ದೇಶ

ಅತ್ಯಾಚಾರಕ್ಕೆ ಯತ್ನಿಸಿದವನ ಮರ್ಮಾಂಗಕ್ಕೆ ಕತ್ತರಿ: ಯುವತಿಯ ಧೈರ್ಯವನ್ನು ಕೊಂಡಾಡಿದ ಕೇರಳ ಸಿಎಂ

ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಮರ್ಮಾಂಗವನ್ನು ಕತ್ತರಿಸಿದ್ದ ಯುವತಿ ಧೈರ್ಯವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಹೊಗಳಿದ್ದಾರೆ...

ಅತ್ಯಾಚಾರಕ್ಕೆ ಯತ್ನಿಸಿದವನ ಮರ್ಮಾಂಗಕ್ಕೆ ಕತ್ತರಿ: ಯುವತಿಯ ಧೈರ್ಯವನ್ನು ಕೊಂಡಾಡಿದ ಕೇರಳ ಸಿಎಂ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
Published On :
ತಿರುವನಂತರಪುರ: ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಮರ್ಮಾಂಗವನ್ನು ಕತ್ತರಿಸಿದ್ದ ಯುವತಿಯ ಧೈರ್ಯವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಹೊಗಳಿದ್ದಾರೆ. 
ಯುವತಿಯ ಕುಟುಂಬಸ್ಥರಿಗೆ ಪರಿಚಿತನಾಗಿದ್ದ ಸ್ವಾಮಿಯೊಬ್ಬ ಆಕೆಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಈ ವೇಳೆ ಯುವತಿ ಸ್ವಾಮಿಯ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ್ದಾಳೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಎಂ ಪಿಣರಾಯಿ ವಿಜಯನ್ ಅವರು, ಯುವತಿ ಈ ನಿರ್ಧಾರ ಮೆಚ್ಚುವಂತಹದ್ದು, ಆಕೆ ಅತ್ಯಂತ ಧೈರ್ಯಶಾಲಿಯಾಗಿದ್ದು, ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದ್ದಾರೆ. 
ಸ್ವಯಂ ಘೋಷಿತ ದೇವಮಾನವ ಸ್ವಾಮಿ ಗಣೇಶಾನಂದ ಅಲಿಯಾಸ್ ಹರಿ ಸ್ವಾಮಿ ಎಂಬಾತನೇ ಯುವತಿ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದ ದುಷ್ಕರ್ಮಿ ಎಂದು ಹೇಳಲಾಗುತ್ತಿದ್ದು, ಈತ ಕೊಲ್ಲಂನಲ್ಲಿರುವ ಪನ್ಮನ ಆಶ್ರಮದ ಸದಸ್ಯನಾಗಿದ್ದಾನೆ. ಪ್ರಸ್ತುತ ಆರೋಪಿ ತ್ರಿವೆಂಡ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾನೆಂದು ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.