ರಕ್ಷಣಾ ಸಚಿವೆ ನಿರ್ಮಲಾ ಸೀತಾರಮನ್ ರನ್ನು ಭೇಟಿ ಮಾಡಿದ ಭೂತಾನ್ ದೊರೆ ವಾಂಗ್ ಚುಕ್
ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೂತಾನ್ ರಾಜದಂಪತಿಗಳದ, ಜಿಗ್ ಮೆ ಖೇಸರ್ ನಂಜಿಲ್ ವಾಂಗ್ ಚುಕ್ ಮತ್ತು ಜೆಟ್ಸುನ್ ಪೆಮಾ ವಾಂಗ್ ಚುಕ್ ಅವರನ್ನು ದೆಹಲಿಯಲ್ಲಿ........

Published On :
ನವದೆಹಲಿ: ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೂತಾನ್ ರಾಜದಂಪತಿಗಳದ, ಜಿಗ್ ಮೆ ಖೇಸರ್ ನಂಜಿಲ್ ವಾಂಗ್ ಚುಕ್ ಮತ್ತು ಜೆಟ್ಸುನ್ ಪೆಮಾ ವಾಂಗ್ ಚುಕ್ ಅವರನ್ನು ದೆಹಲಿಯಲ್ಲಿ ಇಂದು ಭೇಟಿಯಾದರು.
ಭೂತಾನ್ ರಾಜ ತಮ್ಮ ನಾಲ್ಕು ದಿನಗಳ ಭಾರತ ಭೇಟಿಯನ್ನು ಮಂಗಳವಾರದಿಂದ ಪ್ರಾರಂಭಿಸಿದ್ದಾರೆ. ತಮ್ಮ ಭೇಟಿಯ ಮೊದಲ ದಿನದಲ್ಲಿ ಭೂತಾನ್ ರಾಜ ಪರಿವಾರ ವಿದೇಶಾಂಗ ವ್ಯವಹಾರ ಸಚಿವರಾದ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿತ್ತು. ನಿನ್ನೆ ರಾಷ್ಟ್ರಪತಿ ಕೋವಿಂದ್ ಮತ್ತು ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ್ದ ಭೂತಾನ್ ರಾಜರು ಅವರ ಗೌರವಾರ್ಥ ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಇದರೊಡನೆ ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿಯವರನ್ನು ಸಹ ಭೂತಾನ್ ರಾಜರು ಭೇಟಿಯಾಗಲಿದ್ದಾರೆ. ಭಾರತ ಮತ್ತು ಚೀನಾ ನಡುವಿನ ಡೊಕ್ಲಾಮ್ ವಿವಾದ ಕೊನೆಗೊಂಡ ಬಳಿಕ ಭೂತಾನ್ ದೊರೆಯ ಪ್ರಥಮ ಭಾರತ ಪ್ರವಾಸ ಇದಾಗಿದೆ.
ದ್ವಿಪಕ್ಷೀಯ ಸಹಕಾರ, ಸಮಗ್ರತೆ ಗೆ ಈ ಭೇಟಿ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ
ಕಳೆದ ತಿಂಗಳಲ್ಲಿ ಭೂತ್ನ್ ಗೆ ತೆರಳಿದ್ದ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಭೂತಾನ್ ದೊರೆ ವಾಂಗ್ ಚುಕ್ ಮತ್ತು ಪ್ರಧಾನಿ ತ್ಸೇರಿಂಗ್ ಟೋಗ್ಬೇ ಅವರೊದನೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ದೆಹಲಿDelhiBhutanಭೂತಾನ್Defence Minister Nirmala SitharamanJigme Khesar Namgyel WangchuckBhutan Kingರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ಜೆ.ಕೆ.ಎನ್.ವಾಂಗ್ ಚುಕ್ಭೂತಾನ್ ರಾಜ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


