ಜಿಎಸ್'ಟಿ ಎಂದರೇನು? ಸೂಕ್ತ ಮಾಹಿತಿ ಕೊಡಿ: ಮೋದಿ ಸ್ವಕ್ಷೇತ್ರದಲ್ಲಿ ವರ್ತಕರ ಮುಷ್ಕರ
ದೇಶದ ತೆರಿಗೆ ವ್ಯವಸ್ಥೆ ಇತಿಹಾಸದಲ್ಲಿಯೇ ಅತಿದೊಡ್ಡ ಸುಧಾರಣಾ ಕ್ರಮ ಎಂದೇ ಹೇಳಲಾಗುತ್ತಿರುವ ಜಿಎಸ್ ಟಿ ಜಾರಿಗೆ ತರಲು ಒಂದೆಡೆ ಆಡಳಿತಾರೂಢ ಕೇಂದ್ರದ ಎನ್ ಡಿಎ ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸಿದ್ದು, ಮತ್ತೊಂದೆಡೆ ಜಿಎಸ್ ಟಿ ಜಾರಿಗೆ...

Published On :
ವಾರಣಾಸಿ (ಉತ್ತರಪ್ರದೇಶ): ದೇಶದ ತೆರಿಗೆ ವ್ಯವಸ್ಥೆ ಇತಿಹಾಸದಲ್ಲಿಯೇ ಅತಿದೊಡ್ಡ ಸುಧಾರಣಾ ಕ್ರಮ ಎಂದೇ ಹೇಳಲಾಗುತ್ತಿರುವ ಜಿಎಸ್ ಟಿ ಜಾರಿಗೆ ತರಲು ಒಂದೆಡೆ ಆಡಳಿತಾರೂಢ ಕೇಂದ್ರದ ಎನ್ ಡಿಎ ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸಿದ್ದು, ಮತ್ತೊಂದೆಡೆ ಜಿಎಸ್ ಟಿ ಜಾರಿಗೆ ವಿರೋಧದಗಳ ಕೂಗು ಕೇಳಿ ಬರತೊಡಗಿವೆ.
ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಚಿವರಿಗಷ್ಟೇ ಆಲ್ಲದೆ, ಜನರಲ್ಲೂ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿದ್ದು, ಸಾಮಾನ್ಯ ಜನರಿಗೆ ಈಗಲೂ ಅರ್ಥವಾಗದ ಯಕ್ಷ ಪ್ರಶ್ನೆಯೆಂಬಂತಹ ಬೆಳವಣಿಗೆಗಳು ಕಾಣತೊಡಗಿದೆ.
ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಕ್ಷೇತ್ರ ವಾರಣಾಸಿಯಲ್ಲಿದೇ ಜಿಎಸ್ ಟಿ ಎಂದರೇನು? ಈ ಬಗ್ಗೆ ಸ್ಪಷ್ಟ ಹಾಗೂ ಸೂಕ್ತ ರೀತಿಯ ಮಾಹಿತಿಗಳನ್ನು ನೀಡಿದ ಎಂದು ಆಗ್ರಹಿಸಿ ವರ್ತಕರು ಮುಷ್ಕರಗಳನ್ನು ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರ ಜಿಎಸ್ ಟಿಯನ್ನು ಸಾಧ್ಯವಾದಷ್ಟು ಸರಳಗೊಳಿಸಬೇಕು ಹಾಗೂ ಈ ಬಗ್ಗೆ ನಮಗೆ ಸೂಕ್ತ ರೀತಿಯ, ಅರ್ಥವಾಗುವಂತೆ ಮಾಹಿತಿ ನೀಡಬೇಕು. ಇದರಿಂದ ಅಧಿಕಾರಿಗಳು ನಮ್ಮನ್ನು ಮೂರ್ಖರನ್ನಾಗಿಸುವುದರಿಂದ ತಪ್ಪಿಸಬೇಕು. ಹೀಗಾಗಿ ಜಿಎಸ್ ಟಿ ಕುರಿತಂತೆ ಸೂಕ್ತ ರೀತಿಯ ಮಾಹಿತಿ ನೀಡಿರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಈಗಾಗಲೇ ಎಲ್ಲಾ ವರ್ತಕರು ನಮಗೆ ಬೆಂಬಲವನ್ನು ನೀಡಿದ್ದಾರೆ. ಈ ಮುಷ್ಕರ ನಿಮಗೆ ಫಲವನ್ನು ನೀಡಲಿದೆ ಎಂದು ನಾವು ನಂಬಿದ್ದೇವೆಂದು ಸ್ಥಳೀಯ ವರ್ತಕರು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಜಿಎಸ್ ಟಿ ಕುರಿತಂತೆ ನಮಗೆ ಸರಿಯಾದ ಮಾಹಿತಿಯನ್ನು ನೀಡಬೇಕು. ಒಂದು ವೇಳೆ ಸರ್ಕಾರ ನಮಗೆ ಮಾಹಿತಿ ನೀಡದೇ ಹೋದಲ್ಲಿ ನಮ್ಮ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರ ಜಿಎಸ್ ಟಿ ಕುರಿತಂತೆ ಯಾವುದೇ ರೀತಿಯ ಗೊಂದಲಗಳು ಸೃಷ್ಟಿಯಾಗಬಾರದು, ತಮ್ಮ ಸಚಿವರುಗಳಿಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೆಲ ದಿನಗಳ ಹಿಂದಷ್ಟೇ ಕಾರ್ಯಾಗಾರವೊಂದನ್ನು ನಡೆಸಿದ್ದರು. ಜಿಎಸ್ ಟಿ ಬಗ್ಗೆ ಗೊಂದಲದಲ್ಲಿರುವ ಜನರಿಗೆ ಅದರ ಬಗ್ಗೆ ತಿಳಿ ಹೇಳಬೇಕೆಂದೂ ಸಚಿವರಿಗೆ ಹೇಳಿದ್ದರು.
ಜಿಎಸ್ ಟಿ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಪಾಠ ಮಾಡಿದ್ದರೂ, ಉತ್ತರಪ್ರದೇಶ ಸಮಾಜ ಕಲ್ಯಾಣ, ಬುಡಕಟ್ಟು ವ್ಯವಹಾರದ ಸಚಿವ ರಾಮ್ ಪತಿ ಶಾಸ್ತ್ರಿಯವರಿಗೆ ಜಿಎಸ್ ಟಿ ಪದದ ಫುಲ್ ಫಾರ್ಮ್ ಏನೆಂಬುದೇ ಗೊತ್ತಿಲ್ಲ. ಜಿಎಸ್ ಟಿ ಬಗ್ಗೆ ಪೂರ್ಣ ಪದ ಏನೆಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಾಸ್ತ್ರಿಯವರು ತಡಬಡಾಯಿಸಿದ್ದು, ಇದೀಗ ಸುದ್ದಿಗೆ ಗ್ರಾಸವಾಗಿದೆ.
ಪ್ರತಕರ್ತರು ಪ್ರಶ್ನೆ ಕೇಳುತ್ತಿದ್ದಂತೆಯೇ ಹಿಂದೆ ನಿಂತುಕೊಂಡಿದ್ದ ಕೆಲವರು ಸಚಿವರ ಸಹಾಯಕ್ಕೆ ಬಂದರಾದರೂ ಸಚಿವರಿಗೆ ಅದು ಅರ್ಥವಾಗಿಲ್ಲ. ನಂತರ ಸಾವರಿಸಿಕೊಂಡ ಸಚಿವ ಜಿಎಸ್ ಟಿ ಬಗ್ಗೆ ನನಗೆ ಗೊತ್ತಿದೆ. ಆದರೆ, ತಕ್ಷಣ ನೆನಪಿಗೆ ಬರುತ್ತಿಲ್ಲ ಎಂದಿದ್ದಾರೆ. ಜಿಎಸ್ ಟಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಎಲ್ಲಾ ದಾಖಲೆಗಳನ್ನೂ ಓದುತ್ತಿರುವುದಾಗಿ ಹೇಳಿ ಪೇಚಿಗೆ ಸಿಲುಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


