಬದುಕುತ್ತಿದ್ದು ಇದಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವ ಕಮಲ್ ಹಾಸನ್ ಅವರು ರಾಷ್ಟ್ರ ದ್ರೋಹಿ ಎಂದು ಆಲಿಘಡ್ನಲ್ಲಿರುವ ಮುಸ್ಲಿಂ ಯುವ ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ಅಮೀರ್ ರಷೀದ್ ಹೇಳಿದ್ದಾರೆ.
ಹಿಂದೂಗಳು ಒಂದು ವೇಳೆ ಉಗ್ರಗಾಮಿಗಳು ಆಗಿದ್ದರೆ ದೇಶದಲ್ಲಿ ಯಾವುದೇ ಸಮುದಾಯವೂ ಸುರಕ್ಷಿತವಾಗಿ ಬದುಕುತ್ತಿರಲಿಲ್ಲ. ಆದರೆ ಕೋಮು ಸೌಹಾರ್ಧತೆಗೆ ಬೆಂಕಿ ಹಚ್ಚುವ ಇಂತಹವರ ನಾಲಿಗೆಯನ್ನು ಕತ್ತರಿಸುವ ಮೂಲಕ ಮೌನವಾಗಿಸಬೇಕು. ಇಂತಹ ಹೇಳಿಕೆ ನೀಡುವ ಮೂಲಕ ಕಮಲ್ ರಾಜಕೀಯ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಷೀದ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


