1993 ಮುಂಬಯಿ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಮುಸ್ತಫಾ ದೊಸ್ಸಾ ಆಸ್ಪತ್ರೆಯಲ್ಲಿ ಸಾವು
ಎದೆ ನೋವಿನಿಂದ ಬಳಲುತ್ತಿದ್ದ 1993ರ ಮುಂಬಯಿ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಮುಸ್ತಫಾ ದೊಸ್ಸಾ ಆಸ್ಪತ್ರೆಯಲ್ಲಿ...

Published On :
ಮುಂಬಯಿ: ಎದೆ ನೋವಿನಿಂದ ಬಳಲುತ್ತಿದ್ದ 1993ರ ಮುಂಬಯಿ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಮುಸ್ತಫಾ ದೊಸ್ಸಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಸರಣಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಮುಸ್ತಫಾ ದೊಸ್ಸಾ ಟಾಡಾ ಕೋರ್ಟ್ ತೀರ್ಪು ನೀಡಿತ್ತು. ಆರ್ಥೂರ್ ಕಾರಾಗೃಹದಲ್ಲಿದ್ದ ದೊಸ್ಸಾಗೆ ಇಂದು ಮುಂಜಾನೆ 3ಗಂಟೆಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆತನನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೈಪರ್ ಟೆನ್ಸನ್ ಮತ್ತು ಡಯಾಬಿಟಿಸ್ ನಿಂದ ಬಳಲುತ್ತಿದ್ದ ದೊಸ್ಸಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಮುಸ್ತಪಾ ದೊಸ್ಸಾಗೆ ಗಲ್ಲು ಶಿಕ್ಷೆ ನೀಡಬೇಕೆಂದು ಕೋರಿ ಮಂಗಳವಾರ ಸಿಬಿಐ ಮನವಿ ಸಲ್ಲಿಸಿತ್ತು. 1993ರ ಮುಂಬಯಿ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ ದೊಸ್ಸಾಗೆ ಅಧಿಕ ಶಿಕ್ಷೆ ವಿಧಿಸಬೇಕೆಂದು ಸಿಬಿಐ ಕೋರಿತ್ತು.
1993ರ ಮಾರ್ಚ್ 12ರಂದು ನಡೆದ ಸರಣಿ ಸ್ಫೋಟದಲ್ಲಿ 257 ಜನರು ಮೃತಪಟ್ಟು, 715 ಜನರು ಗಂಭೀರವಾಗಿ ಗಾಯಗೊಂಡಿದ್ದರು. ರು. 27 ಕೋಟಿ ಮೌಲ್ಯದ ಆಸ್ತಿ ಹಾನಿಯಾಗಿತ್ತು.
ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾದ ಮುಸ್ತಫಾ ದೊಸ್ಸಾ, ಮೊಹಮ್ಮದ್ ದೊಸ್ಸಾ, ಮೊಹಮ್ಮದ್ ತಾಹಿರ್ ತಪ್ಪಿತಸ್ಥರು ಎಂದು ಮುಂಬೈನ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
diedconvictಸಾವುಅಪರಾಧಿChest pain1993 Mumbai blastsMustafa Dossaಮುಸ್ತಫಾ ದೊಸ್ಸಾ1993 ಮುಂಬಯಿ ಸ್ಫೋಟ ಪ್ರಕರಣಎದೆ ನೋವು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


