ಉತ್ತರ ಪ್ರದೇಶ: ಕೈರಾನದ ಮಾಂಸ ಸಂಸ್ಕರಣ ಘಟಕ ಬಂದ್
ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳ ನಂತರ ಮಾಂಸ ಸಂಸ್ಕರಣ ಘಟಕವನ್ನು ಬಂದ್ ಮಾಡಿಸಲಾಗುತ್ತಿದ್ದು, ಕೈರಾನದಲ್ಲಿರುವ ಅತಿ ಬೃಹತ್ ಮಾಂಸ ಸಂಸ್ಕರಣ ಘಟಕವನ್ನು ಬಂದ್ ಮಾಡಲಾಗಿದೆ.

Published On :
ಮುಜಾಫರ್ ನಗರ: ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳ ನಂತರ ಮಾಂಸ ಸಂಸ್ಕರಣ ಘಟಕವನ್ನು ಬಂದ್ ಮಾಡಿಸಲಾಗುತ್ತಿದ್ದು, ಕೈರಾನದಲ್ಲಿರುವ ಅತಿ ಬೃಹತ್ ಮಾಂಸ ಸಂಸ್ಕರಣ ಘಟಕವನ್ನು ಬಂದ್ ಮಾಡಲಾಗಿದೆ.
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಿಜಯ ಪ್ರಕಾಶ್ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಅಕ್ರಮ ನಡೆಯುತ್ತಿರುವುದು ಪತ್ತೆಯಾಗಿದ್ದು, ಮಾಂಸ ಸಂಸ್ಕರಣ ಘಟಕವನ್ನು ಬಂದ್ ಮಾಡಿದ್ದಾರೆ. ಥಾನಾ ಭವನ್, ಜಲಾಲಬಾದ್ ಶಾಮ್ಲಿಯಲ್ಲಿ ಪರವಾನಗಿ ಇಲ್ಲದೇ ನಡೆಸಲಾಗುತ್ತಿದ್ದ ಮಾಂಸದ ಅಂಗಡಿಗಳನ್ನೂ ಸಹ ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ. ಇನ್ನು ಮುಜಾಫರ್ ನಗರ ಜಿಲ್ಲೆಗಳಲ್ಲೂ ಹಲವು ಮಾಂಸದ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.
ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ತೆರವುಗೊಳಿಸಲಾಗುತ್ತಿದೆ. ಇದರ ಭಾಗವಾಗಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಸಂಸ್ಕರಣ ಘಟಕವನ್ನೂ ಬಂದ್ ಮಾಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


