ಪತಿಯ ಸಂಪಾದನೆಯನ್ನೇ ಅವಲಂಬಿಸಬೇಡಿ: ದೆಹಲಿ ಕೋರ್ಟ್ ತೀರ್ಪು
ತಮಗೆ ನೀಡುತ್ತಿರುವ ಜೀವನಾಂಶವನ್ನು ಹೆಚ್ಚಳ ಮಾಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ಮಹಿಳೆ ವಿರುದ್ಧ ಛಾಟಿ ಬೀಸಿರುವ ದೆಹಲಿ ಕೋರ್ಟ್, ಪತಿಯ ಸಂಪಾದನೆಯನ್ನೇ ಅವಲಂಬಿಸಬೇಡಿ ಎಂದು ಸಲಹೆ ನೀಡಿದೆ.

ನವದೆಹಲಿ: ತಮಗೆ ನೀಡುತ್ತಿರುವ ಜೀವನಾಂಶವನ್ನು ಹೆಚ್ಚಳ ಮಾಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ಮಹಿಳೆ ವಿರುದ್ಧ ಛಾಟಿ ಬೀಸಿರುವ ದೆಹಲಿ ಕೋರ್ಟ್, ಪತಿಯ ಸಂಪಾದನೆಯನ್ನೇ ಅವಲಂಬಿಸಬೇಡಿ ಎಂದು ಸಲಹೆ ನೀಡಿದೆ.
ದೆಹಲಿ ಮೂಲದ ವಿಚ್ಛೇಧಿತ ಮಹಿಳೆಯೊಬ್ಬಳು ತಮಗೆ ನೀಡಲಾಗುತ್ತಿರುವ ಜೀವನಾಂಶವನ್ನು 25 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಳು. ಈ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಸೆಷನ್ಸ್ ಕೋರ್ಟ್ ಜಡ್ಜ್ ಆರ್ ಕೆ ತ್ರಿಪಾಠಿ ಅವರು, ಪತಿಯ ಸಂಪಾದನೆಯನ್ನೇ ನೆಚ್ಚಿಕೊಂಡು, ಮನೆಯಲ್ಲಿ ಕುಳಿತು ಕಾಲಹರಣ ಮಾಡುವ ಮನೋಭಾವ ಸಲ್ಲದು ಎಂದು ಕಿಡಿಕಾರಿದ್ದಾರೆ. ಅಲ್ಲದೆ ದೂರುದಾರೆ ಸ್ವತಃ ಸ್ನಾತಕೋತ್ತರ ಪದವೀಧರೆಯಾಗಿದ್ದು, ಆಕೆಯೇ ಸಂಪಾದಿಸಬಹುದು. ಹೀಗಿದ್ದು ಪತಿಯ ಸಂಪಾದನೆಯನ್ನೇ ನೆಚ್ಚಿಕೊಂಡಿರುವುದು ಸರಿಯಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
"ಮಹಿಳೆ ತನ್ನ ಪರಿತ್ಯಕ್ತ ಪತಿಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದಾಳೆ. ಎಂ.ಎ, ಬಿ.ಎಡ್ ಮತ್ತು ಎಲ್‌ಎಲ್‌ಬಿ ವಿದ್ಯಾರ್ಹತೆ ಹೊಂದಿರುವ ಈಕೆ ಸ್ವಯಂ ಸಂಪಾದಿಸಲು ಸಾಕಷ್ಟು ಅವಕಾಶಗಳಿವೆ. ಅದು ಬಿಟ್ಟು ಮನೆಯಲ್ಲಿ ಸೋಮಾರಿಯಂತೆ ಕುಳಿತು ಪತಿಯ ಸಂಪಾದನೆಯನ್ನು ಅವಲಂಬಿಸಿರುವುದು ಸರಿಯಲ್ಲ" ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
ಮಹಿಳೆಗೆ ಜೀವನಾಂಶವಾಗಿ ಪತಿರಾಯ ಪ್ರತೀ ತಿಂಗಳೂ 5,000 ರೂ. ನೀಡಬೇಕೆಂದು 2008ರಲ್ಲಿ ನ್ಯಾಯಾಲಯ ಆದೇಶಿಸಿತ್ತು. ಆ ಬಳಿಕ ಜೀವನವೆಚ್ಚ ಹೆಚ್ಚಿರುವ ಕಾರಣ ಜೀವನಾಂಶದಲ್ಲೂ ಏರಿಕೆ ಮಾಡಬೇಕು ಎಂದು ಮಹಿಳೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ 2012ರಲ್ಲಿ ಶೇ.10ರಷ್ಟು ಹೆಚ್ಚಳ ಮಾಡಿ ನ್ಯಾಯಾಲಯ ಆದೇಶ ನೀಡಿತ್ತು. ಇದೀಗ ಈ ಮೊತ್ತವನ್ನು 25,000 ರೂ.ಗೆ ಹೆಚ್ಚಿಸಬೇಕು ಎಂದು ಮಹಿಳೆ ಮತ್ತೆ ಮನವಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


