ದೇಶ

ಸೇನೆ ವಿರುದ್ಧ ವಿವಾದಾತ್ಮಕ ಹೇಳಿಕೆ: ಅಜಂಖಾನ್ ವಿರುದ್ಧ ಪ್ರಕರಣ ದಾಖಲು

ಭಾರತೀಯ ಸೇನೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂಖಾನ್ ವಿರುದ್ಧ ಶುಕ್ರವಾರ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ...

ಸೇನೆ ವಿರುದ್ಧ ವಿವಾದಾತ್ಮಕ ಹೇಳಿಕೆ: ಅಜಂಖಾನ್ ವಿರುದ್ಧ ಪ್ರಕರಣ ದಾಖಲು
ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂಖಾನ್
Published On :
ಲಖನೌ: ಭಾರತೀಯ ಸೇನೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂಖಾನ್ ವಿರುದ್ಧ ಶುಕ್ರವಾರ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. 
ಹಜ್ರತ್ಗಂಜ್ ಮತ್ತು ಗೌತಮ್ಪಲ್ಲಿ ಪೊಲೀಸ್ ಠಾಣೆಗಳಲ್ಲಿ ಅಜಂಖಾನ್ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ. 
ಕಾನ್ಪುರದ ಸಭೆಯೊಂದರಲ್ಲಿ ಮಾತನಾಡಿದ್ದ ಅಜಂಖಾನ್ ಅವರು, ಯೋಧರ ತಲೆ, ಕೈ, ಕಾಲುಗಳನ್ನು ಕತ್ತರಿಸುವುದು ಸಾಮಾನ್ಯ. ಗಡಿಯಲ್ಲಿ ಈ ರೀತಿಯ ಹೋರಾಟವಾಗುತ್ತಿರುವುದು ಸಾಮಾನ್ಯ. ಆದರೆ, ಇತ್ತೀಚೆಗೆ ಮಹಿಳಾ ಉಗ್ರರು ಯೋಧರ ಜನನಾಂಗವನ್ನು ಕತ್ತರಿಸುತ್ತಿದ್ದಾರೆ. 
ಈ ರೀತಿಯ ಹತ್ಯೆ ಮಾಡುವುದರ ಹಿಂದೆಯೂ ಪ್ರಮುಖವಾದ ಕಾರಣಗಳಿವೆ. ಗಡಿಯಲ್ಲಿ ಯೋಧನ ಮರ್ಮಾಂಗವನ್ನು ಕತ್ತರಿಸಲಾಗಿದೆ. ಯಾವುದರಿಂದ ಮಹಿಳೆಯರಿಗೆ ತೊಂದರೆ ಆಗುತ್ತಿದೆಯೋ ಅದನ್ನು ಕತ್ತರಿಸುತ್ತಿದ್ದಾರೆ. ಭಾರತಕ್ಕೆ ನಾಚಿಕೆಯಾಗಬೇಕು. ವಿಶ್ವವನ್ನು ಭಾರತ ಯಾವ ಮುಖದಿಂದ ನೋಡುತ್ತದೆ ಎಂದು ಆರೋಪಿಸುವ ಮೂಲಕ ಯೋಧರು ಅತ್ಯಾಚಾರಿಗಳು ಎಂದು ದೂಷಿಸಿದ್ದರು.
ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾದ ಬಳಿಕ ಸ್ಪಷ್ಟನೆ ನೀಡಿದ್ದ ಖಾನ್, ಭಾರತೀಯ ಸೇನೆ ಕುರಿತಂತೆ ನಾನು ನೀಡಿದ್ದ ಹೇಳಿಕೆಗಳನ್ನು ಮಾಧ್ಯಮಗಳು ತಿರುಚಿವೆ. ನನ್ನಿಂದ ಸೇನೆ ನೈತಿಕತೆ ಹೇಗೆ ಕುಸಿಯುತ್ತದೆ? ನಾನೇನೂ ಅಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಹೋದಾಗ ಸೇನಯ ನೈತಿರ ಸ್ಥೈರ್ಯ ಕುಸಿಯುತ್ತದೆ. ನಾನು ಬಿಜೆಪಿಯವರಿಗೆ ಐಟಂ ಗರ್ಲ್ ಆಗಿ ಹೋಗಿದ್ದೇನೆ. ಏಕೆಂದರೆ, ಬಿಜೆಪಿ ಯಾವಾಗಲೂ ನನ್ನ ಹೇಳಿಕೆಗಳನ್ನು ಹಿಡಿದುಕೊಂಡು ರಾಜಕೀಯ ಆಡುವ ಹವ್ಯಾಸವನ್ನು ಮಾಡಿಕೊಂಡುಬಿಟ್ಟಿದ್ದಾರೆ. ಮಾತನಾಡುವುದಕ್ಕೆ ಅವರಿಗೆ ಬೇರಾರು ಸಿಗುವುದಿಲ್ಲ. ನನ್ನನ್ನು ಗುರಿಯಾಗಿಸಿಕೊಂಡು ಚುನಾವಣೆಯಲ್ಲಿ ಹೋರಾಟ ಮಾಡಿದ್ದರು ಎಂದು ತಿಳಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.