ದೇಶ

ನಿತ್ಯ ಬಳಕೆ ವಸ್ತುಗಳ ಮೇಲೆ ಜಿಎಸ್ ಟಿ ಪರಿಣಾಮ; ಯಾವುದು ಅಗ್ಗ, ಯಾವುದು ದುಬಾರಿ!

ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿ ಶುಕ್ರವಾರ ಮಧ್ಯರಾತ್ರಿಯಿಂದಲೇ ದೇಶಾದ್ಯಂತ ಜಾರಿಯಾಗಿದ್ದು, ಸಂಸತ್ ಭವನದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್ ಟಿ ಜಾರಿ ಗೊಳಿಸಿದ್ದಾರೆ.

ನಿತ್ಯ ಬಳಕೆ ವಸ್ತುಗಳ ಮೇಲೆ ಜಿಎಸ್ ಟಿ ಪರಿಣಾಮ; ಯಾವುದು ಅಗ್ಗ, ಯಾವುದು ದುಬಾರಿ!
ಸಂಗ್ರಹ ಚಿತ್ರ
Published On :

ನವದೆಹಲಿ: ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿ ಶುಕ್ರವಾರ ಮಧ್ಯರಾತ್ರಿಯಿಂದಲೇ ದೇಶಾದ್ಯಂತ ಜಾರಿಯಾಗಿದ್ದು, ಸಂಸತ್ ಭವನದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್ ಟಿ ಜಾರಿ ಗೊಳಿಸಿದ್ದಾರೆ.

ಜಿಎಸ್ ಟಿ ಜಾರಿ ಮೂಲಕ ಈ ಹಿಂದೆ ಇದ್ದ ಹತ್ತುಕ್ಕೂ ಹೆಚ್ಚು ಕೇಂದ್ರ ಮತ್ತು ರಾಜ್ಯ ತೆರಿಗೆಗಳು ವಿಲೀನವಾಗಿದ್ದು, ತೆರಿಗೆಗಳ ಮೇಲಿನ ತೆರಿಗೆಗಳು ಹಾಗೂ ಗ್ರಾಹಕರು ತಿಳಿಯದೇ ನೀಡುತ್ತಿದ್ದ ಪರೋಕ್ಷ ತೆರಿಗೆಗಳಿಗೂ ಕೂಡ ಕಡಿವಾಣ  ಬಿದ್ದಂತಾಗಿದೆ. ಇನ್ನು ನಿತ್ಯ ಬಳಕೆಯ ಅನೇಕ ಅಗತ್ಯ ಸರಕುಗಳ ಬೆಲೆ ಇಳಿಕೆಯಾಗಲಿದ್ದು, ಮಾಲ್, ಶಾಪಿಂಗ್, ಬ್ಯಾಕಿಂಗ್ ನಂತಹ ಕೆಲ ಆರ್ಥಿಕ ಸೇವೆಗಳು ಕೊಂಚ ದುಬಾರಿಯಾಗಲಿವೆ.

ಇನ್ನು ಜಿಎಸ್ ಟಿ ಜಾರಿ ಬಳಿಕ ಯಾವ ವಸ್ತುಗಳು ಅಗ್ಗ ಮತ್ತು ಯಾವ ವಸ್ತುಗಳು ದುಬಾರಿಯಾಗಲಿವೆ ಎಂಬ ಪುಟ್ಟ ಮಾಹಿತಿ ಇಲ್ಲಿದೆ.

ತೆರಿಗೆ ರಹಿತ ವಸ್ತುಗಳು
ಹಾಲು, ಮೊಟ್ಟೆ, ಉಪ್ಪು, ಮಜ್ಜಿಗೆ, ಪ್ಯಾಕಿಂಗ್ ಮಾಡದ ಮೊಸರು, ನೈಸರ್ಗಿಕ ಜೇನುತುಪ್ಪ, ತಾಜಾ ಹಣ್ಣುಗಳು, ತರಕಾರಿಗಳು, ಜೋಳದ ಹಿಟ್ಟು, ಕಡಲೆ ಹಿಟ್ಟು, ಬ್ರೆಡ್, ಪ್ರಸಾದ, ಲಸ್ಸಿ, ಪ್ಯಾಕಿಂಗ್ ಮಾಡದ ಪನ್ನೀರ್, ತಾಜಾ ಮಾಂಸ,  ಮೀನು, ಚಿಕನ್, ಬೆಲ್ಲ, ಧಾನ್ಯಗಳು, ಬ್ರಾಂಡ್ ರಹಿತ ಮತ್ತು ಪ್ಯಾಕಿಂಗ್ ಮಾಡದ ಕಾಫಿ ಮತ್ತು ಟೀ ಪುಡಿ, ತರಕಾರಿ ಎಣ್ಣೆ, ಮಕ್ಕಳ ಚಿತ್ರಗಳು, ಡ್ರಾಯಿಂಗ್ ಬುಕ್ಸ್, ಬಿದಿರಿನ ಚೇರ್ ಗಳು, ಕಸ ಪೊರಕೆ, ಕಾಜಲ್ (ಕಾಜಲ್ ಪೆನ್ಸಿಲ್ ಸ್ಟಿಕ್ಸ್  ಹೊರತುಪಡಿಸಿ), ಬಿಂದಿ, ಸಿಂಧೂರ, ಬಳೆಗಳು, ಕೈಮಗ್ಗ, ಅಂಚೆಚೀಟಿಗಳು, ನ್ಯಾಯಾಲಯದ ಪತ್ರಿಕೆಗಳು, ಮುದ್ರಿತ ಪುಸ್ತಕಗಳು, ಸುದ್ದಿ ಪತ್ರಿಕೆಗಳು, ಕಚ್ಛಾ ರೇಷ್ಮೆ,  ಗಾಂಧಿ ಟೋಪಿ, ಖಾದಿ ನೂಲು, ತೆಂಗಿನಕಾಯಿ, ಭಾರತೀಯ  ರಾಷ್ಟ್ರೀಯ ಧ್ವಜ, ಪೂಜಾ ವಸ್ತುಗಳು, ಪ್ರಸಾದ, ಗರ್ಭನಿರೋಧಕಗಳು, 1,000 ರು ಗಳಿಗಿಂತ ಕಡಿಮೆ ದರದ ಹೋಟೆಲ್ ಗಳು ಮತ್ತು ವಸತಿ ಸೌಕರ್ಯಗಳು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ತೆರಿಗೆ ರಹಿತವಾಗಿರುತ್ತವೆ.

ಜಿಎಸ್ ಟಿ ಜಾರಿ ಬಳಿಕ ದುಬಾರಿಯಾದ ವಸ್ತುಗಳು
ಬ್ರಾಂಡೆಡ್ ಟೀ, ಕಾಫಿ, ರೆಸ್ಟೋರೆಂಟ್ ಗಳಲ್ಲಿನ ಊಟ, ಫೈವ್ ಸ್ಟಾರ್ ಹೋಟೆಲ್ ಗಳು, ಶಾಂಪೂ, ಡಿಯೋಡ್ರೆಂಟ್ ಗಳು, ವಿಮಾನಯಾನ ಪ್ರಯಾಣ, ರೈಲಿನ ಬಿಸಿನೆಸ್ ಕ್ಲಾಸ್ ಪ್ರಯಾಣ, 350ಕ್ಕೂ ಹೆಚ್ಚು ಸಿಸಿ ಎಂಜಿನ್  ಸಾಮರ್ಥ್ಯದ ಬೈಕ್ ಗಳು, ಟಿವಿ, ಫ್ರಿಡ್ಜ್, ಎಸಿ, ವಾಷಿಂಗ್ ಮಷಿನ್, 100ರು,ಗಿಂತ ಅಧಿಕ ಬೆಲೆಯ ಸಿನಿಮಾ ಟಿಕೆಟ್ ಗಳು, 7500ಕ್ಕೂ ಅಧಿಕ ಬೆಲೆಯ ರೂಂಗಳನ್ನು ಹೊಂದಿರುವ ಹೊಟೆಲ್ ಗಳು, ಮೊಬೈಲ್ ಫೋನ್ ಬಿಲ್ ಸೇವೆ,  ವಿಮಾ ಪ್ರೀಮಿಯಮ್ ಗಳು, ಬ್ಯಾಕಿಂಗ್ ಸೇವೆಗಳ ದರಗಳು, ಬ್ರಾಡ್ ಬ್ಯಾಂಡ್ ಸೇವೆ, ತಂಪು ಪಾನೀಯಗಳು, ತಂಬಾಕು, ಐಷಾರಾಮಿ ವಸ್ತುಗಳು, ಸಿಗರೇಟ್, ಮಧ್ಯಪಾನ, ಮೊಬೈಲ್ ಬಿಲ್, ಟ್ಯೂಷನ್ ಫೀ, ಬ್ಯೂಟಿಪಾರ್ಲರ್ ಗಳು,  ಅಂಗಡಿ ಮತ್ತು ಫ್ಲಾಟ್ ಗಳ ಖರೀದಿಗಳು ದುಬಾರಿಯಾಗಿವೆ.

ಜಿಎಸ್ ಟಿ ಜಾರಿ ಬಳಿಕ ಕಡಿಮೆಯಾದ ವಸ್ತುಗಳು

ಪ್ಯಾಕಿಂಗ್ ಮಾಡದ ಆಹಾರ ಧಾನ್ಯಗಳು, ಬ್ರಾಂಡೆಡ್ ಅಲ್ಲದ ಹಿಟ್ಟು, ಮೈದಾ, ಕಡಲೆ ಹಿಟ್ಟು, ತಾಜಾ ತರಕಾರಿಗಳು, ಹಣ್ಣುಗಳು, ಬ್ರಾಂಡೆಡ್ ಉಪ್ಪು, ಪುಟ್ಟ ರೆಸ್ಟೋರೆಂಟ್ ಗಳಲ್ಲಿ ಆಹಾರ ಸೇವನೆ, ಚಾಕು ಕತ್ತರಿಗಳು, ಕೆಚಪ್, ಸಾಸ್  ಮತ್ತು ಉಪ್ಪಿನಕಾಯಿ. ಸೋಪ್ ಗಳು, ಕೂದಲು ತೈಲ ಮತ್ತು ಟೂತ್ ಪೇಸ್ಟ್, 350ಸಿಸಿ ಸಾಮರ್ಥ್ಯಕ್ಕಿಂತ ಕಡಿಮೆ ಸಾಮರ್ಥ್ಯದ ಬೈಕ್ ಗಳು ಮತ್ತು ಎಸ್ ಯುವಿ ಕಾರುಗಳು, ಪ್ರೆಷರ್ ಕುಕ್ಕರ್ ಗಳು, ಸಾಮಾನ್ಯ ವರ್ಗದ ವಿಮಾನ  ಪ್ರಯಾಣ, ಪ್ಯಾನ್ ಗಳು, 100ರು ಗಿಂತ ಕಡಿಮೆ ದರದ ಚಲನಚಿತ್ರ ಟಿಕೆಟ್ ಗಳು, 7500ಕ್ಕೂ ಕಡಿಮೆ ದರದ ರೂಂಗಳನ್ನು ಹೊಂದಿರುವ ಹೊಟೆಲ್ ಗಳು, ಪಾದರಕ್ಷೆ ಮತ್ತು ಜವಳಿ, ತೂಕದ ಯಂತ್ರಗಳು, ಯುಪಿಎಸ್, ಆದಾಯ  ಅಂಚೆಚೀಟಿಗಳ ದರ ಕಡಿಮೆಯಾಗಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.