ದೇಶ

ಸಿಯಾಚಿನ್ ಬಳಿ ಪಾಕ್ ಜೆಟ್ ಹಾರಾಟ; ವಾಯುಗಡಿ ಉಲ್ಲಂಘನೆ ಆಗಿಲ್ಲ- ಭಾರತೀಯ ಸೇನೆ

ಭಾರತೀಯ ವಾಯುಪಡೆ ಪಾಕಿಸ್ತಾನದ ವಾಯುಗಡಿಯನ್ನು ಉಲ್ಲಂಘಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಪ್ರಕಟಿಸಿ ಆರೋಪಿಸಿದ್ದು ಭಾರತೀಯ ಸೇನೆ ಪಾಕಿಸ್ತಾನದ ಆರೋಪವನ್ನು ನಿರಾಕರಿಸಿದೆ.

ಸಿಯಾಚಿನ್ ಬಳಿ ಪಾಕ್ ಜೆಟ್ ಹಾರಾಟ; ವಾಯುಗಡಿ ಉಲ್ಲಂಘನೆ ಆಗಿಲ್ಲ- ಭಾರತೀಯ ಸೇನೆ
ಸಿಯಾಚಿನ್ ಗ್ಲೇಸಿಯರ್
Published On :
ನವದೆಹಲಿ: ಸಿಯಾಚಿನ್ ಗ್ಲೇಸಿಯರ್ ಬಳಿ ಪಾಕಿಸ್ತಾನದ ಜೆಟ್ ವಿಮಾನಗಳ ಹಾರಾಟದ ಬಗ್ಗೆ ಪಾಕ್ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ಆದರೆ ಭಾರತೀಯ ಸೇನೆ ವಾಯು ಗಡಿ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ. 
ಪಾಕಿಸ್ತಾನ ವಾಯು ಪಡೆ ಸಿಯಾಚಿನ್ ಗ್ಲೇಸಿಯರ್ ಪ್ರದೇಶದ ಬಳಿ ಸಮರಾಭ್ಯಾಸ ನಡೆಸುತ್ತಿದ್ದು, ಜೆಟ್ ವಿಮಾನಗಳ ಹಾರಾಟ ನಡೆದಿದೆ. ಇದನ್ನೆ ಪಾಕ್ ಮಾಧ್ಯಮಗಳು ಪಾಕ್ ವಾಯು ಸೇನೆ ಭಾರತೀಯ ವಾಯುಗಡಿ ಉಲ್ಲಂಘನೆ ಮಾಡಿದೆ ಎಂಬ ಅರ್ಥ ಬರುವ ರೀತಿಯಲ್ಲಿ ವರದಿ ಪ್ರಕಟಿಸಿದ್ದವು. ಭಾರತೀಯ ಸೇನೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಪಾಕಿಸ್ತಾನ ವಾಯುಗಡಿ ಉಲ್ಲಂಘನೆಯಾಗಿಲ್ಲ ಎಂದು ಹೇಳಿದೆ. 
ಸಿಯಾಚಿನ್ ಕಾಶ್ಮೀರದ ಉತ್ತರ ಭಾಗವಾಗಿದ್ದು, 1984 ರಿಂದಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ಈ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. 
ಪಾಕಿಸ್ತಾನದ ಎಲ್ಲಾ ಸೇನಾ ನೆಲೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಪ್ರಾರಂಭವಾಗಿದ್ದು, ಪಾಕ್ ನ ವಾಯು ಸೇನೆ ಮುಖ್ಯಸ್ಥ ಸೋಹೈಲ್ ಅಮಾನ್ ಸ್ಕಾರ್ಡು ಫಾರ್ವರ್ಡ್ ಬೇಸ್ ಗೆ ಭೇಟಿ ನೀಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಪ್ರಕಟಿಸಿವೆ. 
ಭಾರತೀಯ ಸೇನೆ ಪಾಕಿಸ್ತಾನ ಪ್ರೇರೇಪಿತ ಭಯೋತ್ಪಾದನಾ ಕೃತ್ಯಗಳಿಗೆ ಪ್ರತೀಕಾರವಾಗಿ ಗಡಿನಿಯಂತ್ರಣ ರೇಖೆಯಲ್ಲಿ ದಾಳಿ ನಡೆಸಿ ನೌಶೇರಾ ಸೆಕ್ಟರ್ ನ ಹಲವು ಸೇನಾ ನೆಲೆಗಳಿಗೆ ಹಾನಿಯುಂಟುಮಾಡಿರಿವ ಬೆನ್ನಲ್ಲೇ ಪಾಕ್ ನಿ ನಿಂದ ವಾಯುಗಡಿ ಉಲ್ಲಂಘನೆಯಾಗಿರುವ ಆರೋಪ ಕೇಳಿಬಂದಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.