ಗಿನ್ನೀಸ್ ದಾಖಲೆಯ ಪುಟ ಸೇರಿದ 112 ಅಡಿ ಆದಿ ಯೋಗಿ ಶಿವನ ವಿಗ್ರಹ
ಕೊಯಂಬತ್ತೂರಿನಲ್ಲಿ ಈಶ ಫೌಂಡೇಷನ್ ನಿರ್ಮಿಸಿರುವ 112 ಅಡಿ ಎತ್ತರದ ಶಿವನ ವಿಗ್ರಹ ಗಿನ್ನೀಸ್ ವಿಶ್ವದಾಖಲೆಯ ಪುಟ ಸೇರಿದೆ.

Published On :
ಕೊಯಂಬತ್ತೂರು: ಕೊಯಂಬತ್ತೂರಿನಲ್ಲಿ ಈಶ ಫೌಂಡೇಷನ್ ನಿರ್ಮಿಸಿರುವ 112 ಅಡಿ ಎತ್ತರದ ಶಿವನ ವಿಗ್ರಹ ಗಿನ್ನೀಸ್ ವಿಶ್ವದಾಖಲೆಯ ಪುಟ ಸೇರಿದೆ.
ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಷನ್ ಆದಿ ಯೋಗಿಯ ವಿಗ್ರವನ್ನು ಸಂಪೂರ್ಣ ಉಕ್ಕಿನಿಂದ ನಿರ್ಮಿಸಲಾಗಿದ್ದು, ಫೆ.24 ರಂದು ಮಹಾಶಿವರಾತ್ರಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಆದಿ ಯೋಗಿಯ ವಿಗ್ರಹವನ್ನು ಉದ್ಘಾಟಿಸಿದ್ದರು.
ಆದಿ ಯೋಗಿಯ ವಿಗ್ರಹ ಗಿನ್ನೀಸ್ ದಾಖಲೆಯ ಪುಟ ಸೇರಿರುವುದರ ಬಗ್ಗೆ ಈಶ ಫೌಂಡೇಷನ್ ನ ಪ್ರತಿನಿಧಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಆಡಿ ಯೋಗಿ ಯೋಗದ ಮೂಲವಾಗಿದ್ದು, ಜನರಿಗೆ ಆದಿಯೋಗಿ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಿರ್ಮಾಣಗೊಂಡಿದ್ದಾಗಿದೆ, ಆದಿಯೋಗಿ ವಿಗ್ರಹ ವಿನ್ಯಾಸವನ್ನು ರಚಿಸುವುದಕ್ಕೆ 30 ತಿಂಗಳ ಕಾಲಾವಕಾಶ ತೆಗೆದುಕೊಂಡಿತ್ತು. ಹಾಗೂ ಅದನ್ನು ನಿರ್ಮಿಸಲು 8 ತಿಂಗಳು ಬೇಕಾಯಿತು ಎಂದಿದ್ದಾರೆ. ಈಶ ಫೌಂಡೇಷನ್ ನಿರ್ಮಿಸಿರುವ ಆದಿ ಯೋಗಿಯ ವಿಗ್ರಹವಿರುವ ಪ್ರದೇಶಕ್ಕೆ ಪ್ರತಿನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Coimbatoreಕೊಯಂಬತ್ತೂರುGuinness RecordsAdiyogi statueIsha Yoga Centreಆದಿಯೋಗಿ ವಿಗ್ರಹಈಶಾ ಫೌಂಡೇಷನ್ಗಿನ್ನೀರ್ ದಾಖಲೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


