ದೇಶ

ಹರಿಯಾಣ: ದೆಹಲಿ-ಕಾಲ್ಕಾ ಹಿಮಾಲಯನ್ ಕ್ವೀನ್ ಎಕ್ಸ್ ಪ್ರೆಸ್ ರೈಲಿನ 10 ಪ್ರಯಾಣಿಕರಿಗೆ ಗಾಯ, ಚಾಲಕನ ವಿಚಾರಣೆ

ಹಿಮಾಲಯನ್ ಕ್ವೀನ್ ಎಕ್ಸ್ ಪ್ರೆಸ್ ರೈಲು ಚಾಲಕ ತುರ್ತಾಗಿ ಬ್ರೇಕ್ ಒತ್ತಿದ್ದ ಪರಿಣಾಮ ಕನಿಷ್ಠ 10 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಹರಿಯಾಣ: ದೆಹಲಿ-ಕಾಲ್ಕಾ ಹಿಮಾಲಯನ್ ಕ್ವೀನ್ ಎಕ್ಸ್ ಪ್ರೆಸ್ ರೈಲಿನ 10 ಪ್ರಯಾಣಿಕರಿಗೆ ಗಾಯ, ಚಾಲಕನ ವಿಚಾರಣೆ
ದೆಹಲಿ-ಕಾಲ್ಕಾ ಹಿಮಾಲಯನ್ ಕ್ವೀನ್ ಎಕ್ಸ್ ಪ್ರೆಸ್ ರೈಲು
Published On :
ಚಂಡೀಘರ: ಹಿಮಾಲಯನ್ ಕ್ವೀನ್ ಎಕ್ಸ್ ಪ್ರೆಸ್ ರೈಲು ಚಾಲಕ ತುರ್ತಾಗಿ ಬ್ರೇಕ್ ಒತ್ತಿದ್ದ ಪರಿಣಾಮ ಕನಿಷ್ಠ 10 ಪ್ರಯಾಣಿಕರು ಗಾಯಗೊಂಡಿದ್ದಾರೆ. 
ರೈಲು ವೇಗವಾಗಿ ಸಂಚರಿಸುತ್ತಿದ್ದ ಸಮಯದಲ್ಲಿ ಹರಿಯಾಣದ ರೈಲ್ವೇ ನಿಲ್ದಾಣದ ಬಳಿ ಸ್ಟೇಷನ್ ಮಾಸ್ಟರ್ ತುರ್ತು ಅಲಾರಾಂ ಕರೆ ಮಾಡುತ್ತಾರೆ. ಆಗ ರೈಲು ಚಾಲಕ ತಕ್ಷಣವೇ ರೈಲನ್ನು ನಿಲ್ಲಿಸುತ್ತಾನೆ. ರೈಲು ಘರುಂಡಾ ಎನ್ನುವಲ್ಲಿ ಕೆಲವು ಸಮಯ ನಿಲ್ಲುತ್ತದೆ.
ಘಟನೆಯಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ತಕ್ಷಣ ಬ್ರೇಕ್ ಒತ್ತುವ ಚಾಲಕನ ಕ್ರಮದ ವಿರುದ್ಧ ಪ್ರಯಾಣಿಕರು ರೈಲ್ವೆ ಮಂಡಳಿ ಎದುರು ಪ್ರತಿಭಟನೆ ನಡೆಸಿದ್ದಾರೆ.
"ರೈಲು ವೇಗವಾಗಿ ಬರುತ್ತಿತ್ತು, ಆಗ ಚಾಲಕ ತಕ್ಷಣೇ ತುರ್ತು ಬ್ರೇಕ್ ಒತ್ತಿ ರೈಲು ನಿಲ್ಲಿಸಿದ್ದಾನೆ. ನಾನು ಚಾಲಕನನ್ನು ಈ ಕುರಿತಂತೆ ವಿಚಾರಣೆ ನಡೆಸಿದೆ. ಆದರೆ ಆತನಿಂದ ಯಾವ ಸೂಕ್ತ ಪ್ರತಿಕ್ರಿಯೆ ಬರಲಿಲ್ಲ. ಈ ಘಟನೆಗೆ ರೈಲು ಚಾಲಕನೇ ನೇರ ಹೊಣೆಗಾರನಾಗಿದ್ದಾನೆ" ಎಂದು ಘರುಂಡಾ ರೈಲು ನಿಲ್ದಾಣದ ಸ್ಟೇಷನ್ ಮಾಶ್ಟರ್ ಹೇಳಿದರು.
ದೆಹಲಿ ಸರಾಯ್ ರೋಹಿಲ್ಲಾ ಕಲ್ಕಾ ಹಿಮಾಲಯನ್ ಕ್ವೀನ್ ಎಕ್ಸ್ ಪ್ರೆಸ್ ಉತ್ತರ ರೈಲ್ವೇ ವಲಯದ ಎಕ್ಸ್ ಪ್ರೆಸ್ ರೈಲುಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.