ದೇಶ

ನಾನು ಬಿಜೆಪಿಯ 'ಐಟಂ ಗರ್ಲ್' ಆಗಿ ಹೋಗಿದ್ದೇನೆ: ಅಜಂ ಖಾನ್

ಯೋಧರ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ವಿರೋಧದ ಕೇಂದ್ರ ಬಿಂದುವಾಗಿರುವ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರು ಗುರುವಾರ ಹೇಳಿಕೆಗೆ ಸ್ಪಷ್ಟನೆ...

ನಾನು ಬಿಜೆಪಿಯ 'ಐಟಂ ಗರ್ಲ್' ಆಗಿ ಹೋಗಿದ್ದೇನೆ: ಅಜಂ ಖಾನ್
ಸಮಾಜವಾದಿ ಪಕ್ಷದ ನಾಯಕ ಅಜಂಖಾನ್
Published On :
ಲಖನೌ: ಯೋಧರ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ವಿರೋಧದ ಕೇಂದ್ರ ಬಿಂದುವಾಗಿರುವ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರು ಗುರುವಾರ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಭಾರತೀಯ ಸೇನೆ ಕುರಿತಂತೆ ನಾನು ನೀಡಿದ್ದ ಹೇಳಿಕೆಗಳನ್ನು ಮಾಧ್ಯಮಗಳು ತಿರುಚಿವೆ. ನನ್ನಿಂದ ಸೇನೆ ನೈತಿಕತೆ ಹೇಗೆ ಕುಸಿಯುತ್ತದೆ? ನಾನೇನೂ ಅಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಹೋದಾಗ ಸೇನಯ ನೈತಿರ ಸ್ಥೈರ್ಯ ಕುಸಿಯುತ್ತದೆ ಎಂದು ಹೇಳಿದ್ದಾರೆ. 
ನಾನು ಬಿಜೆಪಿಯವರ ಐಟಂ ಹುಡುಗಿಯಾಗಿ ಹೋಗಿದ್ದೇನೆ. ಏಕೆಂದರೆ, ಬಿಜೆಪಿ ಯಾವಾಗಲೂ ನನ್ನ ಹೇಳಿಕೆಗಳನ್ನು ಹಿಡಿದುಕೊಂಡು ರಾಜಕೀಯ ಆಡುವ ಹವ್ಯಾಸವನ್ನು ಮಾಡಿಕೊಂಡುಬಿಟ್ಟಿದೆ. ಮಾತನಾಡುವುದಕ್ಕೆ ಅವರಿಗೆ ಬೇರಾರು ಸಿಗುವುದಿಲ್ಲ. ನನ್ನನ್ನು ಗುರಿಯಾಗಿಸಿಕೊಂಡು ಚುನಾವಣೆಯಲ್ಲಿ ಹೋರಾಟ ಮಾಡಿದ್ದರು ಎಂದು ತಿಳಿಸಿದ್ದಾರೆ. 
ನಿನ್ನೆಯಷ್ಟೇ ಕಾನ್ಪುರದ ಸಭೆಯೊಂದರಲ್ಲಿ ಮಾತನಾಡಿದ್ದ ಅಜಂಖಾನ್ ಅವರು, ಯೋಧರ ತಲೆ, ಕೈ, ಕಾಲುಗಳನ್ನು ಕತ್ತರಿಸುವುದು ಸಾಮಾನ್ಯ. ಗಡಿಯಲ್ಲಿ ಈ ರೀತಿಯ ಹೋರಾಟವಾಗುತ್ತಿರುವುದು ಸಾಮಾನ್ಯ. ಆದರೆ, ಇತ್ತೀಚೆಗೆ ಮಹಿಳಾ ಉಗ್ರರು ಯೋಧರ ಜನನಾಂಗವನ್ನು ಕತ್ತರಿಸುತ್ತಿದ್ದಾರೆ. ಈ ರೀತಿಯ ಹತ್ಯೆ ಮಾಡುವುದರ ಹಿಂದೆಯೂ ಪ್ರಮುಖವಾದ ಕಾರಣಗಳಿವೆ. ಗಡಿಯಲ್ಲಿ ಯೋಧನ ಮರ್ಮಾಂಗವನ್ನು ಕತ್ತರಿಸಲಾಗಿದೆ. ಯಾವುದರಿಂದ ಮಹಿಳೆಯರಿಗೆ ತೊಂದರೆ ಆಗುತ್ತಿದೆಯೋ ಅದನ್ನು ಕತ್ತರಿಸುತ್ತಿದ್ದಾರೆ. ಭಾರತಕ್ಕೆ ನಾಚಿಕೆಯಾಗಬೇಕು. ವಿಶ್ವವನ್ನು ಭಾರತ ಯಾವ ಮುಖದಿಂದ ನೋಡುತ್ತದೆ ಎಂದು ಆರೋಪಿಸುವ ಮೂಲಕ ಯೋಧರು ಅತ್ಯಾಚಾರಿಗಳು ಎಂದು ದೂಷಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.