ಚಿದಂಬರಂ ಅವರು ಸೋನಿಯಾ ಗಾಂಧಿಯವರ ಖಾಸಗಿ ಅಕ್ರಮ ಹಣ ವರ್ಗಾವಣೆಗಾರರು: ಸುಬ್ರಹ್ಮಣ್ಯನ್ ಸ್ವಾಮಿ
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ...

Published On :
ನವದೆಹಲಿ: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ, ಚಿದಂಬರಂ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಖಾಸಗಿಯಾಗಿ ಅಕ್ರಮ ಹಣ ವರ್ಗಾವಣೆ ಮಾಡುವವರು ಎಂದು ಟೀಕಿಸಿದ್ದಾರೆ.
ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿದ ಅವರು, ವಿದೇಶಿ ಹೂಡಿಕೆ ಪ್ರಚಾರ ಮಂಡಳಿ ಅನುಮೋದನೆಯನ್ನು ಚಿದಂಬರಂ ತಮ್ಮ ಮಗನ ಲಾಭಕ್ಕಾಗಿ ನೀಡಿದರು ಎಂದರು.
ಚಿದಂಬರಂ ಅತ್ಯಂತ ಭ್ರಷ್ಟ ವ್ಯಕ್ತಿ. ಅವರು ಸೋನಿಯಾ ಗಾಂಧಿಗೆ ಕೂಡ ಅಕ್ರಮವಾಗಿ ಹಣ ಸಾಗಿಸುವವರು. ಅವರು ಸಚಿವರಾಗಿದ್ದಾಗ ಎಲ್ಲಾ ಕಾನೂನುಗಳನ್ನು ಮುರಿದಿದ್ದರು. ತಮ್ಮ ಮಗನಿಗೆ ಲಂಚ ಪಡೆಯಲು ಅನುಕೂಲವಾಗಲೆಂದು ಎಫ್ಐಪಿಬಿ ಅನುಮೋದನೆ ಪಡೆದರು.
ಇಂತವರಿಗೆ ಶಿಕ್ಷೆಯಾಗಬೇಕು, ಏಕೆಂದರೆ ಭವಿಷ್ಯದಲ್ಲಿ ಸಚಿವರುಗಳು ಇಂತಹ ನೀಚ ಕೆಲಸ ಮಾಡಲು ಹಿಂಜರಿಯುತ್ತಾರೆ ಎಂದು ಹೇಳಿದರು.
ಹಣಕಾಸು ಇಲಾಖೆಯ ಕೆಲವು ಅಧಿಕಾರಿಗಳು ಚಿದಂಬರಂ ಪರವಾಗಿ ಇದ್ದಾರೆ ಎಂದು ಕೂಡ ಸುಬ್ರಹ್ಮಣ್ಯನ್ ಸ್ವಾಮಿ ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sonia Gandhiಸೋನಿಯಾ ಗಾಂಧಿಸುಬ್ರಹ್ಮಣ್ಯನ್ ಸ್ವಾಮಿಪಿ.ಚಿದಂಬರಂP.Chidambaramಅಕ್ರಮ ಹಣ ವರ್ಗಾವಣೆSubrahmanyan SwamyMoney launderer
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


