ಜಿಎಸ್ ಟಿ ಜಾರಿಯಿಂದ ದೇಶದಲ್ಲಿ ಹೊಸ ಆರ್ಥಿಕ ಶಕೆ ಆರಂಭವಾಗಿದೆ: ಪ್ರಧಾನಿ ಮೋದಿ
ಸರಕು ಮತ್ತು ಸೇವಾ ತೆರಿಗೆ(ಜಿಎಎಸ್ ಟಿ) ದೇಶದಲ್ಲಿ ಇಂದಿನಿಂದ ಜಾರಿಗೆ ಬಂದಿದ್ದು, ಇದರೊಂದಿಗೆ ಹೊಸ ಆರ್ಥಿಕ ಶಕೆ ಆರಂಭವಾಗಿದೆ ಎಂದು ಪ್ರಧಾನಿ....
Published On :
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಎಸ್ ಟಿ) ದೇಶದಲ್ಲಿ ಇಂದಿನಿಂದ ಜಾರಿಗೆ ಬಂದಿದ್ದು, ಇದರೊಂದಿಗೆ ಹೊಸ ಆರ್ಥಿಕ ಶಕೆ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಇಂದು ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಇನ್ಸಿಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ(ಐಸಿಎಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾರ್ಟರ್ಡ್ ಅಕೌಂಟಂಟ್ಸ್ ಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಜಿಎಸ್ ಟಿ ಜಾರಿಗೊಳಿಸಿದ್ದು ನನ್ನ ಸೌಭಾಗ್ಯ ಮತ್ತು ಇದನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದರು.
ದೇಶದ ಆರ್ಥಿಕತೆಗೆ ಚಾರ್ಟರ್ಡ್ ಅಕೌಂಟಂಟ್ಸ್ ಆಧಾರ ಸ್ತಂಭವಾಗಿದ್ದು, ಅವರಿಗೆ ಹಣಕಾಸಿನ ಕೌಶಲ್ಯತೆ ಗೊತ್ತಿರುತ್ತದೆ. ನಿಮ್ಮ ಸಹಿ ಮೇಲೆ ದೇಶದ 125 ಕೋಟಿ ಜನರ ನಂಬಿಕೆ ಇರುತ್ತದೆ. ನಿಮ್ಮ ಸಹಿ ಪ್ರಧಾನಿ ಸಹಿಗಿಂತಲೂ ಮಹತ್ವದ್ದು. ಭಾರತದ ಅರ್ಥವ್ಯವಸ್ಥೆ ಹೊಸ ಪಥದತ್ತ ಸಾಗುತ್ತಿದ್ದು, ಭ್ರಷ್ಟರು ಮತ್ತು ಕಳಂಕಿತರನ್ನು ಪ್ರಶ್ನಿಸುವ ಹಕ್ಕು ನಿಮಗಿದೆ ಎಂದರು.
ಕಾನೂನು ಉಲ್ಲಂಘಿಸುವ ಹಾಗೂ ನಕಲಿ ಕಂಪನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದೆ ಪ್ರಧಾನಿ, ಭಾರತದಲ್ಲಿ ಸ್ವಚ್ಛತಾ ಅಭಿಯಾನದ ಜತೆಜತೆಯಲ್ಲೇ ಇದೀಗ ದೇಶದ ತೆರಿಗೆ ಕ್ಷೇತ್ರದಲ್ಲೂ ಸ್ವಚ್ಛತಾ ಅಭಿಯಾನವನ್ನು ಆರಂಭಿಸಿದ್ದೇವೆ ಎಂದರು.
ಕಳೆದ ವರ್ಷ ನವೆಂಬರ್ ನಲ್ಲಿ ಅಪನಗದೀಕರಣ ನಿರ್ಧಾರ ಕೈಗೊಂಡಾಗ ಅನೇಕ ಕಾಳ ದಂಧೆಕೋರರ ನಿದ್ದೆಗೆಡಿಸಿತ್ತು. ಆಗಿನಿಂದ ನೀವು (ಚಾರ್ಟರ್ಡ್ ಅಕೌಂಟಂಟ್ ಗಳು) ಪುರುಸೊತ್ತಿಲ್ಲದೆ ದುಡಿದಿರಿ. ನಮ್ಮ ಸಮಾಜದ ಹುಳುಕುಗಳನ್ನು ಹೋಗಲಾಡಿಸುವ ನಿಮ್ಮ ಕರ್ತವ್ಯಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಮೋದಿ ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಕಾಳಧನ ದಂಧೆಯನ್ನು ನಿಯಂತ್ರಿಸಲು ಭಾರತ ಸರ್ಕಾರ ಸತತವಾಗಿ ಕೈಗೊಂಡ ಪ್ರಯತ್ನದಿಂದಾಗಿ ಸ್ವಿಸ್ ಬ್ಯಾಂಕ್ ನಲ್ಲಿ ಇದ್ದ ಭಾರತೀಯರ ಹಣದಲ್ಲಿ ಶೇ. 45ರಷ್ಟು ಕಾಳಧನ ಪ್ರಮಾಣ ಇಳಿಕೆಯಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

