ದೇಶ

ರಾಜಕೀಯ ಪ್ರೇಮಕಥೆ: ಐಎಎಸ್ ಅಧಿಕಾರಿಯ ಪತಿಯಾಗುತ್ತಿದ್ದಾರೆ ಕೇರಳ ಶಾಸಕ

ಅವರು ಒಬ್ಬ ಯುವ ರಾಜಕಾರಣಿ, ಅವಳು ಒಬ್ಬ ಐಎಎಸ್ ಅಧಿಕಾರಿ. ಇಬ್ಬರ ನಡುವೆ ಬಹು ಹಿಂದೆಯೇ ಪ್ರೇಮಾಂಕುರವಾಗಿದ್ದು,....

ರಾಜಕೀಯ ಪ್ರೇಮಕಥೆ: ಐಎಎಸ್ ಅಧಿಕಾರಿಯ ಪತಿಯಾಗುತ್ತಿದ್ದಾರೆ ಕೇರಳ ಶಾಸಕ
ಕೆ.ಎಸ್ .ಶಬರಿನಾಥನ್‌ ಮತ್ತು ಡಾ.ದಿವ್ಯಾ ಎಸ್ ಅಯ್ಯರ್
Published On :
ತಿರುವನಂತಪುರಂ: ಅವರು ಒಬ್ಬ ಯುವ ರಾಜಕಾರಣಿ, ಅವಳು ಒಬ್ಬ ಐಎಎಸ್ ಅಧಿಕಾರಿ. ಇಬ್ಬರ ನಡುವೆ ಬಹು ಹಿಂದೆಯೇ ಪ್ರೇಮಾಂಕುರವಾಗಿದ್ದು, ಈಗ ಉಭಯ ಕುಟುಂಬಗಳ ಸಮ್ಮತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 
ಕೇರಳದ ಕಾಂಗ್ರೆಸ್‌ ಶಾಸಕ ಕೆ.ಎಸ್ .ಶಬರಿನಾಥನ್‌ ಮತ್ತು ತಿರುವನಂತಪುರ ಉಪ ಜಿಲ್ಲಾಧಿಕಾರಿ ಡಾ.ದಿವ್ಯಾ ಎಸ್ ಅಯ್ಯರ್ ನಡುವಿನ ಸ್ನೇಹ ಪ್ರೀತಿಯಾಗಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.
ರಾಜಕಾರಣಿ ಹಾಗೂ ಐಎಎಸ್ ಅಧಿಕಾರಿಯ ನಡುವಿನ ಸ್ನೇಹಕ್ಕೆ ಸಂಬಂಧಿಸಿದ ವದಂತಿಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್ ಶಾಸಕ ಶಬರಿನಾಥನ್‌ ಅವರು, ಉಪ ಜಿಲ್ಲಾಧಿಕಾರಿ ದಿವ್ಯಾ ಹಾಗೂ ತಮ್ಮ ನಡುವಿನ ಸಂಬಂಧವನ್ನು ಕೊನೆಗೂ ಫೇಸ್ ಬುಕ್ ನಲ್ಲಿ ಬಹಿರಂಗಪಡಿಸಿದ್ದು, ಶೀಘ್ರದಲ್ಲೇ ಡಾ.ದಿವ್ಯ ಎಸ್. ಅಯ್ಯರ್ ಅವರೊಂದಿಗೆ ಮದುವೆಯಾಗುವುದಾಗಿ ತಿಳಿಸಿದ್ದಾರೆ.
ಶಬರಿನಾಥನ್ ಮತ್ತು ದಿವ್ಯಾ ವಿವಾಹಕ್ಕೆ ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿದ್ದು. ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ದಿವ್ಯಾ ಅಯ್ಯರ್ ಸದ್ಯ ತಿರುವನಂತಪುರಂ ಜಿಲ್ಲೆಯಲ್ಲಿ ಉಪ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಶಬರಿನಾಥನ್ ಅರುವಿಕ್ಕರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 
ಶಬರಿನಾಥನ್ ಕೇರಳದ ಮಾಜಿ ವಿಧಾನಸಭಾ ಸ್ಪೀಕರ್ ಕಾರ್ತಿಕೇಯನ್ ಅವರ ಪುತ್ರರಾಗಿದ್ದು, ಎಂಬಿಎ ಪದವಿ ಪಡೆದಿದ್ದಾರೆ. 2015ರಲ್ಲಿ ತಂದೆ ಕಾರ್ತಿಕೇಯನ್ ನಿಧನದ ನಂತರ ಅರುವಿಕ್ಕರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಶಬರಿನಾಥನ್ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 2016ರಲ್ಲಿ ನಡೆದ ವಿಧಾಸಭೆ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಇನ್ನು ಬಹುಮುಖ ಪ್ರತಿಭೆಯ ದಿವ್ಯಾ ಅಯ್ಯರ್ ಎಂಬಿಬಿಎಸ್ ಪದವಿ ಪಡೆದಿದ್ದು, ಬಳಿಕ ಐಎಎಸ್ ನಲ್ಲಿ 28 ನೇ ರ್ಯಾಂಕ್ ಪಡೆಯುವ ಮೂಲಕ ಉಪ ಜಿಲ್ಲಾಧಿಕಾರಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.