ತಮಿಳುನಾಡು ರಾಜಕೀಯಕ್ಕೆ ರಜನಿಕಾಂತ್ ಸೂಕ್ತರಲ್ಲ: ಸುಬ್ರಮಣಿಯನ್ ಸ್ವಾಮಿ
ತಮಿಳುನಾಡು ರಾಜಕೀಯಕ್ಕೆ ಸೂಪರ್ ಸ್ಟಾನ್ ರಜನಿಕಾಂತ್ ಸೇರ್ಪಡೆ ಕುರಿತಂತೆ ಈಗಾಗಲೇ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿರುವ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ತಮಿಳುನಾಡು ರಾಜಕೀಯಕ್ಕೆ ರಜನಿಕಾಂತ್ ಸೂಕ್ತರಲ್ಲ ಎಂದು...

Published On :
ನವದೆಹಲಿ: ತಮಿಳುನಾಡು ರಾಜಕೀಯಕ್ಕೆ ಸೂಪರ್ ಸ್ಟಾನ್ ರಜನಿಕಾಂತ್ ಸೇರ್ಪಡೆ ಕುರಿತಂತೆ ಈಗಾಗಲೇ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿರುವ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ತಮಿಳುನಾಡು ರಾಜಕೀಯಕ್ಕೆ ರಜನಿಕಾಂತ್ ಸೂಕ್ತರಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ತಮಿಳುನಾಡು ರಾಜಕೀಯದಲ್ಲಿ ರಜನಿಕಾಂತ್ ಅವರಿಗೆ ಯಾವುದೇ ರೀತಿಯ ಭವಿಷ್ಯವಿಲ್ಲ. ತಮಿಳುನಾಡಿನ ಯುವಕರು ವಿದ್ಯಾವಂತರಾಗಿದ್ದು, ತಮಿಳುನಾಡಿನಲ್ಲಿ ರಾಷ್ಟ್ರ ರಾಜಕೀಯ ಬರಬೇಕೆಂದು ಬಯಸುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯಾಗಲೂ ರಜನಿಕಾಂತ್ ಸೂಕ್ತರಲ್ಲ ಎಂದು ಹೇಳಿದ್ದಾರೆ.
ಸತತನ 5ನೇ ದಿನವಾದ ಶುಕ್ರವಾರವೂ ಕೂಡಂಬಾಕಂನಲ್ಲಿ ಮೀಡ್ ಆ್ಯಂಡ್ ಗ್ರೀಟ್ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಉದ್ದೇಶಿ ಮಾತನಾಡಿದ್ದ ರಜನಿ ಕಾಂತ್ ಅವರು, ರಜನಿಕಾಂತ್ ಅವರಿಗೆ ರಾಜಕೀಯ ಜ್ಞಾನವಿಲ್ಲ, ಅವರು ತಮಿಳಿಗನೇ ಅಲ್ಲ ಎಂದು ಹೇಳಿದ್ದ ಸ್ವಾಮಿಯವರಿಗೆ ತಿರುಗೇಟು ನೀಡಿದ್ದಾರೆ.
ನನ್ನನ್ನು ಅಭಿಮಾನಿಘಳು ತಮಿಳಿಗನನ್ನಾಗಿ ಮಾಡಿದ್ದಾರೆ. 22 ವರ್ಷಗಳ ಕಾಲ ಕನ್ನಡಿಗನಾಗಿದ್ದೆ. ಆ ಬಳಿಕ 44 ವರ್ಷಗಳ ಕಾಲ ನಾನು ತಮಿಳಿಗನಾಗಿದ್ದೇನೆ. ನಾನು ಎಲ್ಲರಂತೆ ಜವಾಬ್ದಾರಿಗಳನ್ನು ಮತ್ತು ಕೆಲಸವನ್ನು ಹೊಂದಿದ್ದೇನೆ. ನಾವು ಅದನ್ನು ಮಾಡೋಣ. ಆದರೆ, ಅಂತಿಮ ಯುದ್ಧ ಬಂದಾಗ ಎಲ್ಲಾರೂ ಒಟ್ಟಾಗಿ ಹೋರಾಡೋಣ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


