ಸುಕ್ಮಾ ದಾಳಿಗೆ ಪ್ರತೀಕಾರ: ಸಿಆರ್ ಪಿಎಫ್ ನಿಂದ 10-15 ಮಾವೋವಾದಿಗಳ ಹತ್ಯೆ
ಸುಕ್ಮಾ ದಾಳಿಗೆ ಸಿಆರ್ ಪಿಎಫ್ ಪ್ರತೀಕಾರ ತೆಗೆದುಕೊಂಡಿದ್ದು, 10-15 ಮಾವೋವಾದಿಗಳನ್ನು ಹತ್ಯೆ ಮಾಡಿದೆ.

Published On :
ರಾಯ್ ಪುರ: ಸುಕ್ಮಾ ದಾಳಿಗೆ ಸಿಆರ್ ಪಿಎಫ್ ಪ್ರತೀಕಾರ ತೆಗೆದುಕೊಂಡಿದ್ದು, 10-15 ಮಾವೋವಾದಿಗಳನ್ನು ಹತ್ಯೆ ಮಾಡಿದೆ.
ಬಸ್ತಾರ್ ನ ದಾಂತೇವಾಡದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಆರ್ ಪಿಎಫ್ ಯೋಧರು ಕನಿಶ್ಥ 10-15 ಮಾವೋವಾದಿಗಳನ್ನು ಹತ್ಯೆ ಮಾಡಿದ್ದಾರೆ. ನಕ್ಸಲ್ ನಿಗ್ರಹ ಕಾರ್ಯಾಚರಣೆಗೆಂದು ನಮ್ಮ ಪಡೆಯ ಸಿಬ್ಬಂದಿ ಕಾಡಿನ ಒಳಹೊಕ್ಕಿದ್ದರು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಚತ್ತೀಸ್ ಗಢದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ಅತ್ಯಂತ ಯಶಸ್ವಿಯಾಗಿದೆಯೆಂದು ದಾಂತೇವಾಡದ ಡಿಐಜಿ ಪಿ.ಸುಂದರ್ ರಾಜ್ ಹೇಳಿದ್ದಾರೆ. ನಕ್ಸಲರಿಗಾಗಿ ಇನ್ನೂ ಶೋಧಕಾರ್ಯ ಮುಂದುವರೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


