ದೇಶ

ಕಾಶ್ಮೀರಿ ಕಲ್ಲು ತೂರಾಟಗಾರರನ್ನು ಶೂಟ್ ಮಾಡಬೇಕು ಅನಿಸುತ್ತದೆ: ಹರಿಯಾಣ ಸಚಿವ

ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರುವವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು ಅನಿಸುತ್ತದೆ....

ಕಾಶ್ಮೀರಿ ಕಲ್ಲು ತೂರಾಟಗಾರರನ್ನು ಶೂಟ್ ಮಾಡಬೇಕು ಅನಿಸುತ್ತದೆ: ಹರಿಯಾಣ ಸಚಿವ
ಅನಿಲ್ ವಿಜ್
Published On :
ಚಂಡೀಗಢ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರುವವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು ಅನಿಸುತ್ತದೆ ಎಂದು ಹರಿಯಾಣದ ಹಿರಿಯ ಸಚಿವ ಅನಿಲ್ ವಿಜ್ ಅವರು ಬುಧವಾರ ಹೇಳಿದ್ದಾರೆ.
ಭದ್ರತಾ ಪಡೆ ಮೇಲೆ ಯಾರಾದರೂ ಕಲ್ಲು ತೂರಿದಾಗೆಲ್ಲ ಅವರನ್ನು ಶೂಟ್ ಮಾಡಬೇಕು ಅನಿಸುತ್ತದೆ. ಯೋಧರ ಮೇಲೆ ಕಲ್ಲು ತೂರಿದಾಗ ನನಗೆ ನನ್ನ ಮೇಲೆ ಕಲ್ಲು ತೂರಿದಂತಾಗುತ್ತದೆ ಮತ್ತು ಅವರನ್ನು ಗುಂಡಿಕ್ಕಿ ಸಾಯಿಸಬೇಕು ಅನಿಸುತ್ತದೆ ಎಂದು ಆರೋಗ್ಯ ಸಚಿವ ಅನಿಲ್ ವಿಜ್ ಅವರು ತಿಳಿಸಿದ್ದಾರೆ.
ಅನಿಲ್ ವಿಜ್ ಅವರು ಈ ಹಿಂದೆ ಮಹಾತ್ಮ ಗಾಂಧಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರ ಬ್ರ್ಯಾಂಡ್‌ ನೇಮ್‌ ದೊಡ್ಡದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಳಿಕ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆದಿದ್ದರು. 
ಕ್ಯಾಲೆಂಡರ್‌ನಲ್ಲಿ ಗಾಂಧಿ ಚಿತ್ರದ ಬದಲಿಗೆ ಮೋದಿ ಅವರ ಚಿತ್ರವನ್ನು ಬಳಸಿರುವುದು ಒಳ್ಳೆಯದಾಯಿತು. ಮೋದಿ ಅವರ ಬ್ರ್ಯಾಂಡ್‌ ನೇಮ್‌ ದೊಡ್ಡದು. ಗಾಂಧಿ ಚಿತ್ರದಿಂದ ಖಾದಿ ಉತ್ಪನ್ನಗಳ ಮಾರುಕಟ್ಟೆ ಕುಸಿದಿದೆ. ಖಾದಿ ಜತೆಗೆ ಮಹಾತ್ಮ ಗಾಂಧಿ ಹೆಸರು ಇರುವವರೆಗೆ ಖಾದಿ ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಜ್‌ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.