ನವೀನ್ ಪಟ್ನಾಯಕ್ ಸಂಪುಟ ಪುನಾರಚನೆಗೆ ಚಾಲನೆ, ಒಡಿಶಾದ 7 ಸಚಿವರ ರಾಜಿನಾಮೆ
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ತಮ್ಮ ಸಂಪುಟ ಪುನಾರಚನೆಗೆ ಚಾಲನೆ ನೀಡಿದ್ದು, ಶನಿವಾರ....

Published On :
ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ತಮ್ಮ ಸಂಪುಟ ಪುನಾರಚನೆಗೆ ಚಾಲನೆ ನೀಡಿದ್ದು, ಶನಿವಾರ ಅವರ ಸಂಪುಟ ಏಳು ಸಚಿವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ.
ನಿನ್ನೆಯಷ್ಟೇ ವಿಧಾನಸಭೆ ಸ್ಪೀಕರ್ ನಿರಂಜನ್ ಪೂಜಾರಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಒಡಿಶಾ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಸಂಜಯ್ ದಾಸ್ಬುರ್ಮಾ, ಇಂಧನ ಸಚಿವ ಪ್ರಣಬ್ ಪ್ರಕಾಶ್ ದಾಸ್, ಪಂಚಾಯ್ತಿ ಮತ್ತು ಕಾನೂನು ಸಚಿವ ಅರುಣ್ ಸಾಹೂ, ಉನ್ನತ ಶಿಕ್ಷಣ ಸಚಿವ ಪ್ರದೀಪ್ ಪನಿಗ್ರಾಹಿ, ವಸತಿ ಮತ್ತು ನಗರಾಭಿವೃದ್ದಿ ಸಚಿವ ಪುಷ್ಪೆಂದ್ರ ಸಿಂಗ್ ಡಿಯೊ, ಬುಡಕಟ್ಟು ಅಭಿವೃದ್ಧಿ ಸಚಿವ ಲಾಲ್ ಬಿಹಾರಿ ಹಿಮಿರಿಕಾ, ಕ್ರೀಡಾ ಸಚಿವ ಸುದಾಮ್ ಮರ್ನಾಡಿ ಮತ್ತು ಶಾಲೆ ಮತ್ತು ಸಮೂಹ ಶಿಕ್ಷಣ ಸಚಿವ ದೆಬಿ ಪ್ರಸಾದ್ ಮಿಶ್ರ ಅವರು ಸಚಿವ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ.
'ನನ್ನ ಕ್ಷೇತ್ರದ ಕಡೆ ಹೆಚ್ಚು ಗಮನ ನೀಡುವ ಉದ್ದೇಶದಿಂದ ನಾನು ಸ್ಪೀಕರ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ' ಎಂದು ರಾಜಿನಾಮೆ ನೀಡಿದ ನಿರಂಜನ್ ಪೂಜಾರಿ ಅವರು ವರದಿಗಾರರಿಗೆ ತಿಳಿಸಿದ್ದರು. ಹಣಕಾಸು ಸಚಿವ ಪ್ರದೀಪ್ ಅಮಿತ್ ಅವರು ನೂತನ ಸ್ಪೀಕರ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪಕ್ಷಕ್ಕೆ ಕೆಲಸ ಮಾಡುವುದಕ್ಕಾಗಿ ಸ್ವಯಂಪ್ರೇರಿತರಾಗಿ ಸಚಿವ ಸ್ಥಾನಕ್ಕೆ ನೀಡಿದ ಎಲ್ಲಾ ಶಾಸಕರಿಗೂ ಧನ್ಯವಾದ ಹೇಳಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ನಾಳೆ ಬೆಳಗ್ಗೆ ಸಂಪುಟ ಪುನಾರಚನೆ ಮಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವೀನ್ ಪಟ್ನಾಯಕ್Naveen PatnaikOdisha cabinet reshuffleeight ministers resignedಒಡಿಶಾ ಸಂಪುಟ ಪುನಾರಚನೆ8 ಸಚಿವರು ರಾಜಿನಾಮೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


