ದೇಶ

ಚೀನಾ ಹಿಂದೂ ಮಹಾಸಾಗರದಲ್ಲಿ ಆತಂಕ ಮೂಡಿಸುತ್ತಿದೆ: ಅಮೆರಿಕ

ಹಿಂದೂ ಮಹಾಸಾಗರವನ್ನು "ಸ್ಥಿರವಾಗಿರುವ ಸಾಗರ ಪ್ರದೇಶ" ಎಂದು ಅಮೆರಿಕಾ ಹೇಳಿದ್ದು, ಇದೇ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಚೀನಾದ ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) ಯೋಜನೆಯನ್ನು ಪ್ರಶ್ನಿಸಿದೆ.

ಚೀನಾ ಹಿಂದೂ ಮಹಾಸಾಗರದಲ್ಲಿ ಆತಂಕ ಮೂಡಿಸುತ್ತಿದೆ: ಅಮೆರಿಕ
ಚೀನಾ ಹಿಂದೂ ಮಹಾಸಾಗರದಲ್ಲಿ ಆತಂಕ ಮೂಡಿಸುತ್ತಿದೆ: ಅಮೆರಿಕ
Published On :
ನವದೆಹಲಿ: ಹಿಂದೂ ಮಹಾಸಾಗರವನ್ನು "ಸ್ಥಿರವಾಗಿರುವ ಸಾಗರ ಪ್ರದೇಶ" ಎಂದು ಅಮೆರಿಕಾ ಹೇಳಿದ್ದು, ಇದೇ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಚೀನಾದ ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) ಯೋಜನೆಯನ್ನು ಪ್ರಶ್ನಿಸಿದೆ. 
ಅಮೆರಿಕಾದ ಪೆಸಿಫಿಕ್ ಪ್ಲೀಟ್ ಕಮಾಂಡರ್ ಅಡ್ಮಿರಲ್ ಸ್ಕಾಟ್ ಸ್ವಿಫ್ಟ್ ಭಾರತದ ರಕ್ಷಣಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಚೀನಾ ನೌಕೆಗಳು ಒಬಿಒಆರ್ ಪ್ರವಾಸ ಮಾಡುತ್ತಿವೆ, ಚೀನಾದ ಈ ನಡೆಸ್ ಪ್ರಶ್ನಾರ್ಹವಾಗಿದೆ. ಹಿಂದೂ ಮಹಾಸಾಗರದಲ್ಲಿ ಚೀನಾದ ಅಸ್ತಿತ್ವ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಹಾಗೂ ಅಮೆರಿಕ ಹಿಂದೂ ಮಹಾಸಾಗರದಲ್ಲಿ ಸ್ಥಿರತೆ ಉಂಟು ಮಾಡುವುದಕ್ಕೆ ಏನು ಮಾಡಬಹುದು ಎಂಬುದನ್ನು ಸ್ಕಾಟ್ ಸ್ವಿಫ್ಟ್ ಚರ್ಚೆ ನಡೆಸಿದ್ದಾರೆ. 
ಹಿಂದೂ ಮಹಾಸಾಗರದಲ್ಲಿ ಚೀನಾ ಕ್ರಮಗಳು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಆತಂಕಕಾರಿ ವಾತವಾರಣ ನಿರ್ಮಿಸುತಿದೆ. ಚೀನಾದ ಒಬಿಒಆರ್ ಯೋಜನೆ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇಲ್ಲ. ನಾನು ಭೇಟಿ ನೀಡುವ ಪ್ರತಿ ರಾಷ್ಟ್ರದಲ್ಲೂ ಚೀನಾದ ಒಬಿಒಆರ್ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ ಎಂದು ಸ್ಕಾಟ್ ಸ್ವಿಫ್ಟ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.