ಸಿಎಂ ವೀರಭದ್ರ ವಿರುದ್ದ ಅಕ್ರಮ ಆಸ್ತಿ ಪ್ರಕರಣ: ಕೇಸ್ ವಜಾಗೆ 'ಹೈ' ನಕಾರ
ಸಿಬಿಐ ಅಧಿಕಾರಿಗಳು ತಮ್ಮ ವಿರುದ್ಧ ದಾಖಲಿಸಿರುವ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ರದ್ದು ಮಾಡಬೇಕೆಂದು ಕೋರಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಅವರ ಪತ್ನಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್...

Published On :
ನವದೆಹಲಿ: ಸಿಬಿಐ ಅಧಿಕಾರಿಗಳು ತಮ್ಮ ವಿರುದ್ಧ ದಾಖಲಿಸಿರುವ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ರದ್ದು ಮಾಡಬೇಕೆಂದು ಕೋರಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಅವರ ಪತ್ನಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾ ಮಾಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ವಿಪಿನ್ ಸಾಂಘಿಯವರು, ಪ್ರಕರಣವನ್ನು ರದ್ದು ಮಾಡಬೇಕೆಂಬ ವೀರಭದ್ರ ಸಿಂಗ್ ಅವರ ಮನವಿಯನ್ನು ವಜಾ ಮಾಡಿದ್ದಾರೆ. ಅಲ್ಲದೆ, 2015ರ ಅ.1ರಂದು ಹಿಮಾಚಲ ಪ್ರದೇಶ ಹೈಕೋರ್ಟ್ ಹೊರಡಿಸಿದ್ದ, 'ನ್ಯಾಯಾಲಯದ ಅನುಮತಿ ಇಲ್ಲದೆಯೇ ಬಂಧಿಸುವ, ಪ್ರಶ್ನಿಸುವ ಅಥವಾ ಚಾರ್ಜ್ ಶೀಟ್ ಸಲ್ಲಿಸುವಲ್ಲಿ ಸಿಬಿಐ'ನ್ನು ನಿರ್ಬಂಧಿಸುವ' ತಾತ್ಕಾಲಿಕ ಆದೇಶವನ್ನು ತೆರವುಗೊಳಿಸಿ ಸಿಬಿಐ ಮಾರ್ಗವನ್ನು ಸುಗಮಗೊಳಿಸಿದ್ದಾರೆ.
ರಿಟ್ ಪೆಟಿಷನ್'ನ್ನು ವಜಾ ಮಾಡಲಾಗಿದೆ. ಸ್ಟೇ ತೆರವುಗೊಳಿಸಲಾಗಿದೆ ಎಂದು ನ್ಯಾಯಾಯ ಹೇಳಿದೆ.
2009ರಿಂದ 2011ರವರೆಗೆ ಯುಪಿಎ ಸರ್ಕಾರದಲ್ಲಿ ಉಕ್ಕು ಸಚಿವರಾಗಿದ್ದ ವೇಳೆ ವೀರಭದ್ರ ಸಿಂಗ್ ಅವರು ರೂ.6.1 ಕೋಟಿ ಅಕ್ರಮ ಆಸ್ತಿ ಗಳಿಸಿದ್ದರೆಂಬ ಆರೋಪಗಳು ಕೇಳಿಬಂದಿದ್ದವು. ಪ್ರಕರಣ ಸಂಬಂಧ ಸಿಬಿಐ ಆಧಿಕಾರಿಗಳು ವೀರಭದ್ರ ಸಿಂಗ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು. ಅಲ್ಲದೆ, ಎಫ್ಐಆರ್ ಸಂಬಂಧ ಪ್ರಾಥಮಿಕ ತನಿಖೆಗೆ ಹಾಜರಾಗುವಂತೆ 2015ರ ಸೆ.23ರಂದು ಸಮನ್ಸ್ ಜಾರಿ ಮಾಡಿತ್ತು.
ತಮ್ಮ ಹಾಗು ತಮ್ಮ ಪತ್ನಿಯ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್ ನ್ನು ವಜಾ ಮಾಡುವಂತೆ ಸಿಂಗ್ ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ತಮ್ಮ ಮನೆ ಮೇಲೆ ದಾಳಿ ನಡೆಯುವ ಮೂಲಕ ಸಿಬಿಐ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿತ್ತು. ಅಲ್ಲದೆ, ತಮ್ಮ ವಿರುದ್ಧದ ಸಿಬಿಐ ಕ್ರಮವು ರಾಜಕೀಯ ವೈಷಮ್ಯ ಹಾಗೂ ಸೇಡಿನ ಕ್ರಮವಾಗಿತ್ತು ಎಂದು ವಾದಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disproportionate assets caseಅಕ್ರಮ ಆಸ್ತಿ ಪ್ರಕರಣCBIಸಿಬಿಐDelhi High Courtದೆಹಲಿ ಹೈಕೋರ್ಟ್ಹಿಮಾಚಲ ಪ್ರದೇಶHimachal PradeshVirbhadra Singhವೀರಭದ್ರ ಸಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


