ರಜನಿಕಾಂತ್ ಕನ್ನಡಿಗ; ಅವರ ರಾಜಕೀಯ ಪ್ರವೇಶಕ್ಕೆ ನಮ್ಮ ವಿರೋಧವಿದೆ: ತಮಿಳುಪರ ಸಂಘಟನೆ
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಕ್ಷೇತ್ರಕ್ಕೆ ಸೇರುವ ಮುನ್ಸೂಚನೆ ನೀಡಿರುವ...

Published On :
ಚೆನ್ನೈ:ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಕ್ಷೇತ್ರಕ್ಕೆ ಸೇರುವ ಮುನ್ಸೂಚನೆ ನೀಡಿರುವ ಬೆನ್ನಲ್ಲೇ ಅದಕ್ಕೆ ವಿರೋಧ ವ್ಯಕ್ತವಾಗಿದೆ. ತಮಿಳುಪರ ಸಂಘಟನೆ ತಮಿಳರ್ ಮುನ್ನೆತ್ರ ಪದೈ, ರಜನಿಕಾಂತ್ ಕನ್ನಡಿಗರಾಗಿರುವುದರಿಂದ ತಮಿಳುನಾಡಿನಲ್ಲಿ ಅವರು ರಾಜಕೀಯಕ್ಕೆ ಸೇರುವುದನ್ನು ವಿರೋಧಿಸುತ್ತೇವೆ ಎಂದು ಅದು ಹೇಳಿದೆ.
ಇಂದು ರಜನಿಕಾಂತ್ ಅವರ ನಿವಾಸದ ಹೊರಗೆ ಪ್ರತಿಭಟನೆ ಆರಂಭಿಸಿದ ಸಂಘಟನೆ ಸದಸ್ಯರು ಹಿರಿಯ ನಟನ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಈ ಸಂದರ್ಭಲ್ಲಿ ರಜನಿಯವರ ನಿವಾಸದ ಭದ್ರತಾ ಸಿಬ್ಬಂದಿ ಅವರನ್ನು ಕಳುಹಿಸಿದರು.
ತಮಿಳುನಾಡು ರಾಜ್ಯವನ್ನು ಕೇವಲ ತಮಿಳರು ಮಾತ್ರ ಆಳಬೇಕು. ಕನ್ನಡಿಗರಾಗಿ ರಜನಿಕಾಂತ್ ಅವರು ರಾಜ್ಯ ರಾಜಕೀಯಕ್ಕೆ ಬರಬಾರದೆಂದು ಕೂಗಿದರು.
ಪ್ರತಿಭಟನೆ, ವಿರೋಧದ ಹಿನ್ನೆಲೆಯಲ್ಲಿ ರಜನಿಕಾಂತ್ ನಿವಾಸದ ಹೊರಗೆ ತೀವ್ರ ಭದ್ರತೆ ಕಲ್ಪಿಸಲಾಗಿದೆ. ಕಳೆದ ಶುಕ್ರವಾರ ಅಭಿಮಾನಿಗಳನ್ನುದ್ದೇಶಿಸಿ ರಜನಿ ದರ್ಬಾರ್ ನಲ್ಲಿ ಮಾತನಾಡಿದ್ದ ರಜನಿಕಾಂತ್, ತಮಿಳುನಾಡಿನಲ್ಲಿ 43 ವರ್ಷಗಳ ಕಾಲ ನೆಲೆಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡ ನಂತರ ನಾನೀಗ ಪಕ್ಕಾ ತಮಿಳಿಗನಾಗಿದ್ದೇನೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


