ದೇಶ

ಕಳೆದ ವರ್ಷ ಕೇಜ್ರಿವಾಲ್ ಸಿಎಂ ಕಚೇರಿಗೆ ಬಂದಿದ್ದು ಎರಡೇ ಬಾರಿ: ಕಪಿಲ್ ಮಿಶ್ರಾ

ಆಮ್ ಆದ್ಮಿ ಪಕ್ಷದಿಂದ ವಜಾಗೊಂಡಿರುವ ನಾಯಕ ಕಪಿಲ್ ಮಿಶ್ರಾ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ಕಳೆದ ವರ್ಷ ಕೇಜ್ರಿವಾಲ್ ಸಿಎಂ ಕಚೇರಿಗೆ ಬಂದಿದ್ದು ಎರಡೇ ಬಾರಿ: ಕಪಿಲ್ ಮಿಶ್ರಾ
Published On :
ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ವಜಾಗೊಂಡಿರುವ ನಾಯಕ ಕಪಿಲ್ ಮಿಶ್ರಾ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಕಳೆದ ವರ್ಷ ಕೇಜ್ರಿವಾಲ್ ಮುಖ್ಯಮಂತ್ರಿಗಳ ಕಚೇರಿಗೆ ಬಂದಿದ್ದು ಕೇವಲ ಎರಡೇ ಬಾರಿ ಎಂದು ಹೇಳಿದ್ದಾರೆ. 
ಅತ್ಯಂತ ಹೆಚ್ಚು ರಜೆ ತೆಗೆದುಕೊಳ್ಳುವ ಸಿಎಂ ಕೇಜ್ರಿವಾಲ್, 2016 ರಲ್ಲಿ ಮುಖ್ಯಮಂತ್ರಿಗಳ ಕಚೇರಿಗೆ ಬಂದಿದ್ದು ಎರಡೇ ಬಾರಿ, ಅಷ್ಟೇ ಅಲ್ಲದೇ ಆಪ್ ನಲ್ಲಿ ಭ್ರಷ್ಟಾಚಾರ ಎದುರಿಸುತ್ತಿರುವ ನಾಯಕರ ಬಗ್ಗೆಯೂ ಕೇಜ್ರಿವಾಲ್ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದ್ದಾರೆ. 
ತಮ್ಮ ಪಕ್ಷದಲ್ಲೇ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡದ, ಕಚೇರಿಗೆ ಸರಿಯಾಗಿ ಹೋಗದ ಕೇಜ್ರಿವಾಲ್ "ಜನತೆಯ ಬಗ್ಗೆ ತಲೆಡಿಸಿಕೊಳ್ಳಬೇಡಿ, ಅವರು 15 ದಿನಗಳಲ್ಲಿ ಎಲ್ಲವನ್ನು ಮರೆಯುತ್ತಾರೆ"ಎಂದು ಪಕ್ಷದ ನಾಯಕರಿಗೆ ಹೇಳುತ್ತಿರುವುದಾಗಿ ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಕಪಿಲ್ ಮಿಶ್ರಾ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. 
ದೇಶದಲ್ಲಿ ಕಚೇರಿಗೆ ಅತ್ಯಂತ ಕಡಿಮೆ ಹಾಜರಾತಿ ಇರುವ ಮುಖ್ಯಮಂತ್ರಿ ಎಂದರೆ ಅದು ಅರವಿಂದ್ ಕೇಜ್ರಿವಾಲ್. ಅತಿ ಹೆಚ್ಚು ರಜ ತೆಗೆದುಕೊಳ್ಳುವ ಮುಖ್ಯಮಂತ್ರಿಯೂ ಅವರೇ ಆಗಿದ್ದಾರೆ, ಸಧ್ಯದಲ್ಲೇ ಅತಿ ಹೆಚ್ಚು ಹಗರಣ ನಡೆಸಿದ ಸಿಎಂ ಎಂಬ ಖ್ಯಾತಿಯನ್ನೂ ಪಡೆಯಲಿದ್ದಾರೆ ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.