ದೇಶ

ಮೊಬೈಲ್, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್: ತಡೆ ನೀಡಲು ಸುಪ್ರೀಂ ನಕಾರ, ಗಡುವು ಸ್ಪಷ್ಟಪಡಿಸಲು ಸೂಚನೆ

ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡುವುದಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ

ಮೊಬೈಲ್, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್: ತಡೆ ನೀಡಲು ಸುಪ್ರೀಂ ನಕಾರ, ಗಡುವು ಸ್ಪಷ್ಟಪಡಿಸಲು ಸೂಚನೆ
ಸುಪ್ರೀಂ ಕೋರ್ಟ್
Published On :
ನವದೆಹಲಿ: ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡುವುದಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿರುವುದಾಗಿ ಹೇಳಿದೆ. 
ಇದೇ ವೇಳೆ ಆಧಾರ್ ನ್ನು ಲಿಂಕ್ ಮಾಡದೇ ಇದ್ದಲ್ಲಿ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಫೋನ್ ನಂಬರ್ ಗಳು ನಿಷ್ಕ್ರಿಯವಾಗಲಿವೆ ಎಂದು ಮೆಸೇಜ್ ಕಳಿಸುವ ಮೂಲಕ ಗ್ರಾಹಕರಲ್ಲಿ ಭಯ ಹುಟ್ಟಿಸಿರುವುದಕ್ಕೆ ಕೋರ್ಟ್ ಟೆಲಿಕಾಂ ಕಂಪನಿಗಳು ಹಾಗೂ ಬ್ಯಾಂಕ್ ಗಳಿಗೆ ಕೋರ್ಟ್ ವಾಗ್ದಂಡನೆ ವಿಧಿಸಿದೆ. ಈ ರೀತಿಯ ಮೆಸೇಜ್ ಗಳನ್ನು ಕಳಿಸಲಾಗುತ್ತಿಲ್ಲ ಎಂದು ಕೇಂದ್ರ ಸಮರ್ಥನೆ ನೀಡಿದೆ. ಇದನ್ನು ನಿರಾಕರಿಸಿರುವ ನ್ಯಾ. ಎಕೆ ಸಿಕ್ರಿ, ಮಾಧ್ಯಮದ ಎದುರು ಹೇಳಲು ಬಯಸುವುದಿಲ್ಲ. ಆದರೆ ಇಂಥಹ ಮೆಸೇಜ್ ಗಳು ನನಗೂ ಬರುತ್ತಿವೆ ಎಂದು ಹೇಳಿದ್ದು, ಜನತೆಯಲ್ಲಿ ಭಯ ಮೂಡಿಸದಂತೆ ಎಚ್ಚರಿಕೆ ನೀಡಿದ್ದಾರೆ. 
ಟೆಲಿಕಾಂ, ಬ್ಯಾಂಕ್ ಗಳಿಗೆ ಜನತೆಯಲ್ಲಿ ಆತಂಕ ಮೂಡಿಸುವ ರೀತಿಯ ಮೆಸೇಜ್ ಗಳನ್ನು ಕಳಿಸದಂತೆ ನಿರ್ದೇಶನ ನೀಡಲು ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.