ದೇಶ

ಹಿಂಸಿಸುವ ಮಕ್ಕಳನ್ನು ಪೋಷಕರು ಮನೆಯಿಂದ ಹೊರ ಹಾಕಬಹುದು: ದೆಹಲಿ ಹೈಕೋರ್ಟ್

ಆಸ್ತಿಗಾಗಿ ಹೆತ್ತವರನ್ನು ಹೊಡೆಯುವುದು, ಬೆದರಿಕೆ ಹಾಕುವುದು ಹಾಗೂ ಹಿಂಸೆ ನೀಡುವ ಪ್ರೌಢಾವಸ್ಥೆಯ ಗಂಡು ಅಥವಾ ಹೆಣ್ಣು ಮಕ್ಕಳನ್ನು ಪೋಷಕರು ಮನೆಯಿಂದ ಹೊರಹಾಕಬಹುದು ಎಂದು ದೆಹಲಿ ಹೈಕೋರ್ಟ್ ಗುರುವಾರ...

ಹಿಂಸಿಸುವ ಮಕ್ಕಳನ್ನು ಪೋಷಕರು ಮನೆಯಿಂದ ಹೊರ ಹಾಕಬಹುದು: ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್
Published On :
ನವದೆಹಲಿ: ಆಸ್ತಿಗಾಗಿ ಹೆತ್ತವರನ್ನು ಹೊಡೆಯುವುದು, ಬೆದರಿಕೆ ಹಾಕುವುದು ಹಾಗೂ ಹಿಂಸೆ ನೀಡುವ ಪ್ರೌಢಾವಸ್ಥೆಯ  ಗಂಡು ಅಥವಾ ಹೆಣ್ಣು ಮಕ್ಕಳನ್ನು ಪೋಷಕರು ಮನೆಯಿಂದ ಹೊರಹಾಕಬಹುದು ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ. 
ವಯಸ್ಸಿಗೆ ಬಂದ ಮಕ್ಕಳು ಹೆತ್ತವರಿಗೆ ಹಿಂಸೆ ನೀಡುತ್ತಿದ್ದರೂ ತಮ್ಮ ಜೊತೆಯಲ್ಲಿಯೇ ಮನೆಯಲ್ಲಿ ಇರಿಸಿಕೊಳ್ಳಲೇಬೇಕೆಂಬ ಯಾವುದೇ ಕಾನೂನು ಬದ್ಧತೆಗಳಿಲ್ಲ. ವಯಸ್ಸಾದವರು ತಾವು ತಮ್ಮ ಮನೆಯಲ್ಲಿ ಶಾಂತಿಯುತ ಜೀವನವನ್ನು ನಡೆಸುವುದಕ್ಕಾಗಿ ಹಿಂಸೆ ನೀಡುವ ಮಕ್ಕಳನ್ನು ಮನೆಯಿಂದ ಹೊರಗೆ ಹಾಕಬಹುದು ಎಂದು ದೆಹಲಿ ಹೈ ಕೋರ್ಟ್'ನ ನ್ಯಾಯಧೀಶ ಮನಮೋಹನ್ ಅವರು 2007ರ ಹೆತ್ತವರು ಹಾಗೂ ಹಿರಿಯ ನಾಗರೀಕರ ಕಲ್ಯಾಣ ಮತ್ತು ನಿರ್ವಹಣೆ ಕಾಯ್ದೆಯಲ್ಲಿನ ಅಂಶಗಳನ್ನು ವ್ಯಾಖ್ಯಾನಿಸಿದ್ದಾರೆ. ಅಲ್ಲದೆ, ಕಾಯ್ದೆ ಸೆ.32 ಹಾಗೂ ಸೆ.22 (2)ರ ಅಡಿ ಈ ಸಂಬಂಧದ ನಿಯಮಗಳಿಗೆ ಸೂಕ್ತ ತಿದ್ದುಪಡಿಯನ್ನು ಮಾಡುವಂತೆ ಎನ್ ಸಿಟಿಗೆ ಆದೇಶ ನೀಡಿದ್ದಾರೆ. 
ಪ್ರೌಢಾವಸ್ಥೆಯ ಮಗನು ವಿವಾಹವಾಗಿರಲಿ ಅಥವಾ ಆಗದೇ ಇರಲಿ, ಆತನಿಗೆ ತನ್ನ ಪೋಷಕರು ಸ್ವಂತ ಮನೆಯಲ್ಲಿ ಅಥವಾ ಅವರು ವಾಸಿಸುವ ಮನೆಯಲ್ಲಿ ಅವರ ಇಚ್ಛೆಗೆ ವಿರುದ್ಧ ಜೀವನ ನಡೆಸುವ ಕಾನೂನು ಸಮ್ಮತ ಹಕ್ಕನ್ನು ಹೊಂದಿರುವುದಿಲ್ಲ ಎಂದು ಕಳೆದ ವರ್ಷ 2016ರ ನವೆಂಬರ್ ತಿಂಗಳಿನಲ್ಲಿ ಕೋರ್ಟ್ ತೀರ್ಪು ನೀಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.