ವಾಟ್ಸಾಪ್ ಡಿಪಿಯಲ್ಲಿ ರೇಖಾ ಚಿತ್ರ ಬಳಕೆ: ಮುಸ್ಲಿಂ ಶಿಕ್ಷಕನ ಬಂಧನ
ಧಾನಿ ನರೇಂದ್ರ ಮೋದಿ ಅವರ ಆಕ್ಷೇಪಾರ್ಹ ರೇಖಾ ಚಿತ್ರವನ್ನು ವಾಟ್ಸಾಪ್ ಪ್ರೊಫೈಲ್ ಪಿಕ್ಟರ್ ಆಗಿ ಬಳಸಿದ ಆಸ್ಸಾಂನ ಮುಸ್ಲಿಂ ಶಿಕ್ಷಕನನ್ನು...

Published On :
ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರ ಆಕ್ಷೇಪಾರ್ಹ ರೇಖಾ ಚಿತ್ರ ವನ್ನು ವಾಟ್ಸಾಪ್ ಪ್ರೊಫೈಲ್ ಪಿಕ್ಟರ್ ಆಗಿ ಬಳಸಿದ ಆಸ್ಸಾಂನ ಮುಸ್ಲಿಂ ಶಿಕ್ಷಕನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಹಮೀದ್ ಬಾರ್ಬೂಯಾ ಬಂಧಿತ ಶಿಕ್ಷಕ, ಈತನ ವಾಟ್ಸಾಪ್ ಡಿಪಿಯಲ್ಲಿ ಎರಡು ಚಿತ್ರಗಳಿದ್ದು, ಒಂದು ಚಿತ್ರದಲ್ಲಿ ಮೋದಿ ಮತ್ತು ನಾಯಿಯ ಮುಖವಿದ್ದು, ಕರ್ತವ್ಯನಿರತ ನಾಯಿ ಎಂಬ ಶೀರ್ಷಿಕೆ ಬಳಸಲಾಗಿದೆ.
ಆತನ ಕಾಂಟ್ಯಾಕ್ಟ್ ನಲ್ಲಿರುವವರೆಲ್ಲರೂ ಈ ಡಿಪಿಯನ್ನು ನೋಡಬಹುದಾಗಿತ್ತು. ಮಂಗಳವಾರ ಅದನ್ನು ಗಮನಿಸಿದ ಪೊಲೀಸರು ಆತನನ್ನು ಬಂಧಿಸಿರುವುದಾಗಿ ಳಿಸಿದ್ದಾರೆ.
ಚಿತ್ರದ ಬಗ್ಗ ಆತನಿಗೆ ಅರಿವಿದೆಯೋ ಇಲ್ಲವೋ ನಮಗೆ ಗೊತ್ತಿಲ್ಲ, ಐಟಿ ಕಾಯಿದೆ 66(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಸ್ಸಾಂನ ಹಿಲಕಾಂಡಿ ಜಿಲ್ಲೆಯ ಜ್ಞಾನಕಿ ಚರಣ್ ಹೈಯ್ಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


