ದೇಶ

ಕೊನೆಗೂ ಜಿಎಸ್ ಟಿ ಕರಡು ಮಸೂದೆಗೆ ಒಪ್ಪಿಗೆ: ಜುಲೈ 1ರಿಂದ ಅನುಷ್ಠಾನ ಸಾಧ್ಯತೆ

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಯನ್ನು ಜುಲೈ 1 ರಿಂದ ಜಾರಿಗೆ ತರುವ ಹಾದಿ ಸುಗಮವಾಗುತ್ತಿದೆ. ಮಾರ್ಚ್ 9 ರಿಂದ ನಡೆಯುವ ಬಜೆಟ್ ಅಧಿವೇಶನದಲ್ಲಿ ...

ಕೊನೆಗೂ ಜಿಎಸ್ ಟಿ ಕರಡು ಮಸೂದೆಗೆ ಒಪ್ಪಿಗೆ: ಜುಲೈ 1ರಿಂದ ಅನುಷ್ಠಾನ ಸಾಧ್ಯತೆ
ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಜಿಎಸ್ ಟಿ ಸಭೆ
Published On :

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಯನ್ನು ಜುಲೈ 1 ರಿಂದ ಜಾರಿಗೆ ತರುವ ಹಾದಿ ಸುಗಮವಾಗುತ್ತಿದೆ. ಮಾರ್ಚ್ 9 ರಿಂದ ನಡೆಯುವ ಬಜೆಟ್ ಅಧಿವೇಶನದಲ್ಲಿ ಮಸೂದೆಗೆ ಶಾಸನಾತ್ಮಕ ಒಪ್ಪಿಗೆ ಪಡೆಯುವ ವಿಶ್ವಾಸವಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಜಿಎಸ್ ಟಿ ಮಂಡಳಿಯ ಸಭೆ ಬಳಿಕ ಮಾತನಾಡಿದ ಅವರು ಕೇಂದ್ರದ ಜಿಎಸ್ ಟಿ ಮತ್ತು ಅಂತರ ರಾಜ್ಯ ವಹಿವಾಟಿಗೆ ಸಂಬಂಧಿಸಿದ ಸಮಗ್ರ ಕರಡು ಮಸೂದೆಗೆ ಜಿಎಸ್ ಟಿ ಮಂಡಳಿ ಒಪ್ಪಿಗೆ ನೀಡಿದೆ.  ಆದರೆ ರಾಜ್ಯಗಳಿಗೆ ಸಂಬಂಧಿಸಿದ ಯುಟಿ-ಜಿಎಸ್ ಟಿ ಮತ್ತು ಕೇಂದ್ರಾಡಳಿತ ಮಸೂದೆಗಳಿಗೆ ಮಾರ್ಚ್ 16 ರಂದು ನಡೆಯಲಿರುವ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದ್ದಾರೆ.

ಗರಿಷ್ಠ ಶೇ. 40 ರ ವರೆಗೂ ತೆರಿಗೆ ವಿಧಿಸಲು (ಶೇ.20 ರಷ್ಟು ಕೇಂದ್ರ ಮತ್ತು ಶೇ.20 ರಷ್ಟು ರಾಜ್ಯಗಳು) ಜಿಎಸ್ ಟಿ ಮಸೂದೆಯಲ್ಲಿ ಅವಕಾಶವಿದೆ. ಆದರೆ ತೆರಿಗೆ ದರವನ್ನು ಈ ಹಿಂದೆ ಮಂಜಳಿಯು ಒಪ್ಪಿಗೆ ನೀಡಿರುವ ಹಂತಗಳಲ್ಲಿಯೇ (ಶೇ.5, ಶೇ.12, ಶೇ.18 ಮತ್ತು ಶೇ. 28) ಇಡಲಾಗುವುದು ಎಂದು ಅವರು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.