ದೇಶ

ಹೋಳಿ ಪ್ರಯುಕ್ತ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ; ಸಂತೋಷ, ಪ್ರೀತಿ ಹರಡುವ ಆಶಯ

ಬಣ್ಣದೋಕುಳಿ ಹಬ್ಬ ಹೋಳಿ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ...

ಹೋಳಿ ಪ್ರಯುಕ್ತ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ; ಸಂತೋಷ, ಪ್ರೀತಿ ಹರಡುವ ಆಶಯ
ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಹೂವಿನ ದಳಗಳಿಂದ ಬಿಜೆಪಿ ಕಾರ್ಯಕರ್ತರ ಸ್ವಾಗತ.
Published On :
ನವದೆಹಲಿ: ಬಣ್ಣದೋಕುಳಿ ಹಬ್ಬ ಹೋಳಿ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ. 
ಹೋಳಿ ಎಲ್ಲೆಡೆ ಸಂತೋಷ ಮತ್ತು ಹರುಷವನ್ನು ಪಸರಿಸಲಿ. ಎಲ್ಲರಲ್ಲಿ ಪ್ರೀತಿಯನ್ನುಂಟುಮಾಡಲಿ ಎಂದು ಶುಭಾಶಯ ತಿಳಿಸಿದ್ದಾರೆ.ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ದೇಶದ ಜನತೆಗೆ ಶುಭ ಕೋರಿದ್ದು ಸಮಾಜದ ನಿರ್ಗತಿಕರಿಗೆ ಮತ್ತು ದೀನರ ಜೊತೆ ಸಂತೋಷ ಮತ್ತು ಹರ್ಷವನ್ನು ಹಂಚಿಕೊಳ್ಳಿ ಎಂದು ಹೇಳಿದ್ದಾರೆ.
ಕಾಮನಬಿಲ್ಲಿನ ಏಳು ಬಣ್ಣಗಳಂತೆ ಭಾರತದ ವೈವಿಧ್ಯ ಸಂಸ್ಕೃತಿ, ಕಲೆ ಮಧ್ಯೆ ಏಕತೆ, ಭಾತೃತ್ವವನ್ನು ನೀಡಲಿ. ದೇಶದಲ್ಲಿ ಶಾಂತಿ, ಸಮೃದ್ಧತೆಗೆ ನಾಂದಿ ಹೋಳಿ ಹಬ್ಬ ನಾಂದಿ ಹಾಡಲಿ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಇತರ ಸಚಿವರಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಎಂ.ವೆಂಕಯ್ಯ ನಾಯ್ಡು ಕೂಡ ಹೋಳಿ ಹಬ್ಬದ ಪ್ರಯುಕ್ತ ಜನತೆಗೆ ಶುಭ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.