ಕೇವಲ ಯುದ್ಧವೊಂದೇ ಪರಿಹಾರವಾಗುವುದಾದರೆ, ಆಗಲಿ ಬಿಡಿ; ಹುತಾತ್ಮ ಯೋಧನ ಸಹೋದರ
ಕೇವಲ ಯುದ್ಧವೊಂದೇ ಪರಿಹಾರವಾಗುವುದಾದರೆ, ಯುದ್ಧ ಆಗಲು ಬಿಡಿ ಎಂದು ಹುತಾತ್ಮ ಯೋಧ ಪರಮ್ಜಿತ್ ಸಿಂಗ್ ಅವರ ಸಹೋದರ ಮಂಗಳವಾರ ಹೇಳಿದ್ದಾರೆ...

Published On :
ಟಾರ್ನ್ ತರಣ್: ಕೇವಲ ಯುದ್ಧವೊಂದೇ ಪರಿಹಾರವಾಗುವುದಾದರೆ, ಯುದ್ಧ ಆಗಲು ಬಿಡಿ ಎಂದು ಹುತಾತ್ಮ ಯೋಧ ಪರಮ್ಜಿತ್ ಸಿಂಗ್ ಅವರ ಸಹೋದರ ಮಂಗಳವಾರ ಹೇಳಿದ್ದಾರೆ.
ಯೋಧ ಶಿರಚ್ಛೇದ ಮಾಡಿರುವ ಪಾಕಿಸ್ತಾನ ಪೈಶಾಚಿಕ ಕೃತ್ಯಕ್ಕೆ ಪರಮ್ಜಿತ್ ಸಿಂಗ್ ಅವರ ಸಹೋದರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಕೇವಲ ಯುದ್ಧವೊಂದೇ ಪರಿಹಾರವಾಗುವುದಾದರೆ, ಪಾಕಿಸ್ತಾನದೊಂದಿಗೆ ಯುದ್ಧ ಮಾಡೋಣ. ಯುದ್ಧದೊಂದಿಗೆ ಸಮಸ್ಯೆಗೆ ಅಂತ್ಯ ಹಾಡೋಣ. ಒಂದು ವೇಳೆ ಮಾತುಕತೆಯಿಂದ ಸಮಸ್ಯೆ ಬಗೆಹರಿಯುವುದಾದರೆ, ಆ ಪ್ರಯತ್ನವನ್ನಾದರೂ ಕೇಂದ್ರ ಮಾಡಲಿ ಎಂದು ಹೇಳಿದ್ದಾರೆ.
ಪರಮ್ಜಿತ್ ಕೆಲ ದಿನಗಳ ಹಿಂದಷ್ಟೇ ಮನೆಯನ್ನು ಕಟ್ಟಿಸಿದ್ದ. ಮೇ.10 ರಂದು ಹೊಸ ಮನೆಗೆ ಬರಬೇಕಿತ್ತು. ಇದೀಗ ಆತನ ಬದಲು ಆದರ ದೇಹ ಮಾತ್ರ ಮನೆಗೆ ಬರುತ್ತಿದೆ. ಪರಮ್ಜಿತ್ ಬಗ್ಗೆ ನಮಗೆ ಹೆಮ್ಮೆಯಿಂದೆ. ಆತನ ತ್ಯಾಗವನ್ನು ನಾವು ಎಂದಿಗು ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಪರಮ್ಜಿತ್ ಅವರ ಹಿರಿಯ ಪುತ್ರಿ ಸಿಮ್ರನ್ ದೀಪ್ ಸಿಂಗ್ ಮಾತನಾಡಿ, ನನ್ನ ತಂದೆಯನ್ನು ಹುತಾತ್ಮನೆಂದು ಘೋಷಿಸಿರುವುದಕ್ಕೆ ನನಗೆ ಹೆಮ್ಮೆಯಿದೆ. ದೇಶಕ್ಕಾಗಿ ನನ್ನ ತಂದೆ ತ್ಯಾಗ ಮಾಡಿದ್ದಾರೆ. ಅವರ ಬಗ್ಗೆ ಹೆಮ್ಮೆಯಿಂದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


