ಅಸಹಿಷ್ಣುತೆ ವಿವಾದ: 'ಭಾರತ ಎಂದಿಗೂ ಹೀರೋ' ಎಂದ ಕಿರಣ್ ರಿಜಿಜು
ಯಾರು ಏನೇ ಸಮರ್ಥಿಸಿಕೊಂಡರೂ, ದೇಶವನ್ನು ಯಾರೇ ಪ್ರತಿನಿಧಿಸಿದರೂ ಭಾರತ ಎಂದಿಗೂ ಹೀರೋ ಎಂದು ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಗುರುವಾರ ಹೇಳಿದ್ದಾರೆ...

Published On :
ನವದೆಹಲಿ: ಯಾರು ಏನೇ ಸಮರ್ಥಿಸಿಕೊಂಡರೂ, ದೇಶವನ್ನು ಯಾರೇ ಪ್ರತಿನಿಧಿಸಿದರೂ ಭಾರತ ಎಂದಿಗೂ ಹೀರೋ ಎಂದು ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಗುರುವಾರ ಹೇಳಿದ್ದಾರೆ.
ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್ಮೆಹರ್ ಕೌರ್ ಅವರ ಪ್ರಕರಣ ಸಂಬಂಧ ಎದ್ದಿರುವ ಅಸಹಿಷ್ಣುತೆ ವಿವಾದ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಯಾರು ಏನೇ ಸಮರ್ಥಿಸಿಕೊಂಡರೂ, ಕ್ರೀಡಾಪಟುಗಳು, ಯೋಧರು, ವಿಜ್ಞಾನಿಗಳು, ಶಿಕ್ಷಕರು, ರೈತರು, ವೈದ್ಯರು, ಕಾರ್ಮಿಕರು, ಇಂಜಿನಿಯರ್, ವ್ಯಾಪಾರಸ್ಥರೂ ಯಾರೇ ದೇಶವನ್ನು ಪ್ರತಿನಿಧಿಸಿದರೂ ಭಾರತ ಎಂದಿಗೂ ಹೀರೋ ಆಗಿರುತ್ತದೆ ಎಂದು ಹೇಳಿದ್ದಾರೆ.
ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಘರ್ಷಣೆ ಸಂಬಂಧ ಎಬಿವಿಪಿ ವಿರುದ್ದ ಕಿಡಿಕಾರಿದ್ದ ಗುರ್ಮೆಹರ್ ಕೌರ್ ಅವರು, ಎಬಿವಿಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲ ಪೋಸ್ಟ್ ಗಳನ್ನು ಹಾಕಿದ್ದರು. ನನ್ನ ತಂದೆ ಸಾವಿಗೆ ಪಾಕಿಸ್ತಾನ ಕಾರಣವಲ್ಲ, ಯುದ್ಧವೇ ಕಾರಣ ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು, ಗುರ್ಮೆಹರ್ ಅವರ ಕುರಿತಂತೆ ಪರ ಹಾಗೂ ವಿರೋಧ ದನಿಗಳು ಆರಂಭಗೊಂಡಿತ್ತು.
ಪ್ರಕರಣ ಸಂಬಂಧ ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ರಿಜಿಜು ಅವರು, ಗುರ್ಮೆಹರ್ ಕೌರ್ ಅವರು ಹುತಾತ್ಮ ಯೋಧನ ಪುತ್ರಿ. ಯೋಧ ಹುತಾತ್ಮನಾದಾಗ ಕೆಲವರು ಅವರ ಸಾವಿನ ಕುರಿತು ಸಂಭ್ರಮವನ್ನು ಆಚರಿಸಿದ್ದರು. ಅಂತಹ ಜನರಿಂದಲೇ ತಮ್ಮ ಮಗಳು ದಾರಿ ತಪ್ಪಿರುವುದಕ್ಕೆ ಹುತಾತ್ಮನಾಗಿರುವ ಯೋಧ ಕಣ್ಣೀರು ಹಾಕುತ್ತಿರುತ್ತಾರೆಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


