ದೇಶ

ನಾವು ಗೋಮಾತೆಯನ್ನು ಆರಾಧಿಸುತ್ತೇವೆ, ಅಪಮಾನ ಸಹಿಸಿಕೊಳ್ಳೆವು: ಗೋವಾ ಸಚಿವ

ಗೋವಾದಲ್ಲಿ ಬಿಕಿನಿಗಳನ್ನು ನಿಷೇಧಿಸಬೇಕು ಎಂದು ಈ ಹಿಂದೆ ಆಗ್ರಹಿಸಿದ್ದ ಬಿಜೆಪಿ ಮುಂದಾಳತ್ವದ ಗೋವಾ ಮೈತ್ರಿ ಸರ್ಕಾರದ ಸಂಪುಟ ಸಚಿವ, ರಾಜ್ಯದಲ್ಲಿ ಗೋಮಾತೆಯ ವಿರುದ್ಧ ಯಾವುದೇ ಪ್ರಕರಣವನ್ನು

ನಾವು ಗೋಮಾತೆಯನ್ನು ಆರಾಧಿಸುತ್ತೇವೆ, ಅಪಮಾನ ಸಹಿಸಿಕೊಳ್ಳೆವು: ಗೋವಾ ಸಚಿವ
ಸಾಂದರ್ಭಿಕ ಚಿತ್ರ
Published On :
ಪಣಜಿ: ಗೋವಾದಲ್ಲಿ ಬಿಕಿನಿಗಳನ್ನು ನಿಷೇಧಿಸಬೇಕು ಎಂದು ಈ ಹಿಂದೆ ಆಗ್ರಹಿಸಿದ್ದ ಬಿಜೆಪಿ ಮುಂದಾಳತ್ವದ ಗೋವಾ ಮೈತ್ರಿ ಸರ್ಕಾರದ ಸಂಪುಟ ಸಚಿವ, ರಾಜ್ಯದಲ್ಲಿ ಗೋಮಾತೆಯ ವಿರುದ್ಧ ಯಾವುದೇ ಪ್ರಕರಣವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಈಗ ಹೇಳಿದ್ದಾರೆ. 
ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಲೋಕೋಪಯೋಗಿ ಸಚಿವ ಸುದಿನ್ ಧವಳಿಕರ್, ಪಣಜಿಯಿಂದ ೧೫ ಕಿಲೋಮೀಟರ್ ದೂರದಲ್ಲಿರುವ ಹಳೆ ಗೋವಾದಲ್ಲಿ ನಡೆಯುತ್ತಿದ್ದ ಸರ್ಕಾರಿ ಕಾರ್ಯಕ್ರಮದ ಸಮಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ್ದಾರೆ. 
ಜಾನುವಾರು ಸಂತೆ ತಡೆ ಮತ್ತು ಅಂತಹ ಸಂತೆಗಳಲ್ಲಿ ಜಾನುವಾರುಗಳನ್ನು ಮಾರಾಟ ಮಾಡುವುದನ್ನು ನಿಷೇಧ ಮಾಡಿ ಆದೇಶ ಹೊರಡಿಸಿರುವುದರ ಬಗ್ಗೆ ಪ್ರಶ್ನಿಸಿದಾಗ "ನಾನು ಹೆಚ್ಚು ಮಾತನಾಡುವುದಿಲ್ಲ, ಆದರೆ ನಾವು ಗೋಮಾತೆಯನ್ನು ಪೂಜಿಸುತ್ತೇವೆ ಮತ್ತು ಗೋವುಗಳಿಗೆ ಅಪಾಯವಾಗುವ ಯಾವುದಾದರೂ ಘಟನೆ ನಡೆದರೆ ನಾವು ಧ್ವನಿಯೆತ್ತುತ್ತೇವೆ" ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.