ದೇಶ

ರಾಜಸ್ತಾನ: ಬೆಂಕಿ ಹೊತ್ತ ಮನೆ ಮುಂದೆ ಬಿಜೆಪಿ ಶಾಸಕನ ಸೆಲ್ಫಿ: ಕರ್ತವ್ಯ ಮರೆತ ಶಾಸಕನಿಗೆ ಜನರ ಟೀಕೆ!

ರಾಜಸ್ತಾನದ ಬಿಜೆಪಿ ಶಾಸಕರೊಬ್ಬರು ಬೆಂಕಿ ಹೊತ್ತು ಉರಿಯುತ್ತಿರುವ ಮನೆ ಮುಂದೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ರಾಜಸ್ತಾನ: ಬೆಂಕಿ ಹೊತ್ತ ಮನೆ ಮುಂದೆ ಬಿಜೆಪಿ ಶಾಸಕನ ಸೆಲ್ಫಿ: ಕರ್ತವ್ಯ ಮರೆತ ಶಾಸಕನಿಗೆ ಜನರ ಟೀಕೆ!
ಶಾಸಕ ತೆಗೆದ ಫೋಟೋ
Published On :

ಜೈಪುರ: ರಾಜಸ್ತಾನದ ಬಿಜೆಪಿ ಶಾಸಕರೊಬ್ಬರು ಬೆಂಕಿ ಹೊತ್ತು ಉರಿಯುತ್ತಿರುವ ಮನೆ ಮುಂದೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ರಾಜಸ್ತಾನದ ಭಾರತ್ ಪುರ ಜಿಲ್ಲೆಯ ಮನೆಯೊಂದು ನಿನ್ನೆ ಆಕಸ್ಮಿಕ ಅಗ್ನಿ ಅವಘಡದಿಂದಾಗಿ ಹೊತ್ತಿ ಉರಿಯುತ್ತಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ್ದ ಶಾಸಕ ಬಚ್ಚು ಸಿಂಗ್ ಅವರು ತಾವು ಸ್ಥಳಕ್ಕಾಗಮಿಸಿ ಮೇಲ್ವಿಚಾರಣೆ ನಡೆಸುತ್ತಿದ್ದೇನೆ  ಎಂಬುದನ್ನು ತೋರಿಸಲು ಸ್ಥಳದಿಂದ ಸೆಲ್ಫೆ ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಇದಕ್ಕೆ ವ್ಯಾಪಕ ಟೀಕೆಗಳು ಬಂದಿದ್ದು, ಇದರಿಂದ ಎಚ್ಚೆತ್ತ  ಶಾಸಕ ಬಚ್ಚು ಸಿಂಗ್ ಕೂಡಲೇ ಫೋಟೋವನ್ನು ಡಿಲೀಟ್ ಮಾಡಿದ್ದಾರೆ.

ಬಳಿಕ ಸ್ಪಷ್ಟನೆ ನೀಡಿರುವ ಶಾಸಕ ಅಧಿಕಾರಿಗಳ ಗಮನ ಸೆಳೆಯಬೇಕು ಎಂದ ಫೋಟೋವನ್ನು ಅಪ್ಲೋಡ್ ಮಾಡಿದ್ದೆ. ಆದರೆ ಇದು ಸೆಲ್ಫೆಯಲ್ಲ ಎಂದು ತೇಪೆ ಹಾಕಿದ್ದಾರೆ. ಸ್ಥಳದಲ್ಲಿ ನಾನಿದ್ದೇನೆ (ಜನ ಪ್ರತಿನಿಧಿ)..ರಕ್ಷಣಾ  ಕಾರ್ಯಾಚರಣೆ ತ್ವರಿತವಾಗಿ ಮಾಡಿ ಎನ್ನುವ ಸಂದೇಶ ಸಾರಲು ನಾನು ಫೋಟೋ ಅಪ್ಲೋಡ್ ಮಾಡಿದ್ದೆ ಎಂದು ಹೇಳಿದ್ದಾರೆ. ಇಂತಹ ದುರಂತಗಳು ಸಂಭವಿಸಿದಾಗ ಸೆಲ್ಪಿ ತೆಗೆದುಕೊಳ್ಳುವ ಮನಸ್ಥಿತಿ ನನ್ನದಲ್ಲ ಎಂದು ಬಚ್ಚು  ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಬಿಜೆಪಿ ಶಾಸಕರ ವರ್ತನೆಯನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಅವರು, ಇದೊಂದು ಬೇಜವಾಬ್ದಾರಿತನದ ವರ್ತನೆ ಎಂದು ಖಂಡಿಸಿದ್ದಾರೆ. ಅಲ್ಲದೆ ಅದೇನು ಸೆಲ್ಫೆ ತೆಗೆದುಕೊಳ್ಳುವ  ಸಮಯವಾಗಿರಲಿಲ್ಲ. ಫೋಟೋ ತೆಗೆಯುವ ಬದಲಿಗೆ 2 ಬಕೆಟ್ ನೀರು ತೆಗೆದುಕೊಂಡು ಮನೆ ಮೇಲೆ ಹಾಕಿ ಬಹುದಾಗಿತ್ತು. ಇದು ಅಲ್ಲಿದ್ದ ಜನರಿಗೆ ಸ್ಪೂರ್ತಿಯಾಗುತ್ತಿತ್ತು ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.