ಕಲ್ಲಿದ್ದಲು ಹಗರಣ: ಮಾಜಿ ಕಾರ್ಯದರ್ಶಿ ಹೆಚ್ ಸಿ ಗುಪ್ತಾ ವಿರುದ್ಧದ ಆರೋಪ ಸಾಬೀತು!
ಮಹತ್ವದ ಬೆಳವಣಿಗೆಯಲ್ಲಿ ಕಲ್ಲಿದ್ದಲು ಹಗರಣ ಸಂಬಂದ ಸಿಬಿಐ ವಿಶೇಷ ಕೋರ್ಟ್ ತನ್ನ ತೀರ್ಪು ನೀಡಿದ್ದು, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಹೆಚ್ ಸಿ ಗುಪ್ತಾ ಸೇರಿದಂತೆ ಮೂವರು ಉನ್ನತ ಅಧಿಕಾರಗಳ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕಲ್ಲಿದ್ದಲು ಹಗರಣ ಸಂಬಂದ ಸಿಬಿಐ ವಿಶೇಷ ಕೋರ್ಟ್ ತನ್ನ ತೀರ್ಪು ನೀಡಿದ್ದು, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಹೆಚ್ ಸಿ ಗುಪ್ತಾ ಸೇರಿದಂತೆ ಮೂವರು ಉನ್ನತ ಅಧಿಕಾರಗಳ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಕಲ್ಲಿದ್ದಲು ಗಣಿ ಹಂಚಿಕೆ ಹಸ್ತಕ್ಷೇಪ ಹಗರಣದಲ್ಲಿ ಶಾಮೀಲಾಗಿದ್ದಾರೆಂಬ ಆರೋಪದ ಮೇಲೆ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಹೆಚ್.ಸಿ. ಗುಪ್ತಾ, ಜಂಟಿ ಕಾರ್ಯದರ್ಶಿ ಕ್ರೋಪ್ಹಾಸ ನಿರ್ದೇಶಕ ಪಿಕೆ ಅಹ್ಲುವಾಲಿಯಾ ವಿರುದ್ಧ ತನಿಖೆ ನಡೆಸಲಾಗಿತ್ತು. ಮಧ್ಯ ಪ್ರದೇಶ ಮೂಲದ ಗಣಿ ಕಂಪನಿಗೆ ಕಲ್ಲಿದ್ದಲು ನಿಕ್ಷೇಪವನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಪ್ರಕರಣದಲ್ಲಿ ಗುಪ್ತಾ ಹಸ್ತ ಕ್ಷೇಪವಿದೆ ಎಂಬ ಆರೋಪ ಅವರ ಮೇಲಿತ್ತು.
2006ರಿಂದ 2009ರವರೆಗೆ ಪ್ರಧಾನಿ ಮನಮೋಹನ್ ಸಿಂಗ್ ಕಲ್ಲಿದ್ದಲು ಖಾತೆಯನ್ನು ತನ್ನ ಬಳಿಯೇ ಇರಿಸಿಕೊಂಡಿದ್ದ ಸಂದರ್ಭ ಗುಪ್ತಾ ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದರು. ಕಲ್ಲಿದ್ದಲು ಕಂಪೆನಿಗಳಿಂದ ಅರ್ಜಿ ಸ್ವೀಕರಿಸುವ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದರು. ಈ ಕುರಿತು ಸಿಬಿಐ 12 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿತ್ತು. ಗುಪ್ತಾ, ಪರಿಶೀಲನಾ ಸಮಿತಿಯ ಮುಖ್ಯಸ್ಥರಾಗಿದ್ದ ಸಮಯ ಕಲ್ಲಿದ್ದಲು ಕಂಪೆನಿಗಳು ಅಸಮರ್ಪಕ ಮಾಹಿತಿಯನ್ನು ನೀಡಿತ್ತು ಎಂಬ ಅಂಶವನ್ನು ಸಿಬಿಐ ನ್ಯಾಯಾಲಯದಲ್ಲಿ ಮಂಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


