ನನ್ನನ್ನು ವಜಾಗೊಳಿಸುವ ಹಕ್ಕು ಯಾರಿಗೂ ಇಲ್ಲ: ವಿವಾದಿತ ಮೌಲ್ವಿ ಬರ್ಕಾತಿ
ಮಸೀದಿಯ ಆಡಳಿತ ಮಂಡಳಿ ಆದೇಶವನ್ನು ಒಪ್ಪುವುದಿಲ್ಲ, ಹುದ್ದೆಯಿಂದ ನನ್ನನ್ನು ವಜಾಗೊಳಿಸುವ ಹಕ್ಕು ಯಾರಿಗೂ ಇಲ್ಲ ಎಂದು ಮೌಲಾನಾ ನೂರ್-ಉರ್-ರೆಹಮಾನ್ ಬರ್ಕಾತಿ ಹೇಳಿದ್ದಾರೆ...

Published On :
ಕೋಲ್ಕತಾ: ಮಸೀದಿಯ ಆಡಳಿತ ಮಂಡಳಿ ಆದೇಶವನ್ನು ಒಪ್ಪುವುದಿಲ್ಲ, ಹುದ್ದೆಯಿಂದ ನನ್ನನ್ನು ವಜಾಗೊಳಿಸುವ ಹಕ್ಕು ಯಾರಿಗೂ ಇಲ್ಲ ಎಂದು ಮೌಲಾನಾ ನೂರ್-ಉರ್-ರೆಹಮಾನ್ ಬರ್ಕಾತಿ ಹೇಳಿದ್ದಾರೆ.
ಕೋಲ್ಕತಾ ಟಿಪ್ಪು ಸುಲ್ತಾನ್ ಮಸೀದಿಯ ವಿವಾದಿತ ಮೌಲ್ವಿ ನೂರ್ ಉರ್ ರೆಹಮಾನ್ ಬರ್ಕಾತಿ ಅವರು ನೀಡಿದ್ದ ದೇಶ ವಿರೋಧಿ ಹೇಳಿಕೆ ಹಾಗೂ ಸ್ಥಾನಮಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪದ ಮೇರೆಗೆ ನಿನ್ನೆಯಷ್ಟೇ ಮಸೀದಿಯಿಂದ ವಜಾ ಮಾಡಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬರ್ಕಾತಿ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ. ಮಸೀದಿಯ ಆಡಳಿತ ಮಂಡಳಿಯ ಆದೇಶವನ್ನು ನಾನು ಪಾಲಿಸಲ್ಲ. ನನ್ನನ್ನು ಹುದ್ದೆಯಿಂದ ವಜಾಗೊಳಿಸುವ ಹಕ್ಕು ಯಾರಿಗೂ ಇಲ್ಲ. ಈ ಕುರಿತಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೊಂದಿಗೆ ಮಾತುಕತೆ ನಡೆಸುತ್ತೇನೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
controversyವಿವಾದMamata Banerjeeಮಮತಾ ಬ್ಯಾನರ್ಜಿಮೌಲಾನಾ ನೂರ್-ಉರ್-ರೆಹಮಾನ್ ಬರ್ಕಾತಿMaulana Noor-ur Rehman Barkati
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


