ಹೋಟೆಲ್ ಉದ್ಯಮದ ಮೇಲೆ ಜಿಎಸ್‌ಟಿ ಹೊರೆ?
ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಬೆನ್ನಲ್ಲೇ ಕಾಯ್ದೆ ವಿರುದ್ಧ ಹೊಟೆಲ್ ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಉಧ್ಯಮದ ವಹಿವಾಟಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಬೆನ್ನಲ್ಲೇ ಕಾಯ್ದೆ ವಿರುದ್ಧ ಹೊಟೆಲ್ ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಉಧ್ಯಮದ ವಹಿವಾಟಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಒಂದು ದೇಶ ಒಂದು ತೆರಿಗೆ ಘೋಷವಾಕ್ಯದಡಿ ದೇಶಾದ್ಯಂತ ಜಾರಿಯಾಗಿರುವ ಜಿಎಸ್‌ಟಿ ತೆರಿಗೆ ಪದ್ಧತಿಯಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದಂತಾಗಿದ್ದು, ಶೇ. 18ರ ಸೇವಾ ತೆರಿಗೆಯಿಂದ ರೆಸ್ಟೋರೆಂಟ್, ದರ್ಶಿನಿಯಂತಹ ಹೋಟೆಲ್‌ಗಳಿಗೆ ಭಾರೀ ಹೊಡೆತ ಬೀಳುವ ಆತಂಕವನ್ನು ಹೋಟೆಲ್ ಮಾಲೀಕರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹತ್ತು ಹಲವು ರೀತಿಯ ತೆರಿಗೆ ಬದಲಾವಣೆಗೆ ಒಗ್ಗಿಕೊಂಡಿದ್ದ ಹೋಟೆಲ್ ಉದ್ಯಮ ಈ ಬಾರಿ ದೊಡ್ಡ ಮಟ್ಟದ ಸಂಕಷ್ಟಕ್ಕೆ ಸಿಲುಕುವ ಆತಂಕದಲ್ಲಿದೆ. ಏಕರೂಪ ತೆರಿಗೆ ವ್ಯವಸ್ಥೆಯಡಿ ಹೋಟೆಲ್ ಉದ್ಯಮಕ್ಕೆ ಶೇ. 18ರಷ್ಟು ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ. ಅಲ್ಲದೆ ವಾರ್ಷಿಕ 20 ಲಕ್ಷ ವಹಿವಾಟು ಮೀರಿದವರನ್ನು ಈ ತೆರಿಗೆ ವ್ಯಾಪ್ತಿಗೆ ತರಲಾಗಿದ್ದು, ಇದು ಸಣ್ಣ ಹೋಟೆಲ್ ಉದ್ಯಮಗಳ ನಿದ್ದೆಗೆಡುವಂತೆ ಮಾಡಿದೆ.
ತಾರಾ ಹೋಟೆಲ್‌ಗಳಿಗೂ ಈ ತೆರಿಗೆ ಪದ್ಧತಿ ಅನ್ವಯವಾದರೂ ಕೂಡ ಅವರಿಗೆ ಅಂತಹ ಹೊರೆಯಾಗುವುದಿಲ್ಲ. ಆದರೆ ಬೆಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ದರ್ಶಿನಿಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲದೆ ಅವುಗಳು ವಾರ್ಷಿಕ 20 ಲಕ್ಷ ವಹಿವಾಟು ದಾಟಿದಲ್ಲಿ ಶೇ. 18ರಷ್ಟು ಸೇವಾ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇದರಿಂದಾಗಿ ಹೋಟೆಲ್ ಉದ್ಯಮಿಗಳು ಹೊಸ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕದಲ್ಲಿದ್ದಾರೆ. ಇನ್ನು ಒಂದು ವೇಳೆ ಸೇವಾ ತೆರಿಗೆಯನ್ನು ಸರ್ಕಾರ ಇಳಿಕೆ ಮಾಡದಿದ್ದಲ್ಲಿ ಇದರ ನೇರ ಪರಿಣಾಮ ಜನಸಾಮಾನ್ಯರ ಮೇಲಾಗಲಿದ್ದು, ಸಾಮಾನ್ಯ ವರ್ಗದ ಹೋಟೆಲ್‌ಗಳಲ್ಲಿ ಅದರಲ್ಲೂ ಬಿಲ್ ರಸೀದಿ ಪಡೆಯದೇ ಹಣ ಪಾವತಿಸಿ ತಿಂಡಿ ತಿನಿಸು ಪಡೆಯುವರ ಸಂಖ್ಯೆಯೇ ಶೇ. 80ರಷ್ಟಿದೆ. ಹೀಗಾಗಿ ಇಲ್ಲಿ ವಹಿವಾಟು 20 ಲಕ್ಷ ದಾಟಿದರೆ ತೆರಿಗೆಯನ್ನು ಹೋಟೆಲ್ ಮಾಲೀಕರೇ ಕಟ್ಟಬೇಕಾಗುತ್ತದೆ. ಇದರಿಂದಾಗಿ ಸಾಮಾನ್ಯವರ್ಗದ ಹೋಟೆಲ್ ಗಳ ಮೇಲೆ ಜಿಎಸ್ ಟಿಯ ನೇರ ಹೊಡೆತ ಬೀಳಲಿದೆ. ಇದರಿಂದ ಉದ್ಯಮ ನಷ್ಟಕ್ಕೆ ಸಿಲುಕಲಿದೆ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಒಂದು ವೇಳೆ ಜಿಎಸ್ ಟಿ ಜಾರಿ ಪರಿಣಾಮ ಹೊಟೆಲ್ ಮಾಲೀಕರು ಶೇ.18ರಷ್ಟು ಸೇವಾ ತೆರಿಗೆಯನ್ನು ಅನಿವಾರ್ಯವಾಗಿ ಕಟ್ಟಬೇಕಿದ್ದು, ಆಗ ಹೊಟೆಲ್ ನಲ್ಲಿನ ತಿಂಡಿಗಳ ಬೆಲೆಯನ್ನೂ ಅನಿವಾರ್ಯವಾಗಿ ಏರಿಕೆ ಮಾಡಬೇಕಾಗುತ್ತದೆ. ಬೆಲೆ ದುಬಾರಿಯಾದರೆ ಗ್ರಾಹಕರು ಹೊಟೆಲ್ ನತ್ತ ಆಗಮಿಸುವುದಿಲ್ಲ, ಹೊಟೆಲ್ ನಲ್ಲಿ ಮಾಡಿದ ಆಹಾರ ಪದಾರ್ಥ ಕೆಟ್ಟು ವ್ಯರ್ಥವಾಗುತ್ತದೆ. ಹೀಗಾಗಿಹೊಟೆಲ್ ಉದ್ಯಮವನ್ನೂ ಕೂಡ ಸಾಮಾನ್ಯ ತರಕಾರಿ ಉದ್ಯಮವೆಂದೇ ಪರಿಗಣಿಸಬೇಕು ಎಂದು ಹೊಟೆಲ್ ಮಾಲೀಕರು ಆಗ್ರಹಿಸುತ್ತಿದ್ದಾರೆ.
ಗ್ರಾಹಕರ ಮೇಲೆ ಪರಿಣಾಮ
ಈ ಹಿಂದೆ ಎಸಿ ರಹಿತ ಹೊಟೆಲ್ ಗಳು ಶೇ.4ರಷ್ಟು ತೆರಿಗೆ ಪಾವತಿ ಮಾಡಿದರೂ ಅದನ್ನು ಗ್ರಾಹಕರ ಮೇಲೆ ಹಾಕುತ್ತಿರಲಿಲ್ಲ. ಇದೀಗ ಜಿಎಸ್ ಟಿ ಜಾರಿಯಾದ ಪರಿಣಾಮ ಗ್ರಾಹಕರು ಅನಿವಾರ್ಯವಾಗಿ ತಾವು ಪಡೆಯುವ ಹೊಟೆಲ್ ಬಿಲ್ ಮೇಲೆ ಶೇ.12ರಷ್ಟು ತೆರಿಗೆ ಹೊರೆಯನ್ನು ಕಟ್ಟಲೇಬೇಕಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


