ಯೋಧರತ್ತ ಕಲ್ಲೆಸೆವಾಗ ಸಾಯಿರಿ ಎನ್ನಲೇ?: ಸೇನಾ ಮುಖ್ಯಸ್ಥರ ಹೇಳಿಕೆಗೆ ನಾಯ್ಡು ಬೆಂಬಲ
ಕಲ್ಲುತೂರಾಟಗಾರರಿಂದ ತಪ್ಪಿಸಿಕೊಳ್ಳಲು ಕಲ್ಲುತೂರಾಟಗಾರನನ್ನೇ ಜೀಪಿಗೆ ಕಟ್ಟಿ ಮಾನವ ಗುರಾಣಿಯಾಗಿ ಬಳಸಿಕೊಂಡಿದ್ದ ಸೇನಾಧಿಕಾರಿಯ ಕ್ರಮಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನಾ ಮುಖ್ಯಸ್ಥ ನೀಡಿದ್ದ ಹೇಳಿಕೆಯನ್ನು ಕೇಂದ್ರ ಸಚಿವ ವೆಂಕಯ್ಯ ನಾಯ್ಡು...

Published On :
ನವದೆಹಲಿ: ಕಲ್ಲುತೂರಾಟಗಾರರಿಂದ ತಪ್ಪಿಸಿಕೊಳ್ಳಲು ಕಲ್ಲುತೂರಾಟಗಾರನನ್ನೇ ಜೀಪಿಗೆ ಕಟ್ಟಿ ಮಾನವ ಗುರಾಣಿಯಾಗಿ ಬಳಸಿಕೊಂಡಿದ್ದ ಸೇನಾಧಿಕಾರಿಯ ಕ್ರಮಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನಾ ಮುಖ್ಯಸ್ಥ ನೀಡಿದ್ದ ಹೇಳಿಕೆಯನ್ನು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಸೋಮವಾರ ಬೆಂಬಲಿಸಿದ್ದಾರೆ.
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ನೀಡಿದ್ದ ಹೇಳಿಕೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ನಾಯ್ಡು ಅವರು, ಕಾಶ್ಮೀರದಲ್ಲಿ ನಡೆಯುತ್ತಿರುವುದು ಕೊಳಕು ಯುದ್ಧವಾಗಿದ್ದು, ನವೀನ ವಿಧಾನದ ಮೂಲವೇ ಅದನ್ನು ಎದುರಿಸಬೇಕು ಎಂಬ ಸೇನಾ ಮುಖ್ಯಸ್ಥ ಹೇಳಿಕೆಯನ್ನು ಸಂಪೂರ್ಣವಾಗಿ ಒಪ್ಪುತ್ತೇನೆಂದು ಹೇಳಿದ್ದಾರೆ.
ಕಲ್ಲುತೂರಾಟಗಾರನೊಬ್ಬನನ್ನು ಮಾನವ ತಡೆಗೋಡೆಯಾಗಿ ಬಳಸಿಕೊಂಡು ಕಾಶ್ಮೀರದಲ್ಲಿ ಚುನಾವಣಾಧಿಕಾರಿಗಳು ಹಾಗೂ ಯೋಧರನ್ನು ರಕ್ಷಿಸಿದ ಮೇಜರ್ ಲೀತುಲ್ ಗೊಗೊಯ್ ಅವರಿಗೆ ಗೌರವ ಸಮರ್ಪಿಸಿದ್ದನ್ನು ನಿನ್ನೆಯಷ್ಟೇ ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಕೊಳಕು ಸಮರವನ್ನು ನವೀನ ವಿಧಾನಗಳ ಮೂಲಕವೇ ಎದುರಿಸಬೇಕು. ಹೀಗಾಗಿ ಗೊಗೊಯ್ ಅವರನ್ನು ಗೌರವಿಸಿದ್ದೇನೆಂದು ಹೇಳಿದ್ದರು.
ಜನರು ನಮ್ಮತ್ತ ಕಲ್ಲು ತೂರುತ್ತಿದ್ದಾರೆ. ಪೆಟ್ರೋಲ್ ಬಾಂಬ್ ಗಳನ್ನು ಎಸೆಯುತ್ತಿದ್ದಾರೆ. ಈಗ ಏನು ಮಾಡಬೇಕು ಎಂದು ನಮ್ಮ ಯೋಧರು ನನ್ನನ್ನು ಕೇಳಿದರೆ, ಸ್ವಲ್ಪ ಹೊತ್ತು ಕಾದು, ಸಾಯಿರಿ ಎಂದು ಹೇಳಲೇ? ರಾಷ್ಟ್ರಧ್ವಜನ್ನು ಹೊದ್ದ ಸುಂದರ ಶವಪೆಟ್ಟಿಗೆಯನ್ನು ತಂದು ನಿಮ್ಮ ದೇಹಗಳನ್ನು ಗೌರವದೊಂದಿಗೆ ತವರಿಗೆ ಕಳುಹಿಸಿಕೊಡುವೆ ಎಂದು ತಿಳಿಸಲೇ? ಕಾಶ್ಮೀರದಲ್ಲಿ ಕೆಲಸ ಮಾಡುತ್ತಿರುವ ಯೋಧರ ನೈತಿಕ ಸ್ಥೈರ್ಯವನ್ನು ಹೆಚ್ಚುಸುವ ಕೆಲಸವನ್ನು ನಾನು ಮಾಡಬೇಕಾಗುತ್ತದೆ. ಮೇಜರ್ ಗೊಗೊಯ್ ಅವರನ್ನು ಸನ್ಮಾನಿಸುವ ಮೂಲಕ ನಾನು ಅದನ್ನೇ ಮಾಡಿದ್ದೇನೆಂದು ತಿಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian ArmyArmyKashmirಕಾಶ್ಮೀರಸೇನೆವೆಂಕಯ್ಯ ನಾಯ್ಡುVenkaiah Naiduಭಾರತೀಯ ಸೇನೆಕಲ್ಲು ತೂರಾಟಗಾರರುBipin Rawatಬಿಪಿನ್ ರಾವತ್Stone pelters
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


