ಅಮೆರಿಕ: ಪಾಕ್ ನ್ನು ಭಯೋತ್ಪಾದನೆಯ ಪ್ರವರ್ತಕನನ್ನಾಗಿ ಘೋಷಿಸುವ ಮಸೂದೆ ಮಂಡನೆ
ಅಮೆರಿಕಾದ ಪ್ರಭಾವಿ ಕಾಂಗ್ರೆಸ್ ಸದಸ್ಯರೊಬ್ಬರು ಪಾಕಿಸ್ತಾನವನ್ನು ಭಯೋತ್ಪಾದನೆಯ ಪ್ರವರ್ತಕ ಎಂದು ಘೋಷಿಸುವ ಮಸೂದೆ ಮಂಡಿಸಿದ್ದಾರೆ.

Published On :
ನವದೆಹಲಿ: ಅಮೆರಿಕಾದ ಪ್ರಭಾವಿ ಕಾಂಗ್ರೆಸ್ ಸದಸ್ಯರೊಬ್ಬರು ಪಾಕಿಸ್ತಾನವನ್ನು ಭಯೋತ್ಪಾದನೆಯ ಪ್ರವರ್ತಕ ಎಂದು ಘೋಷಿಸುವ ಮಸೂದೆ ಮಂಡಿಸಿದ್ದಾರೆ.
ಪಾಕಿಸ್ತಾನವನ್ನು ಕೇವಲ ಭಯೋತ್ಪಾದನೆಯ ಪ್ರವರ್ತಕ ರಾಷ್ಟ್ರ ಎಂದಷ್ಟೇ ಅಲ್ಲದೇ, ನಂಬಲರ್ಹವಲ್ಲದ ರಾಷ್ಟ್ರ ಎಂದು ಘೋಷಿಸುವುದಕ್ಕೂ ರಿಪಬ್ಲಿಕನ್ ಪಕ್ಷದ ಸಂಸದ ಟೆಡ್ ಪೋ ಮಸೂದೆಯನ್ನು ಮಂಡಿಸಿದ್ದಾರೆ. ಟೆಡ್ ಪೋ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಉಪಸಮಿತಿಯ ಅಧ್ಯಕ್ಷರೂ ಆಗಿದ್ದು. ಪಾಕಿಸ್ತಾನ ಭಯೋತ್ಪಾದನೆಯನ್ನು ಉತ್ತೇಜಿಸುವುದಷ್ಟೇ ಅಲ್ಲದೇ ಅಮೆರಿಕಾದ ಶತ್ರುಗಳಿಗೆ ಹಲವು ವರ್ಷಗಳಿಂದ ಕುಮ್ಮಕ್ಕು ನೀಡುತ್ತಿದೆ ಎಂದೂ ಟೆಡ್ ಪೋ ಆರೋಪಿಸಿದ್ದಾರೆ.
ಒಸಾಮಾ ಬಿನ್ ಲ್ಯಾಡೆನ್ ಗೆ ಆಶ್ರಯ ನೀಡುವುದರಿಂದ ಹಿಡಿದು, ಹಕ್ಕಾನಿ ಉಗ್ರ ಜಾಲದೊಂದಿಗೆ ನಿಕಟ ಸಂಪರ್ಕದ ವರೆಗೆ ಪಾಕಿಸ್ತಾನ ಭಯೋತ್ಪಾದನೆ ವಿಷಯದಲ್ಲಿ ಯಾರೊಂದಿಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಬಹುದಾಗಿದೆ, ಪಾಕಿಸ್ತಾನ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವುದರಿಂದ ಪಾಕಿಸ್ತಾನಕ್ಕೆ ನೀಡುವ ನೆರವನ್ನು ಸ್ಥಗಿತಗೊಳಿಸಲು ಅಮೆರಿಕಾಗೆ ಇದು ಸೂಕ್ತ ಸಮಯ ಎಂದು ಟೆಡ್ ಪೋ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


