ಕೆಎಫ್‌ಸಿ ಸೇರಿದಂತೆ 500 ಮಾಂಸಾಹಾರ ಅಂಗಡಿಗಳನ್ನು ಬಂದ್ ಮಾಡಿಸಿದ ಶಿವಸೇನೆ
ಕೆಎಫ್‌ಸಿ ಸೇರಿದಂತೆ ಮಾಂಸಾಹಾರ ಉತ್ಪನ್ನಗಳನ್ನು ಮಾರುವ ಗುರ್ ಗಾವ್ ನಲ್ಲಿರುವ ಸುಮಾರು 500ರಷ್ಟು ಅಂಗಡಿಗಳನ್ನು ಶಿವಸೇನಾ ಕಾರ್ಯಕರ್ತರು ಬಂದ್..

ಚಂಡೀಗಡ: ಕೆಎಫ್‌ಸಿ ಸೇರಿದಂತೆ ಮಾಂಸಾಹಾರ ಉತ್ಪನ್ನಗಳನ್ನು ಮಾರುವ ಗುರ್ ಗಾವ್ ನಲ್ಲಿರುವ ಸುಮಾರು 500ರಷ್ಟು ಅಂಗಡಿಗಳನ್ನು ಶಿವಸೇನಾ ಕಾರ್ಯಕರ್ತರು ಬಂದ್ ಮಾಡಿಸಿದ್ದಾರೆ.
ಮಾರ್ಚ್ 28ರಿಂದ ಏಪ್ರಿಲ್ 5ರವರೆಗೆ 9 ದಿನಗಳ ಕಾಲ ಹಿಂದೂಗಳು ಚೈತ್ರ ನವರಾತ್ರಿ ಆಚರಣೆ ಮಾಡುತ್ತಾರೆ. ನವರಾತ್ರಿ ಪ್ರಯುಕ್ತ ಮಾಂಸಾಹಾರ ಮಾರಾಟ ಮಾಡುವಂತಿಲ್ಲ. ಹಾಗಾಗಿ ಅಂಗಡಿಗಳನ್ನು ಬಂದ್ ಮಾಡಿಸಿದ್ದಾಗಿ ಶಿವಸೇನಾ ಕಾರ್ಯಕರ್ತರು ಹೇಳಿದ್ದಾರೆ.
ನವರಾತ್ರಿಯ ವೇಳೆ ಸಾಮಾನ್ಯವಾಗಿ ಇಲ್ಲಿನ ಅಂಗಡಿಯವರು ವ್ಯಾಪಾರ ನಡೆಸುವುದಿಲ್ಲ. ಆದರೆ ಕಳೆದ ವರ್ಷ ಹೆಚ್ಚಿನವರು ವ್ಯಾಪಾರ ನಡೆಸಿದ್ದರು. ಹಾಗಾಗಿ ಈ ಬಾರಿ ನಾವು ಈ ಅಭಿಯಾನ ಮಾಡಿದ್ದೇವೆ. ನವರಾತ್ರಿಯ ವೇಳೆ ಅಂಗಡಿಗಳನ್ನು ಮುಚ್ಚುವಂತೆ ನಾವು ಅವರಿಗೆ ಹೇಳಿದ್ದೇವೆ. ಮಾತ್ರವಲ್ಲದೆ ಮಂಗಳವಾರ ಅಂಗಡಿ ತೆರೆದು ವ್ಯಾಪಾರ ನಡೆಸಬಾರದು ಎಂದಿದ್ದೇವೆ. ಎಲ್ಲವೂ ಶಾಂತರೀತಿಯಲ್ಲೇ ನಡೆದಿದೆ ಎಂದು ಶಿವಸೇನೆಯ ಮಾಧ್ಯಮ ಸಂಯೋಜಕ ರೀತು ರಾಜ್ ಹೇಳಿದ್ದಾರೆ,
ಬಲವಂತವಾಗಿ ಯಾರೊಬ್ಬರೂ ಅಂಗಡಿಯನ್ನು ಮುಚ್ಚಿ ಎಂದು ಹೇಳುವಂತಿಲ್ಲ. ಹಾಗೇನಾದರೂ ಇದ್ದರೆ ಕ್ರಮ ತೆಗೆದುಕೊಳ್ಳಲಾಗುವುದು, ಆದರೆ ಇಲ್ಲಿಯವರೆಗೂ ಈ ಸಂಬಂಧ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸ್ ಕಮಿಷನರ್ ಸಂದೀಪ್ ಖಿರ್ವಾರ್ ಹೇಳಿದ್ದಾರೆ.
ಇನ್ನೂ ಕಳೆದ ವರ್ಷವು ಕಡ ಜೈನರ ಪರ್ಯೂಶನ್ (ಉಪವಾಸ ಮಾಡುವ ಸಮಯ) ವೇಳೆಯೂ ಮಾಂಸ ಮಾರಾಟ ಮಾಡಬಾರದೆಂದು ಬಲವಂತವಾಗಿ ಮಾಂಸದಂಗಡಿಗಳನ್ನು ಮುಚ್ಚಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


