ದೇಶ

ಮೋದಿಗೆ ವಯಸ್ಸಾಗಿದೆ, ಬಳಲಿದ್ದಾರೆ; ಉತ್ತರ ಪ್ರದೇಶಕ್ಕೆ ಯುವಕರ ಸರ್ಕಾರ ಸಿಗಲಿದೆ: ರಾಹುಲ್

ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಯಸ್ಸಾಗಿದೆ, ಬಳಲಿಕೆ ಕಾಡುತ್ತಿರಬೇಕು ಎಂದು ಹೇಳಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಎಸ್ ಪಿ ಸೇರಿ ಉತ್ತರ ಪ್ರದೇಶದಲ್ಲಿ ಯುವಕರ ಸರ್ಕಾರ....

ಮೋದಿಗೆ ವಯಸ್ಸಾಗಿದೆ, ಬಳಲಿದ್ದಾರೆ; ಉತ್ತರ ಪ್ರದೇಶಕ್ಕೆ ಯುವಕರ ಸರ್ಕಾರ ಸಿಗಲಿದೆ: ರಾಹುಲ್
ರಾಹುಲ್ ಗಾಂಧಿ
Published On :
ಜೌನ್ ಪುರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಯಸ್ಸಾಗಿದೆ, ಬಳಲಿಕೆ ಕಾಡುತ್ತಿರಬೇಕು ಎಂದು ಹೇಳಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಪಕ್ಷ ಹಾಗೂ ಮಿತ್ರ ಪಕ್ಷ ಎಸ್ ಪಿ ಸೇರಿ ಉತ್ತರ ಪ್ರದೇಶದಲ್ಲಿ ಯುವಕರ ಸರ್ಕಾರ ರಚಿಸುವುದಾಗಿ ಹೇಳಿದ್ದಾರೆ. 
ಉತ್ತರ ಪ್ರದೇಶದಲ್ಲಿ ಯುವಕರ ಸರ್ಕಾರ ರಚನೆಯಾಗಲಿದೆ. ಉತ್ತರ ಪ್ರದೇಶವನ್ನು ವಿಶ್ವದ ಫ್ಯಾಕ್ಟರಿ(ಕೈಗಾರಿಕೆ)ಯನ್ನಾಗಿ ಮಾಡುತ್ತೇವೆ ಹಾಗೂ ಅಮೆರಿಕಾದ ಮಾಜಿ ಪ್ರಥಮ ಮಹಿಳೆ ಮಿಷೆಲ್ ಒಬಾಮ ಅವರ ಮನೆಯ ಅಡುಗೆ ಕೋಣೆಯಲ್ಲಿ ಮೇಡ್ ಇನ್ ಜೌನ್ ಪುರದ ಪಾತ್ರೆಗಳಿರುವಂತಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಯಸ್ಸಾಗಿದೆ. ಆದ್ದರಿಂದ ಉತ್ತರ ಪ್ರದೇಶದಲ್ಲಿ ಯುವಕರ ಸರ್ಕಾರ ರಚನೆಯಾಗಲಿದೆ. ಮೇಡ್ ಇನ್ ಉತ್ತರ ಪ್ರದೇಶ ಗುರುತನ್ನು ಹೊಂದಿರುವ ಉತ್ಪನ್ನಗಳು ವಿಶ್ವದ ಮಾರುಕಟ್ಟೆಗೆ ಪರಿಚಯವಾಗಲಿದೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. 
"ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹಾಯ ಮಾಡಬೇಕೆಂದು ನಾನು ಅಖಿಲೇಶ್ ಅವರಿಗೆ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಾಂತಿ ಅಗತ್ಯವಿದೆ. ನೀವು ಮುಖ್ಯಮಂತ್ರಿಯಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಲ್ಪ ವಿಶ್ರಾಂತಿ ಪಡೆಯಲಿ" ಎಂದು ಹೇಳಿರುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.