ದೇಶ

ಭಾರತೀಯ ವಲಸಿಗರಿಗೆ ಒಸಿಐ ಕಾರ್ಡಿಗೆ ಅರ್ಜಿ ಸಲ್ಲಿಸಲು ಡಿ.31ರವರೆಗೆ ಅವಕಾಶ

ಭಾರತೀಯ ಮೂಲ ವ್ಯಕ್ತಿ- ಪರ್ಸನ್ ಆಫ್ ಇಂಡಿಯನ್ ಒರಿಜನ್ ಕಾರ್ಡುಗಳನ್ನು ವಿದೇಶೀ ಭಾರತೀಯ ಪ್ರಜೆ...

ಭಾರತೀಯ ವಲಸಿಗರಿಗೆ ಒಸಿಐ ಕಾರ್ಡಿಗೆ ಅರ್ಜಿ ಸಲ್ಲಿಸಲು ಡಿ.31ರವರೆಗೆ ಅವಕಾಶ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಭಾರತೀಯ ಮೂಲ ವ್ಯಕ್ತಿ- ಪರ್ಸನ್ ಆಫ್ ಇಂಡಿಯನ್ ಒರಿಜನ್ ಕಾರ್ಡುಗಳನ್ನು ವಿದೇಶೀ ಭಾರತೀಯ ಪ್ರಜೆ - ಓವರ್‍ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡಿಗೆ ಬದಲಿಸಿಕೊಳ್ಳಲು ಈ ವರ್ಷಾಂತ್ಯದವರೆಗೆ ಅವಕಾಶ ವಿಸ್ತರಿಸಲಾಗಿದೆ.
ಈ ಹಿಂದೆ ಪರ್ಸನ್ ಆಫ್ ಇಂಡಿಯಾ - ಪಿಒಐ ಕಾರ್ಡ್ ನಿಂದ ಓವರ್‍ಸೀಸ್ ಸಿಟಿಜನ್ ಆಫ್ ಇಂಡಿಯಾ - ಒಸಿಐ ಕಾರ್ಡಿಗೆ ಬದಲಿಸಿಕೊಳ್ಳುವ ಅವಕಾಶ ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳುತ್ತಿತ್ತು. 2016ರ ಮಾರ್ಚ್ 31ಕ್ಕೆ ಅಂತ್ಯಗೊಂಡಿದ್ದ ಈ ಕಾರ್ಡ್ ಬದಲಾವಣೆ ಅವಧಿಯನ್ನು ನಾಲ್ಕು ಬಾರಿ ವಿಸ್ತರಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಪಿಐಒ ಮತ್ತು ಒಸಿಐ ಎರಡೂ ಕಾಡ್‍ಗಳ ಬಳಕೆ ವಿದೇಶೀ ಪ್ರಜೆಗಳಲ್ಲಿ ಗೊಂದಲ ಮೂಡಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  
ಈ ಕಾರ್ಡುಗಳು ವಿಲೀನಗೊಂಡು ಭಾರತೀಯ ಮೂಲದ ವಿದೇಶೀ ಪ್ರಜೆಗಳಿಗೆ ಗರಿಷ್ಠ ಸಾಧ್ಯ ಅನುಕೂಲಗಳನ್ನು ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ 2014 ರಲ್ಲಿ ಘೋಷಿಸಿದ್ದರು. ವಿದೇಶೀ ಭಾರತೀಯ ಪ್ರಜೆಗಳಿಗೆ ನೆರವಾಗಲು 2002ರಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾದ ಪಿಒಐ ಕಾರ್ಡ್ ಪ್ರವಾಸ, ಕೆಲಸ ಮತ್ತು 15 ವರ್ಷ ಭಾರತದಲ್ಲಿ ನೆಲೆಸಲು ಬಳಸಬಹುದಾಗಿತ್ತು. 2005ರಿಂದ ನೀಡಲಾಗುತ್ತಿರುವ ಒಸಿಐ ಕಾರ್ಡ್‍ಗೆ ಶಾಶ್ವತ ಮಾನ್ಯತೆ ಇದ್ದು, ಪಿಒಐ ಕಾರ್ಡ್‍ಗಿಂತ ಹೆಚ್ಚಿನ ಪ್ರಯೋಜನಗಳು ಲಭ್ಯ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.