ದೇಶ

ಗೋವುಗಳನ್ನು ಮನೆಯಿಂದ ಮಾರಾಟ ಮಾಡಿ: ಕೇರಳ ಹೈಕೋರ್ಟ್

ದೇಶಾದ್ಯಂತ ಗೋಹತ್ಯೆ ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಪರಿಶೀಲಿಸಿದ ಕೇರಳ ಹೈಕೋರ್ಟ್, ಜಾನುವಾರು ಮಾರಾಟ....

ಗೋವುಗಳನ್ನು ಮನೆಯಿಂದ ಮಾರಾಟ ಮಾಡಿ: ಕೇರಳ ಹೈಕೋರ್ಟ್
ಸಾಂದರ್ಭಿಕ ಚಿತ್ರ
Published On :
ಕೊಚ್ಚಿ: ದೇಶಾದ್ಯಂತ ಗೋಹತ್ಯೆ ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಪರಿಶೀಲಿಸಿದ ಕೇರಳ ಹೈಕೋರ್ಟ್, ಜಾನುವಾರು ಮಾರಾಟ ಮತ್ತು ಹತ್ಯೆಯ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಗೋಮಾಂಸ ತಿನ್ನುವ ಜನರ ಹಕ್ಕನ್ನು ಕಸಿಯುವ ಯಾವುದೇ ಅಂಶ ಇಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದೆ. 
ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿ ಕೇರಳ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿಜಿ ಸುನಿಲ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನವನೀತಿ ಪ್ರಸಾದ್ ನೇತೃತ್ವದ ವಿಭಾಗೀಯ ಪೀಠ, ಗೋವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬದಲು ನಿಮ್ಮ ಮನೆಯಿಂದಲೇ ಮಾರಾಟ ಮಾಡಿ ಎಂದು ಹೇಳಿದೆ.
"ಸದ್ಯಕ್ಕೆ ದೇಶದಲ್ಲಿರುವ ಕಾನೂನನ್ನು ಮತ್ತು ಈಗ ಬಂದಿರುವ ಹೊಸ ಆದೇಶವನ್ನು ಯಾರಾದರೂ ಸೂಕ್ಷ್ಮವಾಗಿ ಓದಿದ್ದರೆ, ಈ ರೀತಿಯ ಅಭಿಪ್ರಾಯ ತಳೆಯಲು ಸಾಧ್ಯವಿಲ್ಲ. ಹತ್ಯೆಯ ಮೇಲೆ ಆಗಲಿ ಅಥವಾ ಬೀಫ್ ಮಾರಾಟದ ಮೇಲೆ ಆಗಲಿ ಯಾವುದೇ ನಿಷೇಧ ಇಲ್ಲ. ಹೊಸ ಆದೇಶದಲ್ಲಿ ತಿಳಿಸಿರುವುದು ಏನೆಂದರೆ ಜಾತ್ರೆಗಳಲ್ಲಿ ಗುಂಪಾಗಿ ಜಾನುವಾರುಗಳನ್ನು ಮಾರಾಟ ಮಾಡುವುದನ್ನು ಮತ್ತು ಹತ್ಯೆ ಮಾಡುವುದನ್ನು ನಿಷೇಧಿಸಲಾಗಿದೆ" ಎಂದು ಹೇಳಿ ಪಿಐಎಲ್ ಅನ್ನು ವಜಾಗೊಳಿಸಿದೆ.
ಗೋಹತ್ಯೆ ನಿಷೇಧವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾನುವಾರುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಹೊರಡಿಸಿದೆ. ಆದರೆ ಸಂಪೂರ್ಣ ಗೋಹತ್ಯೆ ನಿಷೇಧಿಸಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಮದ್ರಾಸ್ ಉಚ್ಚ ನ್ಯಾಯಾಲಯ ಈ ಹೊಸ ಆದೇಶವನ್ನು ತಡೆ ಹಿಡಿದಿರುವ ಬಗ್ಗೆ ವಕೀಲ ಸಿ ಪಿ ಸುಧಾಕರ ಪ್ರಸಾದ್ ಗಮನ ಸೆಳೆದಾಗ, ಮುಖ್ಯ ನ್ಯಾಯಾಧೀಶರು ಅದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.