ಒಸಾಮಾ ಬಿನ್ ಲಾಡೆನ್ ಹೆಸರಲ್ಲಿ ಆಧಾರ್ ಪಡೆಯಲು ಯತ್ನಿಸಿದ ವ್ಯಕ್ತಿಯ ವಿರುದ್ಧ ಕೇಸ್ ದಾಖಲು
ಉಗ್ರ ಒಸಾಮಾ ಬಿನ್ ಲಾಡೆನ್ ಹೆಸರಲ್ಲಿ ಆಧಾರ್ ಕಾರ್ಡ್ ನೋಂದಣಿ ಮಾಡಲು ಯತ್ನಿಸಿದ ವ್ಯಕ್ತಿಯ ವಿರುದ್ಧ ದೂರು ..

Published On :
ನವದೆಹಲಿ: ಉಗ್ರ ಒಸಾಮಾ ಬಿನ್ ಲಾಡೆನ್ ಹೆಸರಲ್ಲಿ ಆಧಾರ್ ಕಾರ್ಡ್ ನೋಂದಣಿ ಮಾಡಲು ಯತ್ನಿಸಿದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.
ರಾಜಸ್ತಾನದ ಭಿಲ್ವಾರ ಮಂಡಲ್ ಪ್ರದೇಶದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ನೋಂದಣಿ ಸಿಬ್ಬಂದಿಯೊಬ್ಬರು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹೆಸರಲ್ಲಿ ಆಧಾರ್ ಕಾರ್ಡ್ ನೋಂದಣಿ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.
35 ವರ್ಷದ ಸದ್ದಾಂ ಮುನ್ಸೂರಿ ಎಂಬ ವ್ಯಕ್ತಿ ಲಾಡೆನ್ ಹೆಸರಲ್ಲಿ ಆಧಾರ್ ಕಾರ್ಡ್ ನೋಂದಣಿ ಮಾಡಲು ಯತ್ನಿಸಿದ್ದಾರೆ. ಆದರೆ ದಾಖಲೆಗಳನ್ನು ಪರಿಶೀಲಿಸುವ ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ ಅಭ್ಯರ್ಥಿಯ ವಿವರದಲ್ಲಿ ದೋಷ ಕಂಡು ಬಂದಿದ್ದು ಮನ್ಸೂರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆಂಗ್ಲ ದೈನಿಕ ಪತ್ರಿಕೆಯೊಂದು ವರದಿ ಮಾಡಿದೆ.
ಆಧಾರ್ ಕಾರ್ಡ್ ನೋಂದಣಿ ಮಾಡಲು ಅಭ್ಯರ್ಥಿಯ ವಿವರ ಸಲ್ಲಿಸುವಾಗ ಬಿನ್ ಲಾಡೆನ್ ವಿಳಾಸದಲ್ಲಿ ಅಬೋಟಾಬಾದ್ ನಿವಾಸಿ ಎಂದು ಬರೆಯಲಾಗಿದೆ. ಅದೇ ವೇಳೆ ಉಗ್ರ ಲಾಡೆನ್‍ನ ಅಸ್ಪಷ್ಟವಾದ ಫೋಟೊವೊಂದನ್ನು ಅಪ್ ಲೋಡ್ ಮಾಡಲಾಗಿದೆ. ಈತ ಬೆರಳಚ್ಚು ಅಥವಾ ಗುರುತಿನ ಸಾಕ್ಷ್ಯವಾಗಿ ಯಾವುದೇ ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಿಲ್ಲ ಎಂದು ಮಂಡಲ್ ಡೆಪ್ಯೂಟಿ ಎಸ್ಪಿ ಚಂಚಲ್ ಮಿಶ್ರಾ ಅವರು ಹೇಳಿದ್ದಾರೆ.
ಐಟಿ ಕಾಯ್ದೆಯಡಿಯಲ್ಲಿ ಮನ್ಸೂರಿ ವಿರುದ್ಧ ಎಫ್ ಐ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Osama bin LadenAadhaar cardRajasthanಒಸಾಮಾ ಬಿನ್ ಲಾಡೆನ್ರಾಜಸ್ತಾನಆಧಾರ್ ಕಾರ್ಡ್Saddam Mansuriಸದ್ದಾಂ ಮನ್ಸೂರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


