ದೇಶ

ಬಾಬ್ರಿ ಮಸೀದಿ ಪ್ರಕರಣ ಒಂದು ಆಸ್ತಿಯ ಮಾಲಿಕತ್ವದ ವಿವಾದ: ಅಸಾದುದ್ದೀನ್ ಓವೈಸಿ

ಬಾಬ್ರಿ ಮಸೀದಿ ಪ್ರಕರಣವೊಂದು ಆಸ್ತಿ ವಿವಾದವಾಗಿದ್ದು, ಬಿಜೆಪಿ ನಾಯಕ ವಿರುದ್ಧ ಪಿತೂರಿ ಮೊಕದ್ದಮೆಗಳೇನಾದರೂ ದಾಖಲಾಗುತ್ತದೆಯೇ ಎಂಬುದರ ಕುರಿತು ಕಾಯುತ್ತಿದ್ದೇನೆಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್...

ಬಾಬ್ರಿ ಮಸೀದಿ ಪ್ರಕರಣ ಒಂದು ಆಸ್ತಿಯ ಮಾಲಿಕತ್ವದ ವಿವಾದ: ಅಸಾದುದ್ದೀನ್ ಓವೈಸಿ
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
Published On :
ಹೈದರಾಬಾದ್: ಬಾಬ್ರಿ ಮಸೀದಿ ಪ್ರಕರಣವೊಂದು ಆಸ್ತಿಯ ಮಾಲೀಕತ್ವದ ವಿವಾದವಾಗಿದ್ದು, ಬಿಜೆಪಿ ನಾಯಕ ವಿರುದ್ಧ ಪಿತೂರಿ ಮೊಕದ್ದಮೆಗಳೇನಾದರೂ ದಾಖಲಾಗುತ್ತದೆಯೇ ಎಂಬುದರ ಕುರಿತು ಕಾಯುತ್ತಿದ್ದೇನೆಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರು ಮಂಗಳವಾರ ಹೇಳಿದ್ದಾರೆ. 
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಬಾಬ್ರಿ ಮಸೀದಿ ಪ್ರಕರಣ ಆಸ್ತಿ ವಿವಾದ ಪ್ರಕರಣವಾಗಿದ್ದು, ಭೂಮಿ ಮುಸ್ಲಿಮರಿಗೆ ಸಂಬಂಧಿಸಿದ್ದೋ ಅಥವಾ ಹಿಂದೂಗಳಿಗೆ ಸಂಬಂಧಿಸಿದ್ದೋ ಎಂಬುದರ ವಿವಾದವಾಗಿದೆ. ಪ್ರಕರಣ ಸಂಬಂಧ ಬಿಜೆಪಿ ನಾಯಕರರಾದ ಎಲ್. ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ವಿರುದ್ಧವೇನಾದರೂ ಪಿತೂರಿ ಪ್ರಕರಣಗಳೇನಾದರೂ ದಾಖಲಾಗುತ್ತವೆಯೇ ಎಂಬುದರ ಕುರಿತು ಆದೇಶ ಕೇಳಲು ಕಾಯುತ್ತಿದ್ದೇನೆಂದು ಹೇಳಿಕೊಂಡಿದ್ದಾರೆ. 
ಬಾಬ್ರಿ ಮಸೀದಿ ಪ್ರಕರಣ ಆಸ್ತಿ ವಿವಾದವಾಗಿದ್ದು, ಅಲಹಾಬಾದ್ ನ್ಯಾಯಾಲಯ ಪ್ರಕರಣವನ್ನು ತಪ್ಪಾಗಿ ನಿರ್ಧರಿಸಿದೆ. ಹೀಗಾಗಿಯ ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು ಎಂಬುದನ್ನು ಎಲ್ಲರೂ ನೆನಪಿಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ದಲಿತ ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರ ಕುರಿತಂತೆ ಮಾತನಾಡಿರುವ ಅವರು, ದಲಿತರಿಗೆ ಸ್ಥಾನಮಾನ ನೀಡದೇ ಇರುವುದು ಮೂಲಭೂತ ಹಕ್ಕಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ದಲಿತ ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರಿಗೆ ಸ್ಥಾನಮಾನ ನೀಡುವ ವಿಚಾರ ಸಂಬಂಧ ಹಲವು ವರ್ಷಗಳಿಂದಲೂ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಲೇ ಇದೆ. ಪ್ರಕರಣ ಈ ವರೆಗೂ ಇತ್ಯರ್ಥಗೊಂಡಿಲ್ಲ ಈ ಪ್ರಕರಣವನ್ನೂ ಸುಪ್ರೀಂಕೋರ್ಟ್ ಇತ್ಯರ್ಥಪಡಿಸಬೇಕಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.