ಅನಂತ್ ನಾಗ್: ಸಿಆರ್ ಪಿಎಫ್ ಯೋಧರ ವಾಹನದ ಮೇಲೆ ಉಗ್ರರ ದಾಳಿ, ಹಲವರಿಗೆ ಗಾಯ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಅನಂತ್ ನಾಗ್ ಜಿಲ್ಲೆಯಲ್ಲಿ ಸೇನಾವಾಹನದ ಮೇಲೆ ದಾಳಿ ಮಾಡಿದ್ದಾರೆ.

Published On :
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಅನಂತ್ ನಾಗ್ ಜಿಲ್ಲೆಯಲ್ಲಿ ಸೇನಾವಾಹನದ ಮೇಲೆ ದಾಳಿ ಮಾಡಿದ್ದಾರೆ.
ಅನಂತ್ ನಾಗ್ ಜಿಲ್ಲೆಯ ಲಜಿಬಾಲ್ ಪ್ರಾಂತ್ಯದಲ್ಲಿ ಕರ್ತವ್ಯ ನಿಯೋಜನೆಗಾಗಿ ತೆರಳುತ್ತಿದ್ದ ಸಿಆರ್ ಪಿಎಫ್ ಯೋಧರ ವಾಹನಗಳ ಮೇಲೆ ಉಗ್ರರ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಕನಿಷ್ಠ 5 ಮಂದಿ ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸೇನಾ ಮೂಲಗಳ ಪ್ರಕಾರ ಗಡಿಯಲ್ಲಿ ಕರ್ತವ್ಯ ನಿಯೋಜನೆಗಾಗಿ ಸಿಆರ್ ಪಿಎಫ್ ನ 96 ಬೆಟಾಲಿಯನ್ ಪಡೆಯ ಯೋಧರನ್ನು ರವಾನಿಸಲಾಗುತ್ತಿತ್ತು. ಯೋಧರನ್ನು ಹೊತ್ತ ವಾಹನ ಅನಂತ್ ನಾಗ್ ಜಿಲ್ಲೆಯ ಲಜಿಬಾಲ್ ಪ್ರಾಂತ್ಯದ ಬಳಿ ಸಮೀಸುತ್ತಿದ್ದಂತೆಯೇ ಉಗ್ರರು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ.
ಈ ವೇಳೆ ಹಲವು ಯೋಧರು ಗಾಯಗೊಂಡಿದ್ದು, ಗಾಯಾಳು ಯೋಧರನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂತೆಯೇ ಉಗ್ರರ ದಾಳಿಗೆ ಸೇನೆ ಪ್ರತಿದಾಳಿ ನಡೆಸುತ್ತಿದ್ದು, ವಿಚಾರ ತಿಳಿಯುತ್ತಿದ್ದಂತೆಯೇ ಸಮೀಪದ ಸೇನಾ ಕ್ಯಾಂಪ್ ನಿಂದ ಯೋಧರು ಧಾವಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಉಗ್ರರ ವಿರುದ್ಧ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದು, ಉಗ್ರರು ಅವಿತಿರುವ ಶಂಕೆ ಮೇರೆಗೆ ವ್ಯಾಪಕ ಶೋಧ ಕಾರ್ಯ ನಡೆಸಲಾಗತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಶ್ರೀನಗರSrinagarAnantNagಜಮ್ಮು ಮತ್ತು ಕಾಶ್ಮೀರTerror AttackJammu and KashmirCRPFಉಗ್ರ ದಾಳಿಸಿಆರ್ ಪಿಎಫ್ಅನಂತ್ ನಾಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


