ಖೈದಿ ಹತ್ಯೆ: ಜೈಲು ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಇಂದ್ರಾಣಿ ಮುಖರ್ಜಿಗೆ ಅನುಮತಿ
ಸಹ ಖೈದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸಿಬ್ಬಂದಿಯ ವಿರುದ್ಧ ಕೇಸ್ ದಾಖಲಿಸಲು ಶೀನಾ ಬೋರಾ ಕೊಲೆ ಪ್ರಕರಣದಲ್ಲಿ....

Published On :
ಮುಂಬೈ: ಸಹ ಖೈದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸಿಬ್ಬಂದಿಯ ವಿರುದ್ಧ ಕೇಸ್ ದಾಖಲಿಸಲು ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಮಾಧ್ಯಮ ಉದ್ಯಮಿ ಇಂದ್ರಾಣಿ ಮುಖರ್ಜಿ ಅವರಿಗೆ ಬುಧವಾರ ಮುಂಬೈ ಕೋರ್ಟ್ ಅನುಮತಿ ನೀಡಿದೆ.
ಕಳೆದ ಶನಿವಾರ ಮುಂಬೈನ ಬೈಕುಲಾ ಜೈಲಿನಲ್ಲಿ ಮಹಿಳಾ ಜೈಲು ಅಧಿಕಾರಿಗಳ ಹಲ್ಲೆಯಿಂದಾಗಿ ಮಂಜುಳಾ ಶೆಟ್ಟಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲು ಇಂದು ಕೋರ್ಟ್ ಅನುಮತಿ ನೀಡಿದೆ. ಆದರೆ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿರುವ ತನ್ನ ಕಕ್ಷಿದಾರೆ ಇಂದ್ರಾಣಿ ಮುಖರ್ಜಿ ಅವರ ಮೇಲೂ ಹಲ್ಲೆ ನಡೆದಿದ್ದು, ಅವರ ಹೇಳಿಕೆ ಪಡೆದು, ವೈದ್ಯಕೀಯ ಪರೀಕ್ಷೆ ನಡೆಸಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಇಂದ್ರಾಣಿ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದರು. ಇಂದ್ರಾಣಿ ಪರ ವಕೀಲರ ಮನವಿಯನ್ನು ವಿಶೇಷ ಕೋರ್ಟ್ ತಿರಸ್ಕರಿಸಿದೆ.
ಇದಕ್ಕು ಮುನ್ನ ಮಂಜುಳಾ ಸಾವಿನ ಕುರಿತು ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದ ಇಂದ್ರಾಣಿ ಮುಖರ್ಜಿ, ಜೈಲಿನ ಸಿಬ್ಬಂದಿ ಮಂಜುಳಾ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನಾನು ಮತ್ತು ಇತರೆ ಖೈದಿಗಳು ಬಾಗಿಲಿನ ರಂಧ್ರದ ಮೂಲಕ ನೋಡಿದ್ದೇವೆ. ಆದರೆ ಇದನ್ನು ಕೋರ್ಟ್ ನಲ್ಲಿ ಹೇಳಿದರೆ ನೀವು ಅದೇ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಜೈಲು ಸಿಬ್ಬಂದಿ ಎಚ್ಚರಿಸಿರುವುದಾಗಿ ತಿಳಿಸಿದ್ದರು,
ನಿನ್ನೆಯಷ್ಟೇ ಇಂದ್ರಾಣಿ ಪರ ವಕೀಲರು ಸಹಕೈದಿ ಮಹಿಳೆ ಮೇಲೆ ಪೊಲೀಸರೇ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ಇದಕ್ಕೆ ಸಾಕ್ಷಿಯಾಗಿದ್ದ ತನ್ನ ಕಕ್ಷಿದಾರೆ ಇಂದ್ರಾಣಿ ಸತ್ಯ ಬಾಯಿಬಿಡಬಾರದು ಎಂದು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರು.
ಮಹಿಳಾ ಖೈದಿ ಸಾವಿಗೆ ತನ್ನ ಕಕ್ಷಿದಾರೆ ಇಂದ್ರಾಣಿ ಮುಖರ್ಜಿ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಈ ಸಂಬಂಧ ಕೋರ್ಟ್ ನಲ್ಲಿ ಹೇಳಿಕೆ ನೀಡಲು ಬಯಸಿದ್ದಾರೆ ಎಂದು ಇಂದ್ರಾಣಿ ಪರ ವಕೀಲ ಗುಂಜನ್ ಮಂಗಲಾ ನಿನ್ನೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಇಂದ್ರಾಣಿ ಮುಖರ್ಜಿಯನ್ನು ಮುಂಬೈ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.
ಸಹ ಖೈದಿ ಸಾವಿಗೆ ಸಂಬಂಧಿಸಿದಂತೆ ನನ್ನ ಬಳಿ ಮಹತ್ವ ಮಾಹಿತಿ ಇದ್ದು, ಅದನ್ನು ಹೇಳಬಾರದು ಎಂದು ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬಾಯಿ ಬಿಟ್ಟರೆ ತನ್ನ ಮೇಲು ಲೈಂಗಿಕ ದೌರ್ಜನ್ಯ ಎಸಗುವುದಾಗಿ ಎಚ್ಚರಿಸಿದ್ದಾರೆ ಎಂದು 44 ವರ್ಷದ ಇಂದ್ರಾಣಿ ತಮ್ಮ ವಕೀಲರ ಮೂಲಕ ಕೋರ್ಟ್ ಗೆ ತಿಳಿಸಿದ್ದರು.
ಖೈದಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಆರು ಅಧಿಕಾರಿಗಳನ್ನು ಸಹ ಸೇವೆಯಿಂದ ಅಮಾನತುಗೊಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಇಂದ್ರಾಣಿ ಮುಖರ್ಜಿIndrani MukerjeaInmate murdercomplaint against jail officialsಖೈದಿ ಹತ್ಯೆಜೈಲು ಅಧಿಕಾರಿಗಳ ವಿರುದ್ಧ ದೂರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


