ದೇಶ

ಇನ್ನೂ ಕೆಂಪು ದೀಪ ತೆಗೆಯದ ಪಶ್ಚಿಮ ಬಂಗಾಳ ಸಚಿವ

ಕೇಂದ್ರ ಸರ್ಕಾರ ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಣ್ಯರ(ವಿಐಪಿ)ವಾಹನಗಳ ಮೇಲಿನ ಕೆಂಪುದೀಪ....

ಇನ್ನೂ ಕೆಂಪು ದೀಪ ತೆಗೆಯದ ಪಶ್ಚಿಮ ಬಂಗಾಳ ಸಚಿವ
ಸಾಂದರ್ಭೀಕ ಚಿತ್ರ
Published On :
ಸಿಲಿಗುರಿ: ಕೇಂದ್ರ ಸರ್ಕಾರ ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಣ್ಯರ(ವಿಐಪಿ)ವಾಹನಗಳ ಮೇಲಿನ ಕೆಂಪುದೀಪ ನಿಷೇಧಿಸಿದ ಒಂದು ತಿಂಗಳಾದರೂ ಪಶ್ಚಿಮ ಬಂಗಾಳದ ಲೋಕೋಪಯೋಗಿ ಸಚಿವ ಅರುಪ್ ಬಿಸ್ವಾಸ್ ಅವರು ಮಾತ್ರ ತಮ್ಮ ಕಾರಿನ ಮೇಲಿನ ಕೆಂಪು ದೀಪ ಇನ್ನೂ ತೆಗೆದಿಲ್ಲ.
ತಾವು ಇನ್ನೂ ಕೆಂಪು ದೀಪ ತೆಗೆಯದಿರುವ ಬಗ್ಗೆ ಇನ್ನು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅರುಪ್ ಬಿಸ್ವಾಸ್ ಅವರು, ನಮ್ಮ ಸರ್ಕಾರ ಇನ್ನೂ ಕೆಂಪು ದೀಪ ನಿಷೇಧಿಸಿಲ್ಲ. ಹೀಗಾಗಿ ತೆಗೆದಿಲ್ಲ ಮತ್ತು ಬೇರೆಯವರ ಸೂಚನೆಗಳನ್ನು ನಾವು ಪಾಲಿಸುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
ಏಪ್ರಿಲ್ 19ರಂದು ಕೇಂದ್ರ ಸಚಿವ ಸಂಪುಟ ಕೈಗೊಂಡಿದ್ದ ಕೆಂಪು ದೀಪ ನಿಷೇಧ ಆದೇಶ ಮೇ 1ರಿಂದ ಜಾರಿಗೆ ಬಂದಿದ್ದು, ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಸಿಎಂ ಹಾಗೂ ಸಚಿವರು ತಮ್ಮ ಕಾರಿನ ಮೇಲಿನ ಕೆಂಪು ದೀಪವನ್ನು ತೆರವುಗೊಳಿಸಿದ್ದಾರೆ. 
ಹೊಸ ನಿಯಮದಡಿ ಪ್ರಧಾನಿ, ರಾಷ್ಟ್ರಪತಿ ಜತೆಗೆ ಉಪರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿ, ಕೇಂದ್ರ ಸಚಿವರು, ಲೋಕಸಭೆ ಸ್ಪೀಕರ್, ರಾಜ್ಯ ಸಚಿವರೂ ಸೇರಿ ಯಾವುದೇ ವಿಐಪಿ ಗಳಿಗೂ ಇನ್ಮುಂದೆ ಕೆಂಪು ದೀಪ ಅಳವಡಿಸಿಕೊಳ್ಳಲು ಅವಕಾಶ ಇರುವುದಿಲ್ಲ. ಆಂಬುಲೆನ್ಸ್, ಅಗ್ನಿ ಶಾಮಕ ವಾಹನ, ಇತ್ಯಾದಿ ತುರ್ತು ಮತ್ತು ಪರಿಹಾರ ಸೇವೆಗೆ ಸಂಬಂಧಪಟ್ಟ ವಾಹನಗಳು ಕೆಂಪು ದೀಪಗಳ ಜತೆಗೆ ನೀಲಿದೀಪಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.