ದೇಶ

ಜಮ್ಮು-ಕಾಶ್ಮೀರ: ಶಸ್ತ್ರಾಸ್ತ್ರ ತರಬೇತಿ ಬಳಿಕ ಪಾಕ್ ನಿಂದ ಭಾರತಕ್ಕೆ ಆಗಮಿಸಿದ್ದ ಉಗ್ರನ ಬಂಧನ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದುಕೊಂಡ ಬಳಿಕ ಭಾರತಕ್ಕೆ ಆಗಮಿಸಿದ್ದ ಉಗ್ರನೊಬ್ಬನನ್ನು ಭಾರತೀಯ ಸೇನಾ ಪಡೆ ಸೋಮವಾರ ಬಂಧನಕ್ಕೊಳಪಡಿಸಿದೆ...

ಜಮ್ಮು-ಕಾಶ್ಮೀರ: ಶಸ್ತ್ರಾಸ್ತ್ರ ತರಬೇತಿ ಬಳಿಕ ಪಾಕ್ ನಿಂದ ಭಾರತಕ್ಕೆ ಆಗಮಿಸಿದ್ದ ಉಗ್ರನ ಬಂಧನ
ಸಂಗ್ರಹ ಚಿತ್ರ
Published On :
ಜಮ್ಮು: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದುಕೊಂಡ ಬಳಿಕ ಭಾರತಕ್ಕೆ ಆಗಮಿಸಿದ್ದ ಉಗ್ರನೊಬ್ಬನನ್ನು ಭಾರತೀಯ ಸೇನಾ ಪಡೆ ಸೋಮವಾರ ಬಂಧನಕ್ಕೊಳಪಡಿಸಿದೆ. 
ನಿಸಾರ್ ಶಾಹ್ ಬಂಧಿತ ಉಗ್ರನೆಂದು ಗುರ್ತಿಸಲಾಗಿದೆ. ರಜೌರಿ ಜಿಲ್ಲೆಯ ಬುಧಾನ್ ತೆಹ್ಸೀಲ್ ನಲ್ಲಿರುವ ಟರ್ಗೇನ್ ಗ್ರಾಮದ ನಿವಾಸಿಯಾಗಿದ್ದ ಶಾಹ್ 1999ರಲ್ಲಿ ಶಸ್ತ್ರಾಸ್ತ್ರ ತರಬೇತಿಗೆಂದು ಪಾಕಿಸ್ತಾನಕ್ಕೆ ತೆರಳಿದ್ದ. ಇದೀಗ ಹಲವು ವರ್ಷಗಳ ಬಳಿಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರಿದಿಂದ ನೇಪಾಳ ಮಾರ್ಗದ ಮೂಲಕ ಭಾರತಕ್ಕೆ ಅಕ್ರಮವಾಗಿ ಬಂದಿದ್ದ. 
ಈ ಕುರಿತಂತೆ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆಯ ಚುರುಕುಗೊಂಡ ಸೇನಾ ಪಡೆ ಕ್ಷಿಪ್ರ ಕಾರ್ಯಾಚರಣೆ ಉಗ್ರನನ್ನು ಬಂಧನಕ್ಕೊಳಪಡಿಸಿದೆ ಎಂದು ತಿಳಿದುಬಂದಿದೆ. 
1999ರಲ್ಲಿ ನಿಸಾರ್ ಅಕ್ರಮವಾಗಿ ಗಡಿ ದಾಟಿದ್ದ ನಿಸಾರ್ ಪಾಕಿಸ್ತಾನ ಅಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ಕೇಂದ್ರ ಸೇರಿದ್ದ. ಇದಾದ ಬಳಿಕ 2010-2013ರ ವರೆಗೂ 3 ವರ್ಷಗಳ ಕಾಲ ದುಬೈಗೆ ತೆರಳಿದ್ದ. ವೀಸಾ ಅವಧಿ ಮುಗಿದ ಬಳಿಕ ಪಿಒಕೆಗೆ ಮರಳಿದ್ದ. ಪ್ರವಾಸಿಗ ವೀಸಾ ಬಳಿಸಿ ನೇಪಾಳಕ್ಕೆ ಹೋಗಲು ತಯಾರಿ ನಡೆಸಿದ್ದ. ಇದರಂತೆ ನೇಪಾಳ ರಾಷ್ಟ್ರ ಪ್ರವೇಶಿಸಿ ತನ್ನ ಹುಟ್ಟೂರಿಗೆ ಅಕ್ರಮವಾಗಿ ಭೇಟಿ ನೀಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ನಿಸಾರ್ ನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.